Get Updates
Get notified of breaking news, exclusive insights, and must-see stories!

Lok Sabha Election 2024 Result: ಬಿ. ಶ್ರೀ ರಾಮುಲು, ಸಹೋದರಿ ಜೆ. ಶಾಂತ ಇಬ್ಬರಿಗೂ ಸೋಲು

ಬಳ್ಳಾರಿ, ಜೂನ್ 04; ಲೋಕಸಭೆ ಚುನಾವಣೆ 2024ರಲ್ಲಿ ಬಿಜೆಪಿ ನಾಯಕ ಬಿ. ಶ್ರೀ ರಾಮುಲು ಮತ್ತು ಅವರ ಸಹೋದರಿ ಜೆ. ಶಾಂತ ಇಬ್ಬರೂ ಸೋಲು ಕಂಡಿದ್ದಾರೆ. ಇಬ್ಬರೂ ಸಹ ಬೇರೆ-ಬೇರೆ ಪಕ್ಷದಿಂದ ಬೇರೆ-ಬೇರೆ ರಾಜ್ಯಗಳಿಂದ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡಿದ್ದರು.

ಮಂಗಳವಾರ ಲೋಕಸಭೆ ಚುನಾವಣೆ ಮತ ಎಣಿಕೆ ನಡೆದು ಫಲಿತಾಂಶ ಘೋಷಣೆಯಾಗಿದೆ. ಬಿಜೆಪಿ ಅಭ್ಯರ್ಥಿಯಾಗಿ ಬಿ. ಶ್ರೀರಾಮುಲು ಕರ್ನಾಟಕದ ಬಳ್ಳಾರಿ ಕ್ಷೇತ್ರದಿಂದ ಕಣಕ್ಕಿಳಿದಿದ್ದರು. ಬಿ. ಶ್ರೀರಾಮುಲು ಸಹೋದರಿ ಜೆ. ಶಾಂತ ಆಂಧ್ರ ಪ್ರದೇಶದ ಮುಖ್ಯಮಂತ್ರಿ ವೈ. ಎಸ್. ಜಗನ್ ಮೋಹನ್ ರೆಡ್ಡಿ ನೇತೃತ್ವದ ಯುವಜನ ಶ್ರಮಿಕ ರೈತ ಕಾಂಗ್ರೆಸ್‌ (ವೈಎಸ್‌ಆರ್‌ಸಿಪಿ) ಪಕ್ಷದಿಂದ ಹಿಂದೂಪುರ ಕ್ಷೇತ್ರದಲ್ಲಿ ಕಣಕ್ಕಿಳಿದಿದ್ದರು.

Lok Sabha Election 2024 Result B Sriramulu And His Sister J Shantha Lost

ಬಳ್ಳಾರಿಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಇ. ತುಕಾರಾಂ 730845 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಬಳ್ಳಾರಿ ಎಸ್‌ಟಿ ಮೀಸಲು ಕ್ಷೇತ್ರವಾಗಿದ್ದು, ಬಿ. ಶ್ರೀರಾಮುಲು ಬಿಜೆಪಿಯಿಂದ ಕಣದಲ್ಲಿದ್ದರು, ಅವರು 631853 ಮತಗಳನ್ನು ಪಡೆದು ಸೋಲು ಕಂಡರು.

ವೈಎಸ್‌ಆರ್‌ಸಿಪಿ ಪಕ್ಷದ ಅಭ್ಯರ್ಥಿ ಜೆ. ಶಾಂತಾ ಹಿಂದೂಪುರದಲ್ಲಿ 578320 ಮತಗಳನ್ನು ಪಡೆದು ಸೋಲು ಅನುಭವಿಸಿದ್ದಾರೆ. ಅವರ ಎದುರಾಳಿ ಟಿಡಿಪಿಯ ಬಿ. ಕೆ. ಪಾರ್ಥಸಾರಥಿ 706898 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ.

ಜೆ. ಶಾಂತಾ ಬಿಜೆಪಿ ಅಭ್ಯರ್ಥಿಯಾಗಿ ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಕರ್ನಾಟಕದಿಂದ ಸಂಸದರಾಗಿ ಆಯ್ಕೆಯಾಗಿದ್ದರು. ಈ ಬಾರಿಯ ಲೋಕಸಭೆ ಚುನಾವಣೆ ದಿನಾಂಕ ಘೋಷಣೆಯಾಗುವ ಕೆಲವು ದಿನಗಳ ಮೊದಲು ವೈಎಸ್‌ಆರ್‌ಸಿಪಿ ಪಕ್ಷವನ್ನು ಸೇರಿ ಹಿಂದೂಪುರದಿಂದ ಅಭ್ಯರ್ಥಿಯಾಗಿದ್ದರು.

ಶ್ರೀರಾಮುಲು ಪ್ರತಿಕ್ರಿಯೆ: ಲೋಕಸಭೆ ಚುನಾವಣೆ ಸೋಲಿನ ಬಳಿಕ ಪ್ರತಿಕ್ರಿಯೆ ನೀಡಿರುವ ಬಿ. ಶ್ರೀರಾಮುಲು, 'ಆತ್ಮೀಯ ಮತದಾರ ಬಂಧುಗಳೇ..! ಚುನಾವಣೆಯಲ್ಲಿ ಸೋಲು- ಗೆಲುವು ಸಹಜ,ಆದರು ಕೂಡ ನನ್ನ ಮೇಲೆ ನಂಬಿಕೆ ಇರಿಸಿ,ಮತದಾನ ಮಾಡಿದ ಬಳ್ಳಾರಿ ವಿಜಯನಗರ ಲೋಕಸಭಾ ಕ್ಷೇತ್ರದ ಮತದಾರ ಬಂಧುಗಳಿಗೆ ಹೃದಯಪೂರ್ವಕ ಧನ್ಯವಾದಗಳು' ಎಂದು ಹೇಳಿದ್ದಾರೆ.

'ಚುನಾವಣೆಯಲ್ಲಿ ಸೋತೆ ಎಂದ ಮಾತ್ರಕ್ಕೆ ನಿಮ್ಮಿಂದ ದೂರ ಉಳಿಯುವುದಿಲ್ಲ, ನಿರಂತರವಾಗಿ ನಿಮ್ಮ ಸೇವೆಯಲ್ಲಿ ನನ್ನನ್ನು ನಾನು ತೊಡಗಿಸಿಕೊಂಡು ನಿಮ್ಮ ಸೇವೆ ಮಾಡುತ್ತೇನೆ. ಚುನಾವಣೆ ದಿನಾಂಕ ಘೋಷಣೆ ಆದಾಗಿನಿಂದ ನಿರಂತರವಾಗಿ ಶ್ರಮಿಸಿದ ಪಕ್ಷದ ಕಾರ್ಯಕರ್ತರಿಗೆ, ನಾಯಕರಿಗೆ, ಪದಾಧಿಕಾರಿಗಳಿಗೆ ಹಾಗೂ ಬಳ್ಳಾರಿ ವಿಜಯನಗರ ಲೋಕಸಭಾ ಕ್ಷೇತ್ರದ ಜನತೆಗೆ, ಮಾಧ್ಯಮ ಮಿತ್ರರಿಗೆ ಹೃದಯಪೂರ್ವಕ ಕೃತಜ್ಞತೆಗಳು' ಎಂದು ತಿಳಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+