ಬಳ್ಳಾರಿ: ಆಸ್ಪತ್ರೆಗೆ ಬಂದ ಮಹಿಳೆಯನ್ನು ಮಂಚಕ್ಕೆ ಕರೆದ ವೈದ್ಯ
ಬಳ್ಳಾರಿ, ಏಪ್ರಿಲ್ 30 : ಮಗನ ಅಂಗವೈಕಲ್ಯ ದೃಢೀಕರಣ ಪತ್ರ ಪಡೆಯಲು ಬಂದಿದ್ದ ಮಹಿಳೆಗೆ ಬಳ್ಳಾರಿ ವಿಮ್ಸ್ ಆಸ್ಪತ್ರೆಯ ವೈದ್ಯನೊಬ್ಬ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂಬ ಆರೋಪ ಬೆಳಕಿಗೆ ಬಂದಿದೆ.
ತನ್ನ ಮಗನ ಅಂಗವೈಕಲ್ಯ ದೃಢೀಕರಣ ಪತ್ರ ಪಡೆಯಲು ಬಂದಿದ್ದ ಮಹಿಳೆಯ ಸೀರೆಯನ್ನು ಹಿಡಿದು ತನ್ನ ಜತೆ ಸಹರಿಸುವಂತೆ ವಿಮ್ಸ್ ಆಸ್ಪತ್ರೆಯ ಇಎನ್ ಟಿ ವಿಭಾಗದ ವೈದ್ಯ ಸೋಮಣ್ಣ ಪೀಡಿಸಿದ್ದಾನೆಂದು ಈ ಬಗ್ಗೆ ಸ್ವತಃ ಮಹಿಳೆಯೇ ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

ನನ್ನ ಮಗನ ಅಂಗವೈಕಲ್ಯ ದೃಢೀಕರಣ ಪತ್ರಕ್ಕಾಗಿ ನಾನು ಆಸ್ಪತ್ರೆಗೆ ಆಗಮಿಸಿದ್ದೆ, ಆದರೆ ವೈದ್ಯ ಸೋಮಣ್ಣ ನನ್ನ ಜೊತೆ ಸಹಕರಿಸಿದರೆ ನಿನ್ನ ಮಗನಿಗೆ ಯಾವುದೇ ಪರೀಕ್ಷೆ ನಡೆಸದೇ ಅಂಗವೈಕಲ್ಯ ಪ್ರಮಾಣ ನೀಡುತ್ತೇನೆ ಎಂದು ಹೇಳಿ, ಈ ಸಂದರ್ಭದಲ್ಲಿ ಸೀರೆಗೆ ಕೈ ಹಾಕಿದನು ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.
ಈ ಬಗ್ಗೆ ದೂರು ದಾಖಲಾಗುತ್ತಿದ್ದಂತೆ ವೈದ್ಯ ಸೋಮಣ್ಣ ನಾಪತ್ತೆಯಾಗಿದ್ದಾನೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಸೋಮಣ್ಣನ ಹುಡುಕಾಡ ನಡೆಸಿದ್ದಾರೆ.












Click it and Unblock the Notifications