ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಾವು ಒಟ್ಟಾಗಿ ಕೆಲಸ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತರೋಣ: ಡಿಕೆಶಿ ಕರೆ

By ಬಳ್ಳಾರಿ ಪ್ರತಿನಿಧಿ
|
Google Oneindia Kannada News

ಬಳ್ಳಾರಿ, ನವೆಂಬರ್ 23: ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದೆಲ್ಲೆಡೆ ನಾವೆಲ್ಲರೂ ಒಟ್ಟಾಗಿ ಪಕ್ಷ ಸಂಘಟನೆ ಮಾಡುವ ಮೂಲಕ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರೋಣ. ಇದಕ್ಕಾಗಿ ನಾನು ವಿಜಯನಗರದಿಂದ ಪ್ರವಾಸ ಆರಂಭ ಮಾಡಿದ್ದು, ಇದು ಕಾಂಗ್ರೆಸ್ ಪಾಲಿಗೆ ವಿಜಯದ ನಡೆಯಾಗಲಿದೆ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.

ಭಾನುವಾರ ಹೊಸಪೇಟೆ ನಗರದಲ್ಲಿ ಜಿಲ್ಲಾ ಕಾಂಗ್ರೆಸ್ ಹಮ್ಮಿಕೊಂಡಿದ್ದ ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, "ಕಳೆದ ಎಲ್ಲಾ ಚುನಾವಣೆಗಳಲ್ಲಿ ಗೆಲುವು ಸಾಧಿಸಿದ ಶಾಸಕರು, ಪರಾಜಿತರು, ಜಿಲ್ಲಾಧ್ಯಕ್ಷರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಬೂತ್‌ ಮಟ್ಟದ ಕಾರ್ಯಕರ್ತರ ಶ್ರಮ ಇಂದು ಇಲ್ಲಿ ಸೇರಿದ್ದನ್ನು ನೋಡಿದರೆ ತಿಳಿಯುತ್ತದೆ. ಎಲ್ಲಾ ಹಂತದ ನಾಯಕರು ಜನರನ್ನು ಸೇರಿಸುತ್ತಾರೆ. ಆದರೆ ಪಕ್ಷದ ಬಲವರ್ಧನೆ ಆಗುತ್ತಿಲ್ಲ. ಈಗ ಇರುವ ಆತ್ಮವಿಶ್ವಾಸ ಬರುವ ಚುನಾವಣೆಗಳಲ್ಲಿ ಇರಬೇಕು ಎಂದು ಹೇಳಿದರು.

"ಕಾಂಗ್ರೆಸ್ ಸೇರಲು ಬೇರೆ ಪಕ್ಷದ ನಾಯಕರು ನನ್ನ ಬಳಿ ಬಂದಿದ್ದಾರೆ''

ಸಾಮಾನ್ಯ ಕಾರ್ಯಕರ್ತ

ಸಾಮಾನ್ಯ ಕಾರ್ಯಕರ್ತ

ಬಳ್ಳಾರಿ ಜಿಲ್ಲೆಯ ಹತ್ತೂ ಕ್ಷೇತ್ರಗಳಲ್ಲೀ ಪಕ್ಷ ಗೆಲ್ಲುತ್ತೇವೆ ಎಂಬ ಸಂದೇಶವನ್ನು ಇಡೀ ರಾಜ್ಯ ಕಾಂಗ್ರೆಸ್ ಪಕ್ಷಕ್ಕೆ ಬಳ್ಳಾರಿ ಕಾರ್ಯಕರ್ತರು ತೋರಿಸಿದ್ದೀರಿ. ನಮ್ಮದು ಕೇಡರ್ ಬೇಸ್ ಪಾರ್ಟಿ ಆಗಬೇಕಿದೆ. ಆ ಮೂಲಕ ಇನ್ನಷ್ಟೂ ಪಕ್ಷ ಗಟ್ಟಿ ಆಗುವಂತೆ ಮಾಡಬೇಕು' ಎಂದು ಮನವಿ ಮಾಡಿದರು. "ಕೆಪಿಸಿಸಿ ಅಧ್ಯಕ್ಷನಾದರೂ ಓರ್ವ ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷಕ್ಕಾಗಿ ದುಡಿಯಲು ನಾನು ಸಿದ್ಧ. ನಮ್ಮಗಳ ಚುನಾವಣೆ ವೇಳೆ ನಮ್ಮ ಗೆಲುವಿಗಾಗಿ ನೀವು ಹೇಗೆ ಶ್ರಮಿಸುತ್ತೀರೋ ಅದೇ ರೀತಿ ಮುಂಬರುವ ಜಿಪಂ, ತಾಪಂ ಹಾಗೂ ಗ್ರಾಪಂ ಚುನಾವಣೆಗಳಲ್ಲಿ ನಿಮ್ಮ ಗೆಲುವಿಗಾಗಿ ಶ್ರಮಿಸುತ್ತೇವೆ' ಎಂದರು.

ಸೋಲನ್ನು ಒಪ್ಪಿಕೊಳ್ಳೋಣ

ಸೋಲನ್ನು ಒಪ್ಪಿಕೊಳ್ಳೋಣ

"ಉಪ ಚುನಾಣೆಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಆದ ಸೋಲನ್ನು ಒಪ್ಪಿಕೊಳ್ಳೋಣ. ಆ ಚುನಾವಣೆಗಳಲ್ಲಿ ಪಕ್ಷ ಯಾಕೆ ಸೋತಿತು ಎಂದು ಚಿಂತಿಸಬೇಡಿ. ಅದರ ಕುರಿತು ನಾವು ತೀರ್ಮಾನ ಮಾಡುತ್ತೇವೆ. ಆದರೆ ಈ ಬಾರಿ ಎರಡೂ ಕ್ಷೇತ್ರಗಳಲ್ಲೂ ಎಲ್ಲಾ ಹಂತದ ನಾಯಕರು ಒಗ್ಗಟ್ಟಾಗಿ ಕೆಲಸ ಮಾಡಿದ್ದು ಸಮಾಧಾನ ತರಿಸಿದೆ. ಬಳ್ಳಾರಿ ಲೋಕಸಭಾ ಉಪ ಚುನಾವಣೆಯಲ್ಲಿ ನಮ್ಮ ಕಾರ್ಯಕರ್ತರು ಶ್ರಮಿಸಿದ ಫಲವಾಗಿ ಉಗ್ರಪ್ಪ ಅವರು ಲಕ್ಷ ಮತಗಳ ಅಂತರದಿಂದ ಗೆದ್ದರು. ಇದಕ್ಕೆಲ್ಲ ನಿಮ್ಮ ಶ್ರಮವೇ ಕಾರಣ ಎಂದರು.

ದುಡಿಯುವವರಿಗೆ ಮಾತ್ರ ಅವಕಾಶ

ದುಡಿಯುವವರಿಗೆ ಮಾತ್ರ ಅವಕಾಶ

"ಮಸ್ಕಿ ಕ್ಷೇತ್ರದಲ್ಲಿ ಬಸನಗೌಡ ತುರ್ವಿಹಾಳ ಅಧಿಕೃತವಾಗಿ ಸೋಮವಾರ ಪಕ್ಷ ಸೇರಲಿದ್ದಾರೆ. ಕಾಂಗ್ರೆಸ್ ಎಂದರೆ ಅದು ದೇಶದ ಶಕ್ತಿಯಾಗಿದೆ. ಬಿಜೆಪಿ, ಜೆಡಿಎಸ್ ನವರು ಕಾಂಗ್ರೆಸ್ ಸೇರಲು ಅನೇಕರು ನನ್ನನ್ನು ಭೇಟಿ ಆಗಿದ್ದಾರೆ. ಆಯಾ ಜಿಲ್ಲೆಗಳ ಹಿರಿಯ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷಕ್ಕೆ ಸೇರಿಸಿಕೊಳ್ಳುತ್ತೇವೆ. ಟಿಕೆಟ್ ಕೊಡಲೇಬೇಕು ಎನ್ನುವವರಿಗೆ ಪಕ್ಷದಲ್ಲಿ ಅವಕಾಶವಿಲ್ಲ. ಆದರೆ ಪಕ್ಷದ ಸಿದ್ಧಾಂತ, ತತ್ವಗಳಿಗೆ ಬದ್ಧರಾಗಿದ್ದು, ದುಡಿಯುವವರಿಗೆ ಮಾತ್ರ ಅವಕಾಶ ನೀಡಲಾಗುವುದು' ಎಂದು ಸ್ಪಷ್ಟಪಡಿಸಿದರು.

"ಸಿಎಎ, ಎನ್.ಆರ್.ಸಿ ಜಾರಿಗೆ ತಂದು ಬಿಜೆಪಿ ದೇಶವನ್ನು ಇಬ್ಭಾಗ ಮಾಡುತ್ತಿದ್ದಾರೆ. ಆದರೆ ಅಂಬೇಡ್ಕರ್ ಅವರ ಸಂವಿಧಾನದ ಆಶಯದಂತೆ ಮತ್ತೊಮ್ಮೆ ದೇಶವನ್ನು ಒಂದು ಮಾಡುವ ಕೆಲಸ ಮಾಡೋಣ. ಅಂತಹ ಶಕ್ತಿ ಇರುವುದು ಕಾಂಗ್ರೆಸ್ ಗೆ ಮಾತ್ರ. ನಾಯಕರು, ಕಾರ್ಯಕರ್ತರಲ್ಲಿ ಏನೇ ಭಿನ್ನಾಭಿಪ್ರಾಯಗಳು ಇರಲಿ ಅವುಗಳನ್ನು ತೋರ್ಪಡಿಸದೇ ಒಗ್ಗಟ್ಟು ಪ್ರದರ್ಶನ ಮಾಡೋಣ' ಎಂದು ಕರೆ ನೀಡಿದರು.

ಬಿಜೆಪಿ ಶಾಸಕರ ಕ್ಷೇತ್ರಕ್ಕೆ ಮಾತ್ರ ಅನುದಾನ

ಬಿಜೆಪಿ ಶಾಸಕರ ಕ್ಷೇತ್ರಕ್ಕೆ ಮಾತ್ರ ಅನುದಾನ

ಬಿಜೆಪಿಗೆ ಜನತೆ‌ ಕೊಟ್ಟಿದ್ದು ಕೇವಲ 104 ಸ್ಥಾನ ಮಾತ್ರ. ಅವರು ವಾಮಮಾರ್ಗದಲ್ಲಿ ಅಧಿಕಾರ ಹಿಡಿದಿದ್ದಾರೆ. ಮುಂದಿನ ಬಾರಿ ನಮ್ಮದೇ ಪಕ್ಷ ಅಧಿಕಾರಕ್ಕೆ ಬರಲಿದೆ. ಒಂದು ಕಾಲದಲ್ಲಿ ನಮ್ಮ ಪಕ್ಷ 179 ಶಾಸಕರನ್ನು ಹೊಂದಿತ್ತು. ಬಿಜೆಪಿಯವರು ಒಂದು ಕಾಲದಲ್ಲಿ ಕೇವಲ ಎರಡ್ಮೂರು ಇದ್ದರು. ಆದರೆ ಇಂದು ಅವರೇ ಅಧಿಕಾರದಲ್ಕಿದ್ದಾರೆ. ಜನರು ಏನು ಬೇಕಾದರೂ ತೀರ್ಪು ಕೊಡಬಹುದು. ಆದರೆ ನಾವುಗಳು ಮಾತ್ರ ಒಗ್ಗಟ್ಟಿನಿಂದ ಇದ್ದು ಪಕ್ಷ ಅಧಿಕಾರಕ್ಕೆ ತರುವ ಕೆಲಸ ಮಾಡಬೇಕು' ಎಂದು ಮನವಿ ಮಾಡಿಕೊಂಡರು.

ಬಿಜೆಪಿ ಸರ್ಕಾರ ವಿದ್ಯುತ್ ಬೆಲೆ, ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಿಸಿದೆ. ಇದು ಬಡಜನರ ಮೇಲೆ ತೀವ್ರ ಪರಿಣಾಮ‌ ಬೀರಲಿದೆ. ಕೋವಿಡ್ ಹೆಸರಿನಲ್ಲಿ ಲೂಟಿ ಮಾಡಿದ್ದಾರೆ. ಕೇವಲ ಬಿಜೆಪಿ ಶಾಸಕರ ಕ್ಷೇತ್ರಕ್ಕೆ ಅನುದಾನ ನೀಡಿದ್ದಾರೆ. ಕಾಂಗ್ರೆಸ್ ಶಾಸಕರ ಕ್ಷೇತ್ರಕ್ಕೆ ಹಣವನ್ನೇ ನೀಡದೆ ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು.

ಭಿಕ್ಷೆ ಬೇಡಿಯಾದರೂ ಹಣ ಹೊಂದಿಸಿಕೊಡುವೆ

ಭಿಕ್ಷೆ ಬೇಡಿಯಾದರೂ ಹಣ ಹೊಂದಿಸಿಕೊಡುವೆ

ಮಸ್ಕಿ, ಬೆಳಗಾವಿ ಹಾಗೂ ಬಸವಕಲ್ಯಾಣದ ಉಪ ಚುನಾವಣೆಗಳಲ್ಲಿ ಇಲ್ಲಿಂದ ಸಹ ಕಾರ್ಯಕರ್ತರು, ಮುಖಂಡರು ಹೋಗಿ ಕೆಲಸ ಮಾಡಿ ಪಕ್ಷ ಗೆಲ್ಲುವಂತೆ ಮಾಡಬೇಕು. ಪಕ್ಷ ಸಂಘಟನೆಗೆ ಹಾಗೂ ಪಕ್ಷದ ಕಚೇರಿ‌ ನಿರ್ಮಾಣ ಮಾಡಲು ಹಣವಿಲ್ಲ ಎಂದರೆ ಹೇಳಿ ನಾನು ಭಿಕ್ಷೆ ಬೇಡಿಯಾದರೂ ಹಣ ಹೊಂದಿಸಿಕೊಡುವೆ ಎಂದು ಶಿವಕುಮಾರ್ ಹೇಳಿದರು.

ಸಭೆಯಲ್ಲಿ ಮಾಜಿ ಸಚಿವ ಪಿ.ಟಿ.‌ ಪರಮೇಶ್ವರ ನಾಯ್ಕ್, ರಾಜ್ಯಸಭಾ ಸದಸ್ಯ ಸೈಯದ್ ನಾಸಿರ್ ಹುಸೇನ್, ಶಾಸಕ ಭೀಮನಾಯ್ಕ್, ಜೆ.ಎನ್. ಗಣೇಶ್, ಈ. ತುಕಾರಾಂ, ಅಲ್ಲಂ ವೀರಭದ್ರಪ್ಪ, ಮಾಜಿ ಸಂಸದ ಅನಿಲ್ ಲಾಡ್, ಮಾಜಿ ಶಾಸಕ ಶಿರಾಜ್ ಶೇಖ್, ಎಚ್.ಎನ್.ಎಫ್. ನಿಯಾಜಿ, ಜಿ.ಪಂ ಸದಸ್ಯ ನಾರಾ ಭರತರೆಡ್ಡಿ ಸೇರಿದಂತೆ ನೂರಾರು ಮುಖಂಡರು, ಕಾರ್ಯಕರ್ತರು ಇದ್ದರು.

English summary
KPCC President DK Shivakumar said the party would come to power again by organizing a party all over the state including North Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X