• search
  • Live TV
ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಿವಾದ ಹುಟ್ಟು ಹಾಕಿದ ಹಂಪಿ ಬೈ ನೈಟ್‌ ಯೋಜನೆ

|

ಬಳ್ಳಾರಿ, ಅ, 24 : ವಿಶ್ವ ಪ್ರಸಿದ್ಧ ಹಂಪಿಯ ಸ್ಮಾರಕಗಳನ್ನು ಪ್ರವಾಸಿಗರು ರಾತ್ರಿ ವೇಳೆಯಲ್ಲೂ ವೀಕ್ಷಿಸಲು ಅವಕಾಶ ಮಾಡಿಕೊಡುವ ಸಲುವಾಗಿ ಆರಂಭಿಸಲಾಗಿದ್ದ ‘ಹಂಪಿ ಬೈ ನೈಟ್‌' ಯೋಜನೆ ವಿವಾದಕ್ಕೆ ಕಾರಣವಾಗಿದೆ. ಈ ವಿವಾದಿಂದಾಗಿ ಯೋಜನೆಯ ಕಾಮಗಾರಿಯನ್ನು ಸ್ಥಗಿರಗೊಳಿಸಲಾಗಿದೆ.

ಹಂಪಿ ಬೈ ನೈಟ್‌ ಯೋಜನೆಯ ಟೆಂಡರ್ ಹಂಚಿಕೆ ಮತ್ತು ಕಾಮಗಾರಿ ಅನುಷ್ಠಾನದಲ್ಲಿ ಲೋಪಗಳಾಗುತ್ತಿತ್ತು. ಇದರಿಂದಾಗಿ ಕಾಮಗಾರಿ ಸದ್ಯ ಸ್ಥಗಿತಗೊಂಡಿದ್ದು, ಯೋಜನೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಜಿಲ್ಲಾಡಳಿತ ಸರ್ಕಾರಕ್ಕೆ ಪತ್ರ ಬರೆದು ಮಾಹಿತಿ ನೀಡಿದೆ. ಕಾಮಗಾರಿ ಸ್ಥಗಿತ ಗೊಳಿಸಿ ಅಲ್ಲಿದ್ದ ಉಪಕರಣಗಳನ್ನು ವಶಪಡಿಸಿಕೊಂಡಿದೆ.

ವಿಜಯನಗರ ಅರಸರ ರಾಜಧಾನಿ ಹಂಪಿಯ ಸ್ಮಾರಕಗಳನ್ನು ಪ್ರವಾಸಿಗರು ರಾತ್ರಿವೇಳೆಯಲ್ಲೂ ವೀಕ್ಷಿಸಲು ಅನುಕೂಲವಾಗುವಂತೆ ಲೈಟಿಂಗ್ ವ್ಯವಸ್ಥೆ ಮಾಡುವುದೇ ಹಂಪಿ ಬೈ ನೈಟ್‌ ಯೋಜನೆಯಾಗಿತ್ತು. 2010 ರಲ್ಲಿ ರಾಜ್ಯ ಸರ್ಕಾರ ‘ಹಂಪಿ ಬೈ ನೈಟ್‌' ಯೋಜನೆ ಕಾಮಗಾರಿ ಗುತ್ತಿಗೆಯನ್ನು ಬೆಂಗಳೂರು ಮೂಲದ ಇನೋವೆಟಿವ್‌ ಲೈಟಿಂಗ್‌ ಸಿಸ್ಟಮ್ಸ್‌ ಕಂಪೆನಿಗೆ ನೀಡಿ ಆದೇಶ ಹೊರಡಿಸಿತ್ತು.

ಆದರೆ, ಈ ಟೆಂಡರ್ ವ್ಯವಹಾರದಲ್ಲೇ ಅವ್ಯವಹಾರ ನಡೆದಿದೆ ಎಂಬುದು ಸದ್ಯದ ಆರೋಪ. ಗುತ್ತಿಗೆ ಪಡೆದ ಈ ಕಂಪೆನಿಯು ಟೆಂಡರ್‌ನಲ್ಲಿ ಯೋಜನೆಗೆ ರೂ. 11.50 ಕೋಟಿ ವೆಚ್ಚಾಗುತ್ತದೆ ಎಂದು ನಮೂದಿಸಿತ್ತು. ಆದರೆ, ದೆಹಲಿ ಮೂಲದ ಇಂಟೆಗ್ರೇಟೆಡ್‌ ಡಿಜಿಟಲ್‌ ಸಲ್ಯೂಶನ್‌ ಕಂಪೆನಿ ರೂ. 9.50 ಕೋಟಿ ನಮೂದಿಸಿತ್ತು.

ಆದರೂ ಯೋಜನೆಗೆ ಟೆಂಡರ್ ಅನ್ನು ದೆಹಲಿ ಕಂಪೆನಿಗಿಂತ 2 ಕೋಟಿ ಹೆಚ್ಚು ನಮೂದಿಸಿದ್ದ ಇನೋವೆಟಿವ್‌ ಲೈಟಿಂಗ್‌ ಸಿಸ್ಟಮ್ಸ್‌ ಕಂಪೆನಿಗೆ ನೀಡಲಾಗಿತ್ತು. ಇಂತಹ ಯೋಜನೆ ಅನುಷ್ಠಾನಗೊಳಿಸಿದ ಅನುಭವ ಸಹ ಈ ಕಂಪನಿಗೆ ಇರಲಿಲ್ಲ. ಆದ್ದರಿಂದ ಅಕ್ರಮವಾಗಿ ಈ ಕಂಪನಿಗೆ ಟೆಂಡರ್ ನೀಡಲಾಗಿದೆ ಎಂಬುದು ಸದ್ಯ ಕೇಳಿ ಬರುತ್ತಿರುವ ಆರೋಪ.

ಈ ಕಂಪನಿ ಸೌಂಡ್‌ ಮತ್ತು ಲೈಟಿಂಗ್‌ ಕಾಮಗಾರಿಗಳನ್ನು ಬೇರೆ ಕಂಪೆನಿಗಳಿಗೆ ಉಪಗುತ್ತಿಗೆ ನೀಡಿದೆ. ಗುತ್ತಿಗೆದಾರರು ತಾಂತ್ರಿಕವಾಗಿ ಕೆಲಸ ನಿರ್ವಹಿಸುತ್ತಿಲ್ಲ, ಅನುಭವವಿಲ್ಲದ ಕಂಪನಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟುಮಾಡುತ್ತಿದೆ ಎಂದು ಜಿಲ್ಲಾಡಳಿತವು ಸರ್ಕಾರಕ್ಕೆ ಬರೆದ ಪತ್ರದಲ್ಲಿ ತಿಳಿಸಿದೆ ಹಾಗೂ ಕಾಮಗಾರಿಯನ್ನು ಸ್ಥಗಿತಗೊಳಿಸಿದೆ.

ಕಂಪೆನಿ ನಿಯಮ ಉಲ್ಲಂಘಿಸಿ ಕಾಮಗಾರಿ ನಡೆಸುತ್ತಿದೆ ಮತ್ತು ಭಾರತೀಯ ಪ್ರಾಚ್ಯ ವಸ್ತು ಸಂಶೋಧನಾ ಇಲಾಖೆ ಸಹ ಕಾಮಗಾರಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ ಆದ್ದರಿಂದ ತಾತ್ಕಾಲಿಕವಾಗಿ ಕಾಮಗಾರಿ ಸ್ಥಗಿತಗೊಳಿಸಿ, ಉಪಕರಣಗಳನ್ನು ವಶಪಡಿಸಿಕೊಂಡಿದ್ದೇವೆ ಎಂದು ಜಿಲ್ಲಾಧಿಕಾರಿಗಳು ಹೇಳಿದ್ದಾರೆ. ಸರ್ಕಾರದ ಆದೇಶದ ನಂತರ ಕಾಮಗಾರಿ ಪ್ರಾರಂಭವಾಗುವುದೋ ಕಾದು ನೋಡಬೇಕು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Project "Hampi by Night Trail' face shutdown. In a letter to Karnataka government the District Administration ( Bellary) said, they are forced stall the project due to corruption in project construction work. A wonderful project - beauty in the moonlight - launched in 2010 gets a beating. Alas.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more