ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇಂದು ಗಂಗಾವತಿಯಲ್ಲಿ ಗಾಲಿ ಜನಾರ್ದನ್‌ ರೆಡ್ಡಿ ನೂತನ ಮನೆ ಗೃಹ ಪ್ರವೇಶ

|
Google Oneindia Kannada News

ಕೊಪ್ಪಳ, ಡಿಸೆಂಬರ್‌, 14: ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ಎಲ್ಲಾ ಪಕ್ಷಗಳಿಂದಲೂ ಈಗಿನಿಂದಲೇ ಭಾರಿ ಕಸರತ್ತುಗಳು ನಡೆಯುತ್ತಿವೆ. ಹಾಗೆಯೇ ಮಾಜಿ ಸಚಿವ ಜನಾರ್ದನ್‌ ರೆಡ್ಡಿ ಗಂಗಾವತಿಯಲ್ಲಿ ಐಷಾರಾಮಿ ಮನೆಯೊಂದನ್ನು ಖರೀದಿಸಿದ್ದರು. ಇದು ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿತ್ತು. ಇದೀಗ ಇಂದು (ಡಿಸೆಂಬರ್‌ 14) ಗೃಹ ಪ್ರವೇಶದ ಕಾರ್ಯಕ್ರಮವ ನೆರವೇರಿದೆ. ಈ ಮೂಲಕ ರೆಡ್ಡಿಯವರು 2023ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ ಎನ್ನುವ ಗುಸುಗುಸು ಮಾತುಗಳು ರಾಜಕೀಯ ವಲಯದಲ್ಲಿ ಮತ್ತಷ್ಟು ಹೆಚ್ಚಾಗಿವೆ. ಮತ್ತೊಂದೆಡೆ ಜನಾರ್ದನ್‌ ರೆಡ್ಡಿ ಗಂಗಾವತಿಯಿಂದ ಸ್ಪರ್ಧೆಗೆ ಇಳಿಯುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಗಂಗಾವತಿಯಲ್ಲಿ ಬೃಹತ್‌ ಮನೆ ನಿರ್ಮಾಣ ಮಾಡಿದ ಜನಾರ್ದನ ರೆಡ್ಡಿ, ಪ್ರಶ್ನೆಗಳ ಉದ್ಭವಗಂಗಾವತಿಯಲ್ಲಿ ಬೃಹತ್‌ ಮನೆ ನಿರ್ಮಾಣ ಮಾಡಿದ ಜನಾರ್ದನ ರೆಡ್ಡಿ, ಪ್ರಶ್ನೆಗಳ ಉದ್ಭವ

ಇಂದು ಗಂಗಾವತಿಯ ಕನಕಗಿರಿ ರಸ್ತೆಯಲ್ಲಿ ಮಾಜಿ ಸಚಿವ ಜನಾರ್ದನ್‌ ರೆಡ್ಡಿ ಅವರ ನೂತನ ಐಷಾರಾಮಿ ಮನೆಯ ಗೃಹ ಪ್ರವೇಶ ಹಮ್ಮಿಕೊಳ್ಳಲಾಗಿತ್ತು. ಅವರು ಚುನಾವಣೆಗಾಗಿಯೇ ಗಂಗಾವತಿಯಲ್ಲಿ ಐಷಾರಾಮಿ ಮನೆಯನ್ನು ಖರೀದಿಸಿದ್ದಾರೆ ಎನ್ನುವ ಮಾತುಗಳು ಕೂಡ ಜೋರಾಗಿಯೇ ಕೇಳಿಬರುತ್ತಿವೆ.

Gali Janardhana Reddy new house warming ceremony is being conducted at Gangavathi today

ನಿಗದಿತ ಅವಧಿಗೂ ಮೊದಲೇ ಗೃಹ ಪ್ರವೇಶ
ನಿಗದಿತ ಅವಧಿಗೂ ಮೊದಲೇ ಮಾಜಿ ಸಚಿವ ಜನಾರ್ದನ್‌ ರೆಡ್ಡಿ ಅವರ ನೂತನ ಮನೆಯ ಗೃಹ ಪ್ರವೇಶ ನೆರವೇರಿದೆ. ಡಿಸೆಂಬರ್‌ 18ರಂದು ಗೃಹ ಪ್ರವೇಶ ಇರಲಿದೆ. ಅಂದೇ ನನ್ನ ಮುಂದಿನ ರಾಜಕೀಯ ಭವಿಷ್ಯದ ಬಗ್ಗೆ ಅಧಿಕೃತ ಮಾಹಿತಿ ನೀಡುತ್ತೇನೆ ಎಂದು ಈ ಹಿಂದೆ ಹೇಳಿದ್ದರು. ಆದರೆ ನಿಗದಿಪಡಿಸಿದ್ದ ಅವಧಿಗಿಂತ ನಾಲ್ಕು ದಿನ ಮುಂಚಿತವಾಗಿಯೇ ಅಂದರೆ ಇಂದು (ಡಿಸೆಂಬರ್‌ 14) ಮನೆಯ ಗೃಹ ಪ್ರವೇಶ ಆರಂಭವಾಗಿದೆ. ರೆಡ್ಡಿ ಅವರ ಪತ್ನಿ ಅರುಣಾ ನೇತೃತ್ವದಲ್ಲಿ ಗೃಹ ಪ್ರವೇಶದ ಹೋಮ ಹವನ ಶಾಸ್ತ್ರೋಕ್ತವಾಗಿ ನರೆವೇರಿದೆ.

Gali Janardhana Reddy new house warming ceremony is being conducted at Gangavathi today

ಬೃಹತ್ ಬಂಗಲೆಯ ವಿಶೇಷತೆ ಏನು?
ಈ ಬೃಹತ್ ಬಂಗಲೆ ಮೂರು ಅಂತಸ್ತಿನಿಂದ ಕೂಡಿದ್ದು, ಹೈಫೈ ಮನೆಯ ಸೌಂದರ್ಯ ಯಾವ ಸಿನಿಮಾದ ಸೆಟ್‌ಗೂ ಕಡಿಮೆ ಇಲ್ಲವೆಂಬಂತೆ ಇದೆ. ಮನೆಯಲ್ಲಿ ಐದು ಬೆಡ್ ರೂಂ, ಮೂರು ಹಾಲ್, ಅತ್ಯಾಧುನಿಕ ತಂತ್ರಜ್ಞಾನದ ಅಡುಗೆ ಕೋಣೆಯನ್ನು ಕಾಣಬಹುದಾಗಿದೆ. ಅಲ್ಲದೇ ಜನರೊಂದಿಗೆ ಮಾತುಕತೆ ನಡೆಸಲು ಹೊರಗೆ ದೊಡ್ಡ ಹಾಲ್‌ ನಿರ್ಮಾಣ ಮಾಡಿದ್ದಾರೆ. ಆಪ್ತವಾಗಿರುವ ಆಯ್ದ ಜನರೊಂದಿಗೆ ಮಾತನಾಡಲು ಪ್ರತ್ಯೇಕ ಕೋಣೆಯನ್ನು ನಿರ್ಮಿಸಲಾಗಿದೆ. ಕೊಪ್ಪಳ ರಸ್ತೆಯಲ್ಲಿ ಮೂರು ಹೆಕ್ಟೇರ್‌ ಪ್ರದೇಶದಲ್ಲಿರುವ ಮನೆ ಖರೀದಿ ಮಾಡಿದ್ದು, ಇಡೀ ಲೇಔಟ್ ಅನ್ನು ಬಾಡಿಗೆ ಪಡೆಯಲಾಗಿದೆ. ಹೀಗೆ ಮನೆ ನಿರ್ಮಾಣ ಮಾಡುವ ನೆಪದಲ್ಲಿ ಗಂಗಾವತಿಯಿಂದಲೇ ಸ್ಪರ್ಧೆ ಮಾಲು ಜನಾರ್ದನ ರೆಡ್ಡಿ ಪ್ಲಾನ್ ಮಾಡಿದ್ದಾರಾ? ಎನ್ನುವ ಪ್ರಶ್ನೆಗಳು ಎದ್ದಿವೆ.

English summary
Former minister Gali Janardhana Reddy new house warming ceremony is being conducted at Gangavathi of koppal district today, know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X