• search
 • Live TV
ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಳ್ಳಾರಿಯಿಂದ ಸ್ಪರ್ಧೆ, ಬಿಜೆಪಿಯಿಂದ ಅಚ್ಚರಿಯ ಹೆಸರು

By ಜಿಎಂಆರ್, ಬಳ್ಳಾರಿ
|
   ಕರ್ನಾಟಕ ವಿಧಾನಸಭಾ ಚುನಾವಣೆ 2018 : ಬಳ್ಳಾರಿ ಕ್ಷೇತ್ರದಲ್ಲಿ ಬಿಜೆಪಿಯ ಅಚ್ಚರಿಯ ಹೆಸರು | Oneindia Kannada

   ಬಳ್ಳಾರಿ, ಫೆಬ್ರವರಿ 13: ಬಳ್ಳಾರಿ ಜಿಲ್ಲಾ ಬಿಜೆಪಿಯಲ್ಲಿ ಅಚ್ಚರಿಯ ಹೆಸರೊಂದು ಮೇಲ್ಪಂಕ್ತಿಗೆ ಬರುತ್ತಿದೆ. ಕಳಂಕಿತರನ್ನು ಸಕ್ರಿಯ ರಾಜಕೀಯದಿಂದ ದೂರವೇ ಇರಿಸಲು ಮತ್ತು ಕಳಂಕಿತರಿಂದ ಅಂತರ ಕಾಪಾಡಿಕೊಳ್ಳಲು ನಿರ್ಧರಿಸಿರುವ ಬಿಜೆಪಿ ರಾಷ್ಟ್ರ ಮುಖಂಡರು, ಬಳ್ಳಾರಿ ಜಿಲ್ಲೆಯಿಂದ ಪ್ರಯೋಗ ಮಾಡಲು ಮುಂದಾಗಿದ್ದಾರೆ.

   ಗಾಲಿ ರೆಡ್ಡಿ ಸಹೋದರರನ್ನು ಎದುರು ಹಾಕಿಕೊಳ್ಳಲು ಸಿದ್ದವಿಲ್ಲದ ಸ್ಥಿತಿಯಲ್ಲಿದ್ದ ಬಿಜೆಪಿ ಈ ಚುನಾವಣೆಯಿಂದಲೇ ರೆಡ್ಡಿ ಸಹೋದರನ್ನು ಕೈಬಿಟ್ಟು ಜಿಲ್ಲೆಯಲ್ಲಿ ರಾಜಕೀಯ ನಡೆಸಲು ಮುಂದಾಗಿದೆ.

   ತೆರೆಮರೆಯ ಚಾಣಕ್ಯನಿಗೆ ಸಿಕ್ತು ಹೊಸ ನೆಲೆ

   ಬಿ.ಎಸ್. ಆನಂದಸಿಂಗ್, ಬಿ. ನಾಗೇಂದ್ರ ಬಿಜೆಪಿಯನ್ನು ಬಿಟ್ಟ ನಂತರ ಇಡೀ ಪಕ್ಷವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡಿರುವ ಸಂತೋಷ್ ಜೀ ಮತ್ತು ಆರ್‍ಎಸ್‍ಎಸ್, ಸಂಘ ಪರಿವಾರ ಬೇಲ್‍ ಡೀಲ್‍ನಲ್ಲಿ ಬಂಧಿತರಾಗಿ, ಜಾಮೀನಿನ ಮೇಲಿರುವ ಗಾಲಿ ಸೋಮಶೇಖರರೆಡ್ಡಿ ಅವರಿಗೆ ಪರ್ಯಾಯ ಅಭ್ಯರ್ಥಿಯನ್ನು ಅಂತಿಮಗೊಳಿಸಿದ್ದಾರೆ.

   ಜಿ. ಸೋಮಶೇಖರೆಡ್ಡಿ ಅವರಿಗೆ ಪರ್ಯಾಯವಾಗಿ ಡಾ. ಬಿ.ಕೆ. ಸುಂದರ್ ಅವರ ಹೆಸರನ್ನು ಪಕ್ಷ ಅಂತಿಮಗೊಳಿಸಿದೆ. ಅಲ್ಲದೇ, ಚುನಾವಣೆಗೆ ಸಿದ್ಧತೆ ನಡೆಸಲು ಸೂಕ್ಷಮವಾಗಿ ಗ್ರೀನ್‍ ಸಿಗ್ನಲ್ ನೀಡಿದೆ.

   ಸೋಮಶೇಖರ ರೆಡ್ಡಿ ಬದಲಿಗೆ ಡಾ. ಬಿ.ಕೆ ಸುಂದರ್

   ಸೋಮಶೇಖರ ರೆಡ್ಡಿ ಬದಲಿಗೆ ಡಾ. ಬಿ.ಕೆ ಸುಂದರ್

   ಗಾಲಿ ರೆಡ್ಡಿ ಸಹೋದರರನ್ನು ಎದುರು ಹಾಕಿಕೊಳ್ಳಲು ಸಿದ್ದವಿಲ್ಲದ ಸ್ಥಿತಿಯಲ್ಲಿದ್ದ ಬಿಜೆಪಿ ಈ ಚುನಾವಣೆಯಿಂದಲೇ ರೆಡ್ಡಿ ಸಹೋದರನ್ನು ಕೈಬಿಟ್ಟು ಜಿಲ್ಲೆಯಲ್ಲಿ ರಾಜಕೀಯ ನಡೆಸಲು ಮುಂದಾಗಿದೆ. ಜಿ. ಸೋಮಶೇಖರೆಡ್ಡಿ ಅವರಿಗೆ ಪರ್ಯಾಯವಾಗಿ ಡಾ. ಬಿ.ಕೆ. ಸುಂದರ್ ಅವರ ಹೆಸರನ್ನು ಪಕ್ಷ ಅಂತಿಮಗೊಳಿಸಿದೆ.

   ಡಾ. ಬಿ.ಕೆ. ಸುಂದರ್ ಅವರು ಕೂಡ, ಪ್ರಥಮ ಸುತ್ತಿನಲ್ಲಿ ತಮ್ಮ ವೈದ್ಯಕೀಯ ವೃತ್ತಿಯ ಆಪ್ತರು, ಮಿತ್ರರು ಮತ್ತು ವೃತ್ತಿಬಾಂಧವನ್ನು ವೈಯಕ್ತಿಕವಾಗಿ ಭೇಟಿ ಮಾಡುತ್ತಿದ್ದು, ಕಣಕ್ಕಿಳಿಯಲು ಸಜ್ಜಾಗುತ್ತಿದ್ದಾರೆ.

   ಸುಷ್ಮಾಸ್ವರಾಜ್ ಅವರ ಸಂಪೂರ್ಣ ಬೆಂಬಲ

   ಸುಷ್ಮಾಸ್ವರಾಜ್ ಅವರ ಸಂಪೂರ್ಣ ಬೆಂಬಲ

   ಅಷ್ಟೇ ಅಲ್ಲ, ಸುಷ್ಮಾಸ್ವರಾಜ್ ಅವರ ಸಂಪೂರ್ಣ ಬೆಂಬಲ ಪಡೆದಿರುವ ಸುಂದರ್, ಕಳೆದ 2 ವರ್ಷಗಳಿಂದ ಪಕ್ಷದ ವಿವಿಧ ವೇದಿಕೆಗಳಲ್ಲಿ ರಾಜ್ಯ - ರಾಷ್ಟ್ರ ಬಿಜೆಪಿ ಮುಖಂಡರ ಜೊತೆ ಆಪ್ತ ಸಮಾಲೋಚನೆ ನಡೆಸಿದ್ದಾರೆ. ಕಳೆದಬಾರಿ ಶೋಭಾಕರಂದ್ಲಾಜೆ ಅವರು ಬಳ್ಳಾರಿಗೆ ಭೇಟಿ ನೀಡಿದಾಗ, ಡಾ. ಬಿ.ಕೆ. ಸುಂದರ್, ಅವರ ತಂದೆ ಡಾ. ಬಿ.ಕೆ. ಶ್ರೀನಿವಾಸಮೂರ್ತಿ ಅವರೊಂದಿಗೂ ರಾಜಕೀಯ ಪ್ರವೇಶದ ಚರ್ಚೆ ನಡೆಸಿದ್ದರು ಎನ್ನಲಾಗಿದೆ.

   ರೆಡ್ಡಿ ವಿರೋಧಗಳ ಬೆಂಬಲವೂ ಇದೆ

   ರೆಡ್ಡಿ ವಿರೋಧಗಳ ಬೆಂಬಲವೂ ಇದೆ

   ಸುಷ್ಮಾಸ್ವರಾಜ್ ಅವರ ಬೆಂಬಲದಿಂದಲೇ ರಾಜಕೀಯ ಪ್ರವೇಶವನ್ನು ಮಾಡುತ್ತಿರುವ ಡಾ. ಬಿ.ಕೆ. ಸುಂದರ್, ಸೈಕ್ಲಿಂಗ್, ಪರಿಸರ ಜಾಗೃತಿ, ಆರೋಗ್ಯ ಶಿಬಿರಗಳನ್ನು ಏರ್ಪಡಿಸುವ ಮೂಲಕ ಗುಪ್ತವಾಗಿ ಜನಸಂಪರ್ಕ ಸಾಧಿಸುತ್ತಿದ್ದಾರೆ. ಜಿ. ಸೋಮಶೇಖರರೆಡ್ಡಿ ಮತ್ತು ರೆಡ್ಡಿ ಪರಿವಾರವನ್ನು ವಿರೋಧಿಸುವ ಎಲ್ಲರೂ ಇವರೊಂದಿಗೆ ಗುರುತಿಸಿಕೊಳ್ಳಲು ಉತ್ಸುಕರಾಗಿದ್ದಾರೆ.

   ಡಾ. ಸುಂದರ್ ಹಿನ್ನಲೆ

   ಡಾ. ಸುಂದರ್ ಹಿನ್ನಲೆ

   1999ರಲ್ಲಿ ಸುಷ್ಮಾಸ್ವರಾಜ್ ಅವರು ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದಾಗ ನಗರದ ಖ್ಯಾತ ವೈದ್ಯ ಡಾ. ಬಿ.ಕೆ. ಶ್ರೀನಿವಾಸಮೂರ್ತಿ ಅವರ ಕುಟುಂಬದ ನಂಟು ಶುರುವಾಯಿತು. ಒಂದು ಹಂತದಲ್ಲಿ ಡಾ. ಬಿ.ಕೆ. ಸುಂದರ್ ಅವರು ಸುಷ್ಮಾಸ್ವರಾಜ್ ಅವರ ಕುಟುಂಬದ ಸದಸ್ಯರಾಗುವ ಅವಕಾಶವೂ ಇತ್ತು.

   ಅಂದಿನಿಂದ ಪ್ರತೀವರ್ಷದ ಶ್ರಾವಣ ಶುಕ್ರವಾರಕ್ಕೆ ಬಳ್ಳಾರಿಗೆ ಬಂದು ಬಳ್ಳಾರಿಯ ಮಗಳಂತೆ ವರಮಹಾಲಕ್ಷ್ಮೀವ್ರತದಲ್ಲಿ ಪಾಲ್ಗೊಳ್ಳುವ ಭರವಸೆ ನೀಡಿದ್ದ ಸುಷ್ಮಾಸ್ವರಾಜ್, ಕಾಲಾನಂತರ ಬಳ್ಳಾರಿಗೆ ಆಗಮಿಸುತ್ತಿಲ್ಲ.

   ಶುದ್ಧಹಸ್ತದವರಿಗೆ ರಾಜಕೀಯ ಅವಕಾಶ

   ಶುದ್ಧಹಸ್ತದವರಿಗೆ ರಾಜಕೀಯ ಅವಕಾಶ

   ಡಾ.ಬಿ.ಕೆ. ಶ್ರೀನಿವಾಸಮೂರ್ತಿ ಮತ್ತು ಅವರ ಕುಟುಂಬದ ಸದಸ್ಯರ ಜೊತೆಯಲ್ಲಿ ನಿರಂತರ ಸಂಪರ್ಕ ಹೊಂದಿರುವ ಸುಷ್ಮಾ ಸ್ವರಾಜ್ ಅವರು ಶುದ್ಧಹಸ್ತದವರಿಗೆ ರಾಜಕೀಯ ಅವಕಾಶ ಕಲ್ಪಿಸಬೇಕು ಎನ್ನುವ ವಿಚಾರಕ್ಕೆ ಬೆಂಬಲ ನೀಡಿ, ಡಾ. ಬಿ.ಕೆ. ಸುಂದರ್ ಅವರ ಹೆಸರನ್ನು ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಅವರೇ ಶಿಫಾರಸ್ಸು ಮಾಡಿದ್ದಾರೆ ಎಂದು ಮೂಲಗಳು ಬಲಪಡಿಸಿವೆ.

   ಪರ್ಯಾಯ ಅಭ್ಯರ್ಥಿಯನ್ನು ಹುಡುಕಾಟ

   ಪರ್ಯಾಯ ಅಭ್ಯರ್ಥಿಯನ್ನು ಹುಡುಕಾಟ

   ಬೇಲ್ ಡೀಲ್ ನಲ್ಲಿ ಆರೋಪಿ ಆಗಿರುವ ಜಿ. ಸೋಮಶೇಖರರೆಡ್ಡಿ ಚುನಾವಣೆಯ ವೇಳೆಗೆ ಪುನಃ ಕಾನೂನಾತ್ಮಕ ತೊಂದರೆಗೆ ಸಿಲುಕಿದಲ್ಲಿ ಪರ್ಯಾಯ ಅಭ್ಯರ್ಥಿಯನ್ನು ಹುಡುಕಾಡುವ ಬದಲು, ಈಗಲೇ ಸಿದ್ಧಪಡಿಸಿಕೊಳ್ಳಬೇಕು ಎನ್ನುವ ದೂರದೃಷ್ಟಿಯಿಂದ ಡಾ. ಬಿ.ಕೆ. ಸುಂದರ್ ಅವರನ್ನು ಕಣಕ್ಕಿಳಿಸಲು ಸಿದ್ಧತೆ ನಡೆಸಲು ಪಕ್ಷ ನಿರ್ಧರಿಸಿದೆ.

   ಆದರೆ, ಬಿಜೆಪಿಯ ಹೈಕಮಾಂಡ್‍ನ ನಿಗೂಢನಡೆ ಜಿ. ಸೋಮಶೇಖರರೆಡ್ಡಿ ಅವರತ್ತ ವಾಲುವ ಸಂದರ್ಭಗಳು ಡೋಲಾಯಮಾನವಾಗಿದೆ. ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿ ಹಾಗು ಪಕ್ಷದ ಪಾರ್ಲಿಮೆಂಟರಿ ಕಮಿಟಿ ಕರ್ನಾಟಕ ರಾಜಕೀಯದ ಆಗುಹೋಗುಗಳ ನಿರ್ಧಾರಗಳನ್ನು ಕೈಗೊಳ್ಳಲಿದೆ. ಆಗ, ಡಾ. ಬಿ.ಕೆ. ಸುಂದರ್ ಮೇಲುಗೈ ಸಾಧಿಸಲಿದ್ದಾರೆ ಎನ್ನುತ್ತದೆ ಬಿಜೆಪಿ.

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   BJP high command may surprise everyone by giving ticket to Dr Sundar to contest from Bellary assembly constituency in upcoming elections 2018. BJP is risking by snubbing Gali Reddy gang.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more