ಸಿರುಗುಪ್ಪದಲ್ಲಿ ಈಜಲು ಹೋಗಿ ಮೊಸಳೆ ಬಾಯಿಗೆ ಸಿಲುಕಿದ ವ್ಯಕ್ತಿ
ಬಳ್ಳಾರಿ, ಮಾರ್ಚ್ 18: ಈಜಲು ಹೋಗಿದ್ದ ವ್ಯಕ್ತಿಯೊಬ್ಬರು ಮೊಸಳೆಗೆ ಬಲಿಯಾಗಿರುವ ಘಟನೆ ಬಳ್ಳಾರಿಯಲ್ಲಿ ನಿನ್ನೆ ನಡೆದಿದೆ.
Recommended Video
Sadananda Gowda should stop his crocodile tears, says JDS Bhojegowda | Oneindia Kannada
ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ವಿನಾಯಕ ಕ್ಯಾಂಪ್ ಬಳಿಯ ತುಂಗಭದ್ರಾ ನದಿ ದಡದಲ್ಲಿ ಈ ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನು ರೆಹಮತ್ ಅಲಿ (30) ಎಂದು ಗುರುತಿಸಲಾಗಿದೆ.
ಬೆಳಗಿನ ಜಾವ ರೆಹಮತ್ ಅವರು ವಿನಾಯಕ ಕ್ಯಾಂಪ್ ಬಳಿಯ ತುಂಗಭದ್ರಾ ನದಿಯಲ್ಲಿ ಸ್ನಾನಕ್ಕೆ ಹೋಗಿದ್ದರು. ಸ್ನಾನಕ್ಕೆ ಹೋಗಿ ಎಷ್ಟು ಹೊತ್ತಾದರೂ ರೆಹಮತ್ ಮನೆಗೆ ಬಾರದ ಕಾರಣ ಅನುಮಾನಗೊಂಡ ಮನೆಯವರು ನದಿಯಲ್ಲಿ ಹುಡುಕಾಟ ನಡೆಸಿದ್ದಾರೆ. ಕೆಲ ಗಂಟೆಗಳ ಕಾಲ ಹುಡುಕಾಟದ ಬಳಿಕ ರೆಹಮತ್ ಮೃತ ದೇಹ ಪತ್ತೆಯಾಗಿದೆ.

ದೇಹದ ಬಹುತೇಕ ಭಾಗವನ್ನು ಮೊಸಳೆ ಕಚ್ಚಿ ತಿಂದಿದೆ. ಈ ಸಂಬಂಧ ಸಿರುಗುಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಗನನ್ನು ಕಳೆದುಕೊಂಡ ಹೆತ್ತವರು ಆಕ್ರಂದನ ಮುಗಿಲು ಮುಟ್ಟಿತ್ತು.












Click it and Unblock the Notifications