ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಂದಿನಿ ಸಿಹಿ ಉತ್ಸವ ಆರಂಭ; ಶೇ. 20ರಷ್ಟು ರಿಯಾಯಿತಿ

|
Google Oneindia Kannada News

ಬಳ್ಳಾರಿ, ಡಿಸೆಂಬರ್ 19; ಕರ್ನಾಟಕ ಹಾಲು ಮಹಾ ಮಂಡಳ (ಕೆಎಂಎಫ್​) ಒಂದು ತಿಂಗಳ ಕಾಲದ ನಂದಿನಿ ಸಿಹಿ ಉತ್ಸವಕ್ಕೆ ಚಾಲನೆ ನೀಡಿದೆ. ಹಲವಾರು ಸಿಹಿ ಉತ್ಪನ್ನಗಳಿಗೆ ಶೇ.20ರಷ್ಟು ರಿಯಾಯಿತಿ ದೊರೆಯಲಿದೆ.

ಸೋಮವಾರ ಬಳ್ಳಾರಿಯಲ್ಲಿ ರಾಬಕೋವಿ ಜಿಲ್ಲಾ ಹಾಲು ಒಕ್ಕೂಟದ ನಿದೇಶಕರಾದ ಜಿ. ವೀರಶೇಖರ ರೆಡ್ಡಿ ನಂದಿನಿ ಸಿಹಿ ಉತ್ಸವಕ್ಕೆ ಚಾಲನೆ ನೀಡಿದರು. ಮುಂದಿನ ಒಂದು ತಿಂಗಳ ಕಾಲ ಉತ್ಸವ ನಡೆಯಲಿದೆ.

Nandini Ghee Price : ನಂದಿನಿ ಸ್ವೀಟ್‌, ತುಪ್ಪದ ಬೆಲೆ ಏರಿಕೆ ಮಾಡಿದ ಕೆಎಂಎಫ್ Nandini Ghee Price : ನಂದಿನಿ ಸ್ವೀಟ್‌, ತುಪ್ಪದ ಬೆಲೆ ಏರಿಕೆ ಮಾಡಿದ ಕೆಎಂಎಫ್

ಸಿಹಿ ಉತ್ಸವದಲ್ಲಿ ನಂದಿನಿಯ ಸುಮಾರು 70 ಉತ್ಪನ್ನಗಳಲ್ಲಿ 30 ಸಿಹಿ ಉತ್ಪನ್ನಗಳಿಗೆ ಶೇ 20ರಷ್ಟು ರಿಯಾಯಿತಿ ಇದೆ. ಗ್ರಾಹಕರು ಈ ಉತ್ಸವದ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಕರೆ ನೀಡಲಾಗಿದೆ.

Nandini Milk Price: ನಂದಿನಿ ಹಾಲು ಮತ್ತು ಮೊಸರಿನ ದರದಲ್ಲಿ 2 ರೂಪಾಯಿ ಏರಿಕೆNandini Milk Price: ನಂದಿನಿ ಹಾಲು ಮತ್ತು ಮೊಸರಿನ ದರದಲ್ಲಿ 2 ರೂಪಾಯಿ ಏರಿಕೆ

KMF Nandini Sihi Utsava Get 20 Per Cent Discount On Sweet Items

ನಂದಿನಿ ಸಿಹಿ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿ. ವೀರಶೇಖರ ರೆಡ್ಡಿ, 'ರಾಜ್ಯಾದ್ಯಾಂತ 14 ಒಕ್ಕೂಟಗಳಿದ್ದು ಕರ್ನಾಟಕ ಹಾಲು ಮಂಡಳಿ ವತಿಯಿಂದ ಕಳೆದ 15 ವರ್ಷಗಳಿಂದ ನಂದಿನಿ ಸಿಹಿ ಉತ್ಸವ ಕಾರ್ಯಕ್ರಮವನ್ನು ನಿರಂತರವಾಗಿ ಆಯೋಜನೆ ಮಾಡಲಾಗುತ್ತಿದೆ" ಎಂದರು.

ಕೆಎಂಎಫ್ ಸಂಸ್ಥೆ ಇಡೀ ದೇಶದಲ್ಲಿ ನಂಬರ್ 1 ಸಂಸ್ಥೆಯಾಗಬೇಕು: ಸಿಎಂ ಬೊಮ್ಮಾಯಿಕೆಎಂಎಫ್ ಸಂಸ್ಥೆ ಇಡೀ ದೇಶದಲ್ಲಿ ನಂಬರ್ 1 ಸಂಸ್ಥೆಯಾಗಬೇಕು: ಸಿಎಂ ಬೊಮ್ಮಾಯಿ

ನಂದಿನಿ ಸಿಹಿ ಉತ್ಸವದಲ್ಲಿ ಮೈಸೂರ್ ಪಾಕ್, ಧಾರವಾಡ ಪೇಡಾ, ಬೆಳಗಾಂ ಕುಂದ, ಏಲಕ್ಕಿ ಪೇಡಾ, ಬಾದಾಮ್ ಪೇಡಾ, ಬೆಸನ್ ಲಡ್ಡು, ಸಿರಿಧಾನ್ಯ ಲಾಡು ಮತ್ತು ಇತರೆ ಸಿಹಿ ಉತ್ಪನ್ನಗಳು ಲಭ್ಯವಿದೆ.

ಒಕ್ಕೂಟದ ಎಲ್ಲಾ ಶಾಫಿ, ಎಟಿಎಂ ಪಾರ್ಲರ್, ಕ್ಷೀರ ಮಳಿಗೆಗಳಲ್ಲಿ ಈ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ. ನಿಗದಿತ ಅವಧಿಯಲ್ಲಿ ನಂದಿನಿ ಸಿಹಿ ಉತ್ಪನ್ನಗಳನ್ನು ಖರೀದಿಸಿ ಶೇ 20ರಷ್ಟು ರಿಯಾಯಿತಿ ಪಡೆಯಬಹುದು ಎಂದು ಮನವಿ ಮಾಡಲಾಗಿದೆ.

KMF Nandini Sihi Utsava Get 20 Per Cent Discount On Sweet Items

ಒಕ್ಕೂಟದ ಮಾರುಕಟ್ಟೆ ವಿಭಾಗ ಮುಖ್ಯಸ್ಥ ಜಿ. ಬಿ. ಉದಯ ಕುಮಾರ ಮಾತನಾಡಿ, "ರೈತರ ಹಿತ ರಕ್ಷಣೆ ಮಾಡುವುದು. ಗ್ರಾಹಕರಿಗೆ ತಾಜಾ ಹಾಗೂ ಪರಿಶುದ್ಧವಾದ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಸರಬರಾಜು ಮಾಡುವುದು ಮುಖ್ಯ ಉದ್ದೇಶವಾಗಿದೆ" ಎಂದು ತಿಳಿಸಿದರು.

"ಕಲಬೆರಕೆ ಹಾಲಿನಿಂದ ಮಕ್ಕಳ ಬೆಳವಣಿಗೆ ಕುಂಠಿತವಾಗುತ್ತದೆ. ಆದ್ದರಿಂದ ನಂದಿನಿ ಹಾಲಿನ ವಿವಿಧ ಮಾದರಿಯ ನಂದಿನಿ ಶುಭಂ, ನಂದಿನಿ ಸ್ಪೆಷಲ್ ಹಾಲು, ನಂದಿನಿ ಶುಭಂ ಗೋಲ್ಡ್ ಹಾಗೂ ನಂದಿನಿ ಹಾಲನ್ನು ಬಳಸುವಂತೆ" ಕರೆ ಕೊಟ್ಟರು.

"ಬೂದುಗುಪ್ಪ ಡೇರಿ ಘಟಕದಲ್ಲಿ ಉತ್ಪಾದಿಸಲಾಗುತ್ತಿರುವ ನಂದಿನಿ ತೃಪ್ತಿ ಹಾಲನ್ನು ರೆಫ್ರಿಜರೇಟರ್ ಸಹಾಯವಿಲ್ಲದೇ 90 ದಿನಗಳ ಕಾಲ ತೆರೆದ ಜಾಗದಲ್ಲಿ ಕೆಡದಂತೆ ಇಡಲು ಅವಕಾಶವಿರುವುದರಿಂದ ಹಾಲನ್ನು ಉಪಯೋಗಿಸಬಹುದು" ಎಂದು ವಿವರಣೆ ನೀಡಿದರು.

ಪ್ರತಿ ವರ್ಷವೂ ಕರ್ನಾಟಕ ಹಾಲು ಮಹಾಮಂಡಳಿ ಹಾಗೂ ವಿವಿಧ ಜಿಲ್ಲೆಗಳ ಹಾಲು ಒಕ್ಕೂಟದ ಸಹಯೋಗದೊಂದಿಗೆ ನಂದಿನಿ ಸಿಹಿ ಉತ್ಪನ್ನಗಳ ನಂದಿನಿ ಸಿಹಿ ಉತ್ಸವ ಆಯೋಜನೆ ಮಾಡುತ್ತದೆ. ನಂದಿನಿ ಉತ್ಪನ್ನಗಳನ್ನು ಹೆಚ್ಚಿನ ಜನರಿಗೆ ಪರಿಚಯಿಸಿ, ಮಾರಾಟವನ್ನು ಹೆಚ್ಚಿಸಲು ಈ ಉತ್ಸವವನ್ನು ಹಮ್ಮಿಕೊಳ್ಳಲಾಗುತ್ತದೆ.

ದರ ಏರಿಕೆ ಮಾಡಿದ್ದ ಕೆಎಂಎಫ್; ಡಿಸೆಂಬರ್ ಮೊದಲ ವಾರದಲ್ಲಿ ಕೆಎಂಎಫ್ ಸಿಹಿ ತಿಂಡಿಗಳು, ತುಪ್ಪದ ದರವನ್ನು ಏರಿಕೆ ಮಾಡಿ ಆದೇಶ ಹೊರಡಿಸಿತ್ತು. ಹಾಲಿನಿಂದ ತಯಾರಿಸುವ ಎಲ್ಲಾ ಉತ್ಪನ್ನಗಳ ಬೆಲೆಯಲ್ಲಿ ಶೇ 5ರಿಂದ 15ರ ತನಕ ಹೆಚ್ಚಳ ಮಾಡಲಾಗಿತ್ತು.

ಒಂದು ಕೆಜಿ ತುಪ್ಪದ ದರ 520 ರಿಂದ 610ಕ್ಕೆ, ಮೈಸೂರ್‌ ಪಾಕ್‌ ದರ 250 ಗ್ರಾಂ 115 ರೂ. ನಿಂದ 160 ರೂ., ಕೋವಾ 200 ಗ್ರಾಂ 90 ರಿಂದ 100 ರೂ. ಗೆ, ಜಾಮೂನ್ ದರ ಅರ್ಧ ಕೆಜಿ ಟಿನ್ 105 ರಿಂದ 135 ರೂ.ಗೆ ಏರಿಕೆಯಾಗಿತ್ತು.

ನವೆಂಬರ್‌ ತಿಂಗಳಿನಲ್ಲಿ ಹಾಲು ಮತ್ತು ಮೊಸರಿನ ದರವನ್ನು 2 ರೂ. ಏರಿಕೆ ಮಾಡಲಾಗಿತ್ತು. ಡಿಸೆಂಬರ್‌ನಲ್ಲಿ ಫ್ಲೇವರ್ಡ್‌ ಮಿಲ್ಕ್ ದರ 20 ರಿಂದ 25 ರೂಪಾಯಿ, ನಂದಿನಿ ಐಸ್‌ ಕ್ರೀಂನ ಪ್ರತಿ ಪ್ಯಾಕೇಟ್ ದರ 5 ರೂ. ಏರಿಕೆ ಮಾಡಲಾಗಿತ್ತು. ಪನ್ನೀರ್ ದರ ಪ್ರತಿ ಕೆಜಿಗೆ 20 ರೂ. ಏರಿಕೆಯಾಗಿತ್ತು.

English summary
Karnataka Milk Federation (KMF) Nandini Sihi Utsava began on December 19th. People will get 20 per cent discount on sweet items.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X