• search
 • Live TV
ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಳ್ಳಾರಿ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಕಗ್ಗಂಟಿಗೆ ಜಾರಕಿಹೊಳಿ-ಡಿಕೆಶಿ ಕಾರಣ?

|
   ಬಳ್ಳಾರಿಯಲ್ಲಿ ಡಿ ಕೆ ಶಿವಕುಮಾರ್ ಹಾಗು ಜಾರಕಿಹೊಳಿ ಸಹೋದರರ ನಡುವೆ ಮತ್ತೆ ಜಟಾಪಟಿ ಸಾಧ್ಯತೆ | Oneindia Kannada

   ಬಳ್ಳಾರಿ, ಅಕ್ಟೋಬರ್ 11: ಬಳ್ಳಾರಿ ಲೋಕಸಭಾ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಕಗ್ಗಂಟಿಗೆ ಜಾರಕಿಹೊಳಿ ಸಹೋದರರು, ಡಿಕೆ ಶಿವಕುಮಾರ್ ಅವರೇ ಕಾರಣವಾಗಿರಬಹುದೇ ಎನ್ನುವ ಪ್ರಶ್ನೆ ಕಾಡುತ್ತಿದೆ.

   ಸಂಪುಟ ವಿಸ್ತರಣೆ ವಿಳಂಬ:ಉಪಚುನಾವಣೆಯಲ್ಲಿ 'ಕೈ' ಕೊಡಲಿದ್ದಾರಾ ಶಾಸಕರು

   ಲೋಕಸಭಾ ಚುನಾವಣೆಯ ಬಳ್ಳಾರಿ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಇದುವರೆಗೂ ಗೊಂದಲದ ಗೂಡಾಗಿದ್ದು ಕಗ್ಗಂಟಾಗಿ ಪರಿಣಮಿಸಿದೆ. ಈ ವಿಚಾರವಾಗಿ ಮತ್ತೆ ಡಿಕೆ ಶಿವಕುಮಾರ್ ಹಾಗೂ ಸಚಿವ ಜಾರಕಿಹೊಳಿ ನಡುವೆ ಮತ್ತೆ ಪೈಪೋಟಿ ನಡೆಯಲಿದೆ.

   ಬಳ್ಳಾರಿ ಲೋಕಸಭಾ ಉಪಚುನಾವಣೆ ಉಸ್ತುವಾರಿ ಡಿಕೆಶಿ ಹೆಗಲಿಗೆ

   ಬಳ್ಳಾರಿಯು ಕಾಂಗ್ರೆಸ್ ನ ಭದ್ರಕೋಟೆ ಯಾಗಿತ್ತು, ಆದರೆ ಆ ಜಿಲ್ಲೆಯ ಶಾಸಕರಿಗೆ ಸಚಿವ ಸ್ಥಾನ ದೊರೆಯದಿರುವುದು ಸ್ಥಳೀಯ ನಾಯಕರ ಅಸಮಾಧಾನಕ್ಕೆ ಕಾರಣವಾಗಿತ್ತು. ಇದೀಗ ಮತ್ತೊಮ್ಮೆ ಜಾರಕಿಹೊಳಿ ಮತ್ತು ಡಿಕೆಶಿ ಅಕಾಡಕ್ಕಿಳಿಯುವ ಸಾಧ್ಯತೆಗಳಿವೆ. ಬಳ್ಳಾರಿ ಉಪ ಚುನಾವಣೆ ಅಭ್ಯರ್ಥಿ ಆಯ್ಕೆ ಸೇರಿದಂತೆ ಅನೇಕ ಜವಾಬ್ದಾರಿಗಳನ್ನು ಕಾಂಗ್ರೆಸ್ ಹೈಕಮಾಂಡ್ ಡಿಕೆ ಶಿವಕುಮಾರ್ ಗೆ ವಹಿಸಿಕೊಡುವ ಸಾಧ್ಯತೆಗಳಿವೆ. ಗುರುವಾರ ಈ ಕುರಿತು ಮತ್ತೊಂದು ಸಭೆಯೂ ನಡೆಯಲಿದೆ.

   ಸಚಿವ ರಮೇಶ್ ಜಾರಕಿಹೊಳಿ ಹಾಗೂ ಸತೀಶ್ ಜಾರಕಿಹೊಳಿ ಅವರು ಬಳ್ಳಾರಿ ರಾಜಕೀಯದಲ್ಲಿ ಕೈಹಾಕುತ್ತಿದ್ದಾರೆ. ಹೀಗಾಗಿ ತಮ್ಮ ಆಪ್ತ ಶಾಸಕ ನಾಗೇಂದ್ರ ಅವರ ಸಹೋದರರಿಗೆ ಟಿಕೆಟ್ ಕೊಡಿಸಲು ಮುಂದಾಗಿದ್ದಾರೆ ಎನ್ನುವ ಸುದ್ದಿಗಳು ಹರಿದಾಡುತ್ತಿವೆ. ಬಳ್ಳಾರಿಯಲ್ಲಿ ಕಾಂಗ್ರೆಸ್ಸಿನ ಒಟ್ಟು 6 ಶಾಸಕರು, ಇಬ್ಬರು ವಿಧಾನ ಪರಿಷತ್ ಸದಸ್ಯರು, ಹಾಗೂ ಒಬ್ಬರು ರಾಜ್ಯಸಭಾ ಸದಸ್ಯರು ಇದ್ದಾರೆ. ಇವರಲ್ಲಿ ನಾಲ್ವರು ಸಭೆಗೆ ಗೈರಾಗುತ್ತಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ.

   ಉಪಚುನಾವಣೆ: 5 ಕ್ಷೇತ್ರಗಳ ಸಂಭಾವ್ಯ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಅಭ್ಯರ್ಥಿಗಳು

   ಆದರೆ ಜಾರಕಿಹೊಳಿ ಸಹೋದರರು ಹಾಗೂ ಡಿಕೆ ಶಿವಕುಮಾರ್ ವಾಗ್ದಾಳಿ ಬಳ್ಳಾರಿ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ತೀವ್ರ ಪರಿಣಾಮ ಬೀರುವುದಂತೂ ಖಚಿತವಾಗಿದೆ. ಕಳೆದ 2 ದಿನಗಳಿಂದ ಡಿಕೆ ಶಿವಕುಮಾರ್ ಶಾಸಕರು ಮತ್ತು ಸಚಿವ ಸಭೆ ಕರೆಯುತ್ತಲೇ ಇದ್ದಾರೆ. ಶಾಸಕರಾದ ಜೆ.ಎನ್ ಗಣೇಶ, ಪರಮೇಶ್ವರ್ ನಾಯ್ಕ್, ಆನಂದಸಿಂಗ್, ಭೀಮಾನಾಯ್ಕ್ ಗೈರು ಹಾಜರಾಗುತ್ತಿದ್ದಾರೆ. ಒಟ್ಟು ನಾಲ್ಕು ಸಭೆ ಕರೆದರೂ ಅಭ್ಯರ್ಥಿಯ ಆಯ್ಕೆ ವಿಫಲವಾಗಿದೆ. ಅಕ್ಟೋಬರ್ 11ರಂದು ಅಭ್ಯರ್ಥಿ ಆಯ್ಕೆ ಅಂತಿಮವಾಗುವ ಯಾವುದೇ ಲಕ್ಷಣ ಕಾಣ್ತಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ.

   ಬಳ್ಳಾರಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಯಾರೆಂಬ ಗೊಂದಲ

   ಬಳ್ಳಾರಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಯಾರೆಂಬ ಗೊಂದಲ

   ಬಳ್ಳಾರಿ ಜಿಲ್ಲೆಯಲ್ಲಿ ಲೋಕಸಭಾ ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಯಾರಾಗುತ್ತಾರೆ ಎಂಬ ಗೊಂದಲ ಮುಂದುವರೆದಿದೆ. ಬಳ್ಳಾರಿ ಜಿಲ್ಲೆಯ ಕಾಂಗ್ರೆಸ್ ಶಾಸಕರಾದ ಬಿ. ನಾಗೇಂದ್ರ, ಇ ತುಕಾರಾಂ, ಪಿಟಿ ಪರಮೇಶ್ವರ ನಾಯಕ್ ಅಭ್ಯರ್ಥಿ ಆಯ್ಕೆ ವಿಚಾರ ಕುರಿತು ಆಸಕ್ತಿ ತೋರಿಸುತ್ತಿಲ್ಲ.

   ಬಳ್ಳಾರಿ ಉಪ ಚುನಾವಣೆ ಜವಾಬ್ದಾರಿ ಡಿಕೆಶಿಗೆ

   ಬಳ್ಳಾರಿ ಉಪ ಚುನಾವಣೆ ಜವಾಬ್ದಾರಿ ಡಿಕೆಶಿಗೆ

   ಬಳ್ಳಾರಿ ಲೋಕಸಭಾ ಉಪ ಚುನಾವಣೆ ಜವಾಬ್ದಾರಿಯನ್ನು ಡಿಕೆಶಿ ಹೊತ್ತುಕೊಳ್ಳುವುದು ಪಕ್ಕಾ ಆಗಿದೆ. ಆದರೆ ಗುರುವಾರ ಇನ್ನೊಂದು ಸಭೆ ನಡೆಯಲಿದ್ದು, ಅದರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಂತಿಮವಾಗಲಿದೆ.

   ಬಳ್ಳಾರಿ ಲೋಕಸಭಾ ಚುನಾವಣೆ ಕಾಂಗ್ರೆಸ್ ಸಂಭಾವ್ಯ ಪಟ್ಟಿ

   ಬಳ್ಳಾರಿ ಲೋಕಸಭಾ ಚುನಾವಣೆ ಕಾಂಗ್ರೆಸ್ ಸಂಭಾವ್ಯ ಪಟ್ಟಿ

   ಬಳ್ಳಾರಿ ಶಾಸಕ ಬಿ.ನಾಗೇಂದ್ರ ಸಹೋದರ ಬಿ.ಪ್ರಸಾದ್, ಕೂಡ್ಲಗಿಯ ನಾಗಮಣಿ, ಮಾಜಿ ಪರಿಷತ್ ಸದಸ್ಯ ಕೆ.ಎಸ್‌.ಎಲ್.ಸ್ವಾಮಿ ಪತ್ನಿ ಸರಸ್ವತಿ, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ವೈ.ನಟಕಲ್ಲಪ್ಪ ಹೆಸರುಗಳು ಪ್ರಬಲವಾಗಿ ಕೇಳಿಬರುತ್ತಿವೆ. ಆದರೆ ಅಂತಿಮ ಅಭ್ಯರ್ಥಿ ಆಯ್ಕೆಯಾಗಿಲ್ಲ.

   ಕಾಂಗ್ರೆಸ್ ಸಭೆಯಲ್ಲಿ ಗೈರಾದ ಶಾಸಕರು

   ಕಾಂಗ್ರೆಸ್ ಸಭೆಯಲ್ಲಿ ಗೈರಾದ ಶಾಸಕರು

   ಬಳ್ಳಾರಿ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ವಿಚಾರ ಜಿಲ್ಲಾ ಉಸ್ತುವಾರಿ ಡಿಕೆ ಶಿವಕುಮಾರ್ ಕರೆದಿದ್ದ ಸಭೆಗೆ ಸಾಕಷ್ಟು ಶಾಸಕರು ಗೈರಾಗಿದ್ದಾರೆ. ಸಭೆಗೆ ಕಂಪ್ಲಿ ಶಾಸಕ ಜೆ.ಎನ್.ಗಣೇಶ್, ಸಂಡೂರು ಶಾಸಕ ಇ.ತುಕಾರಾಂ, ಹೂವಿನಹಡಗಲಿ ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ್ ಗೈರು ಹಾಜರಾಗಿದ್ದರು. ಇಂದು ನಡೆದ ಸಭೆಗೆ ಆನಂದ್ ಸಿಂಗ್ ಸಹ ಗೈರು ಹಾಜರಾಗಿದ್ದಾರೆ.

   English summary
   Tussle between ministers D.K.Shivakumar and Ramesh Jarkiholi has irked Congress to choose the candidate for Bellary parliament by election.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X