ಸಂಸತ್ ಸದಸ್ಯರಾದ ಶ್ರೀರಾಮುಲು ಸಂಭ್ರಮ ನೋಡಿ

ಬಳ್ಳಾರಿ, ಮೇ 17 : ರಾಜ್ಯದ ಜನರ ತೀವ್ರ ಕುತೂಹಲ ಕೆರಳಿಸಿದ್ದ ಬಳ್ಳಾರಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ಅಮೋಘ ಗೆಲುವು ಸಾಧಿಸಿದ್ದಾರೆ. ಬಿಎಸ್ಆರ್ ಕಾಂಗ್ರೆಸ್ ಪಕ್ಷದಿಂದ ಬಿಜೆಪಿಗೆ ಮರಳಿದ್ದ ಶ್ರೀರಾಮುಲು ಬಳ್ಳಾರಿಯಲ್ಲಿ ಗೆದ್ದು ಮೊದಲ ಬಾರಿಗೆ ಸಂಸತ್ ಪ್ರವೇಶಿಸಿದ್ದಾರೆ.

2009ರಲ್ಲಿ ಬಿ.ಶ್ರೀರಾಮುಲು ಅವರ ಸಹೋದರಿ ಜೆ.ಶಾಂತಾ ಬಳ್ಳಾರಿಯಿಂದ ಗೆಲುವು ಸಾಧಿಸಿದ್ದರು. ಬಿಜೆಪಿ ತೊರೆದು ಬಿಎಸ್ಆರ್ ಕಾಂಗ್ರೆಸ್ ಕಟ್ಟಿದ್ದ ಬಿ. ಶ್ರೀರಾಮುಲು ಬಳ್ಳಾರಿ ಗ್ರಾಮಾಂತರ ಕ್ಷೇತ್ರದಿಂದ 2013ರ ವಿಧಾನಸಭೆ ಚುನಾವಣೆಯಲ್ಲಿ ಜಯಗಳಿಸಿದ್ದರು. ಲೋಕಸಭೆ ಚುನಾವಣೆ ವೇಳೆಗೆ ಬಿಜೆಪಿಗೆ ಮರಳಿದ ಅವರು ಬಳ್ಳಾರಿ ಕ್ಷೇತ್ರದಿಂದ ಸ್ಪರ್ಧಿಸಿದ್ದರು. [ಶ್ರೀರಾಮುಲು ಕೈ ಹಿಡಿದ ಬಳ್ಳಾರಿ ಜನರು]

5,34,406 ಮತಗಳನ್ನು ಪಡೆದ ಶ್ರೀರಾಮುಲು ಅವರು ಲೋಕಸಭೆ ಚುನಾವಣೆಯಲ್ಲಿ ಜಯಗಳಿಸಿ ಮೊದಲ ಬಾರಿಗೆ ಸಂಸತ್ ಪ್ರವೇಶಿಸಿದ್ದಾರೆ. ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ಎನ್.ವೈ.ಹನುಮಂತಪ್ಪ ಅವರನ್ನು 85,144ಮತಗಳ ಅಂತದಿಂದ ಸೋಲಿಸಿದ ಶ್ರೀರಾಮುಲು ಬಳ್ಳಾರಿಯಲ್ಲಿ ತಮ್ಮ ಪ್ರಾಬಲ್ಯವೇನು?ಎಂದು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಚಿತ್ರಗಳಲ್ಲಿ ನೋಡಿ ಶ್ರೀರಾಮುಲು ಸಂಭ್ರಮಾಚರಣೆ

ಬಳ್ಳಾರಿಯಯಲ್ಲಿ ಶ್ರೀರಾಮುಲು ಜಯಭೇರಿ

ಬಳ್ಳಾರಿಯಯಲ್ಲಿ ಶ್ರೀರಾಮುಲು ಜಯಭೇರಿ

2014ರ ಲೋಕಸಭೆ ಚುನಾವಣೆಯಲ್ಲಿ ಬಳ್ಳಾರಿ ಮೀಸಲು ಕ್ಷೇತ್ರದಿಂದ ಬಿ.ಶ್ರೀರಾಮುಲು ಅವರ ಜಯಗಳಿಸಿದ್ದಾರೆ. 5,34,406 ಮತಗಳನ್ನು ಪಡೆದ ಅವರು ಕಾಂಗ್ರೆಸ್ ಅಭ್ಯರ್ಥಿ ಎನ್.ವೈ.ಹನುಮಂತಪ್ಪ ಅವರನ್ನು 85,144 ಮತಗಳ ಅಂತರದಿಂದ ಸೋಲಿಸಿದರು.

ಶಾಸಕರಾಗಿದ್ದ ರಾಮುಲು ಈಗ ಸಂಸದರು

ಶಾಸಕರಾಗಿದ್ದ ರಾಮುಲು ಈಗ ಸಂಸದರು

ಮೊದಲು ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದ ಶ್ರೀರಾಮುಲು ನಂತರ ಬಿಎಸ್ಆರ್ ಕಾಂಗ್ರೆಸ್ ಪಕ್ಷ ಕಟ್ಟಿ, ಬಳ್ಳಾರಿ ಗ್ರಾಮಾಂತರ ಕ್ಷೇತ್ರದಿಂದ ವಿಧಾನಸಭೆ ಪ್ರವೇಶಿಸಿದ್ದರು. ಸದ್ಯ ಬಳ್ಳಾರಿಯಿಂದ ಜಯಗಳಿಸುವ ಮೂಲಕ ಮೊದಲ ಬಾರಿಗೆ ಸಂಸತ್ ಪ್ರವೇಶಿಸುತ್ತಿದ್ದಾರೆ.

ಪ್ರಮಾಣ ಪತ್ರ ಪಡೆದ ರಾಮುಲು

ಪ್ರಮಾಣ ಪತ್ರ ಪಡೆದ ರಾಮುಲು

ಬಳ್ಳಾರಿ ಜಿಲ್ಲಾ ಚುನಾವಣಾಧಿಕಾರಿ ಮತ್ತು ಜಿಲ್ಲಾಧಿಕಾರಿ ಅಮ್ಲಾನ್ ಆದಿತ್ಯ ಬಿಸ್ವಾಸ್ ಬಿ.ಶ್ರೀರಾಮುಲು ಅವರಿಗೆ ಗೆಲುವಿನ ಪ್ರಮಾಣಪತ್ರವನ್ನು ನೀಡಿದರು.

ಜೆ.ಶಾಂತಾ ಸಂಭ್ರಮ

ಜೆ.ಶಾಂತಾ ಸಂಭ್ರಮ

ಬಳ್ಳಾರಿ ಕ್ಷೇತ್ರದ ಮಾಜಿ ಸಂಸದೆ ಮತ್ತು ಬಿ.ಶ್ರೀರಾಮುಲು ಅವರ ಸಹೋದರಿ ಜೆ.ಶಾಂತಾ ಶ್ರೀರಾಮುಲು ಅವರ ಗೆಲುವನ್ನು ಮಹಿಳೆಯರೊಂದಿಗೆ ಸೇರಿ ಸಂಭ್ರಮಿಸಿದರು.

ಸೋಮಶೇಖರ ರೆಡ್ಡಿ ಸಂತಸ

ಸೋಮಶೇಖರ ರೆಡ್ಡಿ ಸಂತಸ

ಕೆಎಂಎಫ್ ಅಧ್ಯಕ್ಷ ಸೋಮಶೇಖರ ರೆಡ್ಡಿ ಬಿ.ಶ್ರೀರಾಮುಲು ಅವರ ಗೆಲುವನ್ನು ನೂರಾರು ಕಾರ್ಯರ್ತರೊಂದಿಗೆ ಸೇರಿ ಆಚರಿಸಿದರು.

ಕಾರ್ಯಕರ್ತರ ಬೈಕ್ ಜಾಥಾ

ಕಾರ್ಯಕರ್ತರ ಬೈಕ್ ಜಾಥಾ

ಬಿಜೆಪಿ ಕಾರ್ಯರ್ತರು ಶ್ರೀರಾಮುಲು ಅವರ ಗೆಲುವುವನ್ನು ಬೈಕ್ ಜಾಥಾ ಮಾಡುವ ಮೂಲಕ ಆಚರಿಸಿದರು.

ಮುಂದಿದೆ ಉಪ ಚುನಾವಣೆ

ಮುಂದಿದೆ ಉಪ ಚುನಾವಣೆ

ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಶಾಸಕರಾಗಿದ್ದ ಬಿ.ಶ್ರೀರಾಮುಲು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಚುನಾವಣೆಗೆ ಸ್ಪರ್ಧಿಸಿದ್ದರು. ಆದ್ದರಿಂದ ಮುಂದಿನ ಆರು ತಿಂಗಳಿನಲ್ಲಿ ಗ್ರಾಮಾಂತರ ಕ್ಷೇತ್ರಕ್ಕೆ ಉಪ ಚುನಾವಣೆ ಎದುರಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+