Breaking; ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಲಿದ್ದಾರೆ ಮಾಜಿ ಶಾಸಕ!
ಬಳ್ಳಾರಿ, ಸೆಪ್ಟೆಂಬರ್ 08: ಬಳ್ಳಾರಿ-ವಿಜಯನಗರ ರಾಜಕೀಯದಲ್ಲಿ ಮಹತ್ವದ ಬದಲಾವಣೆಯಾಗಲಿದೆ. ಮಾಜಿ ಶಾಸಕರೊಬ್ಬರು ಬಿಜೆಪಿ ಬಿಟ್ಟು ಡಿ. ಕೆ. ಶಿವಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಲಿದ್ದಾರೆ.
ಮಾಜಿ ಶಾಸಕ ಎಚ್. ಆರ್. ಗವಿಯಪ್ಪ ಬಿಜೆಪಿ ತೊರೆಯಲಿದ್ದಾರೆ. ಶುಕ್ರವಾರ ಕೆಪಿಸಿಸಿ ಕಚೇರಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ಗೆ ವಾಪಸ್ ಆಗಲಿದ್ದಾರೆ.
ಬೆಂಬಲಿಗರ ಜೊತೆ ಎಚ್. ಆರ್. ಗವಿಯಪ್ಪ ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಸೇರಲಿದ್ದಾರೆ. ಶುಕ್ರವಾರ ನಡೆಯಲಿರುವ ಕಾರ್ಯಕ್ರಮಕ್ಕೆ ಸುಮಾರು 200 ವಾಹನಗಳಲ್ಲಿ ಗವಿಯಪ್ಪ ಬೆಂಬಲಿಗರು ಆಗಮಿಸುತ್ತಿದ್ದಾರೆ.

2018ರಲ್ಲಿ ಆನಂದ್ ಸಿಂಗ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದರು. ಆಗ ಎಚ್. ಆರ್. ಗವಿಯಪ್ಪಗೆ ಟಿಕೆಟ್ ನಿರಾಕರಿಸಲಾಗಿತ್ತು. ಚುನಾವಣೆಯಲ್ಲಿ ಆನಂದ್ ಸಿಂಗ್ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು.
ಆಗ ಎಚ್. ಆರ್. ಗವಿಯಪ್ಪ ಕಾಂಗ್ರೆಸ್ ತೊರದು ಬಿಜೆಪಿ ಸೇರಿದ್ದರು. ಆನಂದ್ ಸಿಂಗ್ ವಿರುದ್ದ ಬಿಜೆಪಿ ಅಭ್ಯರ್ಥಿಯಾಗಿದ್ದರು. ಚುನಾವಣೆಯಲ್ಲಿ ಆನಂದ್ ಸಿಂಗ್ ಕಾಂಗ್ರೆಸ್‌ನಿಂದ ಕಣಕ್ಕಿಳಿದು 83,214 ಮತ ಪಡೆದು ಜಯಗಳಿಸಿದ್ದರು. ಎಚ್. ಆರ್. ಗವಿಯಪ್ಪ 74,986 ಮತ ಪಡೆದು ಸೋಲು ಕಂಡಿದ್ದರು.
ಎಚ್. ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಆನಂದ್ ಸಿಂಗ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಬಳಿಕ ಬಿಜೆಪಿ ಸೇರಿದರು. 2019ರ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಮತ್ತೆ ಗೆಲುವು ಕಂಡರು.
ಉಪ ಚುನಾವಣೆಯಲ್ಲಿಯೂ ಎಚ್. ಆರ್. ಗವಿಯಪ್ಪ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಬಿಜೆಪಿ ಆನಂದ್ ಸಿಂಗ್‌ಗೆ ಟಿಕೆಟ್ ನೀಡಿತ್ತು. ಇದರಿಂದಾಗಿ ಅವರು ಅಸಮಾಧಾನಗೊಂಡಿದ್ದರು.
ಈಗ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿರುವಾಗ ಕಾಂಗ್ರೆಸ್‌ಗೆ ಎಚ್. ಆರ್. ಗವಿಯಪ್ಪ ಮರಳುತ್ತಿದ್ದಾರೆ. ಇದರಿಂದಾಗಿ ಕಾಂಗ್ರೆಸ್‌ಗೆ ಜಿಲ್ಲೆಯಲ್ಲಿ ನಾಯಕರೊಬ್ಬರು ಸಿಕ್ಕಿದಂತೆ ಆಗಿದೆ.
ವಿಜಯನಗರ ಜಿಲ್ಲಾ ರಚನೆಯಲ್ಲಿ ಆನಂದ್ ಸಿಂಗ್ ಪಾತ್ರ ಬಹಳ ದೊಡ್ಡದು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಅವರು ಪ್ರವಾಸೋದ್ಯಮ ಸಚಿವರು.












Click it and Unblock the Notifications