ಕುಡಿಯುವ ನೀರಿನ ಘಟಕಗಳಿಗೆ ಬೀಗ ಹಾಕಿದ ಆರೋಗ್ಯ ಅಧಿಕಾರಿಗಳು

ಬಳ್ಳಾರಿ, ಜನವರಿ 25: ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ನಗರದಲ್ಲಿ ಆರೋಗ್ಯ ಅಧಿಕಾರಿಗಳ ತಂಡ ದಿಢೀರ್ ದಾಳಿ ಮಾಡಿ ಅಕ್ರಮ ಕುಡಿಯುವ ನೀರಿನ ಘಟಕಗಳಿಗೆ ಬೀಗಮುದ್ರೆ ಹಾಕಿದ್ದಾರೆ.

ಸಿರಗುಪ್ಪ ನಗರದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳೆಂಬ ಹೆಸರಿನೊಂದಿಗೆ ಎಲ್ಲೆಂದರಲ್ಲಿ ಸಂಘ-ಸಂಸ್ಥೆಗಳ ಹೆಸರನ್ನು ಹಾಕಿ ನೀರಿನ ಘಟಕಗಳನ್ನು ಸ್ಥಾಪನೆ ಮಾಡಿದ್ದರು.

ಸೂಕ್ತ ಪರವಾನಿಗೆ ಹಾಗೂ ಸಂಬಂಧಪಟ್ಟ ಇಲಾಖೆಗಳ ಮಾನದಂಡಗಳ ಪ್ರಕಾರ ಶುದ್ಧೀಕರಿಸದ ನೀರನ್ನು ಟಾಟಾ ಏಸ್ ಮತ್ತು ಆಟೋಗಳಲ್ಲಿ ಟ್ಯಾಂಕರ್ ತುಂಬಿಕೊಂಡು, ಧ್ವನಿ ವರ್ಧಕಗಳ ಮೂಲಕ ಮನೆಮನೆಗೆ ಶುದ್ಧ ಕುಡಿಯುವ ನೀರು ಎಂದು ಮಾರಾಟ ಮಾಡುವವರ ಸಂಖ್ಯೆ ಹೆಚ್ಚಾಗಿತ್ತು.

Lockout Drinking Water Units By Health Officials In Ballary

ಇದರಿಂದ ನಷ್ಟ ಹೊಂದಿ ರೋಸಿ ಹೋಗಿದ್ದ ಐಎಸ್ಐ ಘಟಕಗಳ ಮಾಲೀಕರು ನ್ಯಾಯಾಲಯದಲ್ಲಿ ದಾವೆ ಹೂಡಿ ಅಕ್ರಮ ನೀರಿನ ಘಟಕಗಳ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯ ಮಾಡಿದ್ದರು.

ಈ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮಕ್ಕಾಗಿ ಜಿಲ್ಲಾ ಆಹಾರ ಸುರಕ್ಷತಾ ಇಲಾಖೆ, ವಿದ್ಯುತ್ ಇಲಾಖೆಯ ನೌಕರರು ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳು ಏಕಕಾಲಕ್ಕೆ ತಂಡ ರಚಿಸಿಕೊಂಡು ಘಟಕಗಳ ಮೇಲೆ ದಿಢೀರ್ ದಾಳಿ ನಡೆಸಿದ್ದಾರೆ.

Lockout Drinking Water Units By Health Officials In Ballary

ದಾಳಿ ಸಮಯದಲ್ಲಿ ಪರಿಶೀಲನೆ ಮಾಡಿ ಅಕ್ರಮ ಕಂಡು ಬಂದ ಆರು ಘಟಕಗಳ ಮೇಲೆ ಕ್ರಮ ಜರುಗಿಸಿದ್ದು, ಅದರ ಜೊತೆಗೆ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಿ ಘಟಕಗಳಿಗೆ ಬೀಗ ಹಾಕಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+