ಬಳ್ಳಾರಿ: ಒಂದೇ ದಿನ 100ಕ್ಕೂ ಹೆಚ್ಚು ಜನರಿಂದ ಅಂಗಾಂಗ ದಾನದ ನೋಂದಣಿ

ಬಳ್ಳಾರಿ, ಜನವರಿ 19: ಅಂಗಾಂಗ ದಾನದ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಸರ್ಕಾರಗಳು, ಸ್ವಯಂ ಸೇವಾ ಸಂಸ್ಥೆಗಳು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ. ಬಳ್ಳಾರಿ ಜಿಲ್ಲೆಯಲ್ಲಿ 3,700 ಜನರು ಅಂಗಾಂಗ ದಾನಕ್ಕೆ ನೋಂದಣಿ ಮಾಡಿಸಿದ್ದು, ಜಿಲ್ಲೆ ರಾಷ್ಟ್ರ ಮಟ್ಟದಲ್ಲಿ ಎರಡನೇ ಸ್ಥಾನದಲ್ಲಿದೆ.

ಬಳ್ಳಾರಿ ಜಿಲ್ಲೆಯಲ್ಲಿ ಆಯುಷ್ಮಾನ್ ಭವ ಆರೋಗ್ಯ ಕಾರ್ಯಕ್ರಮದಡಿ ಅಂಗಾಂಗ ದಾನ ನೋಂದಣಿ ಅಭಿಯಾನ ನಡೆಯುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ವೈ. ರಮೇಶ್ ಬಾಬು ತಿಳಿಸಿದ್ದಾರೆ.

More Than 100 People Register For Organ Donation In Ballari

ನಗರದ ಕೌಲ್ ಬಜಾರ್ ವ್ಯಾಪ್ತಿಯಲ್ಲಿ ಬುಧವಾರ ಒಂದೇ ದಿನ 100ಕ್ಕೂ ಅಧಿಕ ಜನರು ತಮ್ಮ ಅಂಗಾಂಗ ದಾನ ನೋಂದಣಿ ಮಾಡಿಕೊಂಡಿದ್ದಾರೆ. ಜನತೆಯು ಸಾಮಾನ್ಯವಾಗಿ ಹಿಂದೇಟು ಹಾಕುವ ಅಂಗಾಂಗ ದಾನ ನೋಂದಣಿಗೆ ಜಿಲ್ಲಾ ಆರೋಗ್ಯ ಇಲಾಖೆ ವತಿಯಿಂದ ನಿರಂತರ ಅರಿವು ಮತ್ತು ಮನವರಿಕೆ ಮಾಡುವ ಕಾರ್ಯ ನಡೆಯುತ್ತಿದೆ.

ವೈದ್ಯಕೀಯ ತಂಡದ ಸಾಧನೆ; ವೈದ್ಯಾಧಿಕಾರಿ ಡಾ. ಸುರೇಖಾ ನೇತೃತ್ವದಲ್ಲಿ ಒಂದೇ ದಿನ 102 ಜನರು ಅಂಗಾಂಗ ದಾನಕ್ಕೆ ನೋಂದಣಿ ಮಾಡಿಸುವ ಮೂಲಕ ಬ್ರೂಸ್ ಪೇಟೆ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಕೀಯ ತಂಡ ವಿಭಿನ್ನ ಸಾಧನೆ ಮಾಡಿದೆ.

ಬಳ್ಳಾರಿ ನಗರದ ಮುಸ್ಲಿಂ ಸಮುದಾಯ ಹೆಚ್ಚಿರುವ ಕೌಲ್‍ಬಜಾರ್ ವ್ಯಾಪ್ತಿಯ, ಬಟ್ಟಿ ಏರಿಯಾ, ಕೊರಚಗೇರಿ, ದೋಬಿ ಘಾಟ್‍ನಲ್ಲಿ ಆರೋಗ್ಯ ಇಲಾಖೆ ತಂಡದಿಂದ ನಿರಂತರ ಅರಿವು ಮೂಡಿಸುವ ಮೂಲಕ ಅಧಿಕ ಜನ ನೋಂದಣಿ ಮಾಡಿಕೊಳ್ಳುವಂತೆ ಮಾಡಲಾಗಿದೆ.

ಸಿಬ್ಬಂದಿಗಳಾದ ಎಸ್. ತುಳಸಿ, ಚೈತ್ರಾ ಡಿ. ಎಸ್., ಹಾಲಮ್ಮ, ಅರುಣಾ ಜ್ಯೋತಿ, ಪ್ರಸನ್ನ ಜ್ಯೋತಿ, ಮರಿಸ್ವಾಮಿ, ದೀಪಾ, ಶಿಲ್ಪಾ, ಗಂಗಾಧರ ಸೇರಿದಂತೆ ಆಶಾ ಕಾರ್ಯಕರ್ತೆಯರು ಪ್ರತಿಯೊಬ್ಬರಿಗೂ ಜಾಗೃತಿ ಮತ್ತು ಮನವರಿಕೆ ಮಾಡಿ ನೋಂದಣಿ ಮಾಡಿಸಿದ್ದಾರೆ.

ಮರಣಾನಂತರ 6 ಗಂಟೆಯ ಒಳಗೆ ದೇಹದ ಅಂಗಾಂಗಗಳಲ್ಲಿನ ಕಣ್ಣು, ಹೃದಯ, ಕಿಡ್ನಿ, ಲೀವರ್, ಮೇದೋಜಿರಕಗ್ರಂಥಿ, ಕರಳು ದಾನ ಮಾಡಬಹುದು. ಮುಖ್ಯವಾಗಿ ಕುಟುಂಬ ಸದಸ್ಯರ ಒಪ್ಪಿಗೆ ಮೇರೆಗೆ ಈ ಅಂಗಗಳನ್ನು ದಾನ ಮಾಡಬಹುದಾಗಿದೆ ಎಂದು ಡಾ. ರಮೇಶ್ ಬಾಬು ತಿಳಿಸಿದ್ದಾರೆ.

ನೋಂದಣಿ ಮಾಡಿಕೊಳ್ಳುವುದು ಹೇಗೆ?; 18 ವರ್ಷ ತುಂಬಿದ ಪ್ರತಿಯೊಬ್ಬರೂ ತಮ್ಮ ದೇಹದ ಅಂಗಾಂಗ ದಾನ ಮಾಡಲು ನೋಂದಣಿ ಮಾಡಿಕೊಳ್ಳಬಹುದಾಗಿದೆ. ಮೊಬೈಲ್ ಮೂಲಕವೂ ಅಂಗಾಂಗ ದಾನ ನೋಂದಣಿಗೆ ಅವಕಾಶವಿದೆ.

ಇದಕ್ಕಾಗಿ ಅಂಡ್ರಾಯ್ಡ್‌ ಮೊಬೈಲ್‌ನ ಗೂಗಲ್‍ನಲ್ಲಿ NOTTO.ABDM.GOV.IN ಎಂದು ಟೈಪ್ ಮಾಡಿ ಲಿಂಕ್ ಒಪನ್ ಮಾಡಬೇಕು. ನಂತರ Registration for Pledge ನ್ನು Open ಮಾಡಿದ ನಂತರ ಕೇಳುವ ವಿವರಣೆಯಲ್ಲಿ Adhaar Number entry ಮಾಡಬೇಕು. Verify ಯನ್ನು Click ಮಾಡಬೇಕು. ನಂತರದಲ್ಲಿ OTP ಯನ್ನು ಹಾಕಿದ ನಂತರ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು.

ನೋಂದಾವಣೆ ಮಾಡಿಸಿದವರ ಮಾಹಿತಿಯನ್ನು ಸ್ಕ್ರೋಲ್ ಮಾಡಿದಾಗ ಅಲ್ಲಿ ಕೇಳುವಂತೆ ತಂದೆ/ ಗಂಡ ಮತ್ತು ತಾಯಿಯ ಹೆಸರು ನಮೂದಿಸಬೇಕು. ನಮ್ಮ ರಕ್ತದ ಗುಂಪು ನಮೂದಿಸಬೇಕು. ಅಲ್ಲಿ ದಾನಕ್ಕೆ ಆಯ್ಕೆ ಮಾಡುವ ಅಂಗಗಳನ್ನು ಆಯ್ಕೆ ಮಾಡಿಕೊಳ್ಳಬೇಕು.

ತುರ್ತು ಸಂಪರ್ಕಕ್ಕಾಗಿ ಕುಟುಂಬದ ಸದಸ್ಯರ ಹೆಸರು ಹಾಗೂ ಮೊಬೈಲ್ ನಂಬರ್ ನೋಂದಾಯಿಸಬೇಕು. ಕೊನೆಯಲ್ಲಿ Motivation ಮಾಡಿದ Optionನಲ್ಲಿ ಎರಡು ಬಾರಿಯು NATTO ವನ್ನು ಆಯ್ಕೆ ಮಾಡಿ SUBMIT ಮಾಡಬೇಕು. ನಂತರದಲ್ಲಿ ಸರ್ಟಿಫಿಕೇಟ್ ಡೌನ್‍ಲೊಡ್ ಮಾಡಿಕೊಳ್ಳಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+