ವಿದ್ಯುತ್ ತಂತಿ ತಗುಲಿ ಕೊಟ್ಟೂರು ಜಾತ್ರೆಗೆ ಬಂದಿದ್ದ ಭಕ್ತ ಸಾವು
ಬಳ್ಳಾರಿ, ಫೆಬ್ರವರಿ 19: ಬಳ್ಳಾರಿ ಜಿಲ್ಲೆಯ ಸುಪ್ರಸಿದ್ಧ ಕೊಟ್ಟೂರೇಶ್ವರ ಜಾತ್ರೆಯಲ್ಲಿ ವಿದ್ಯುತ್ ಅವಘಡ ಸಂಭವಿಸಿ ಭಕ್ತರೊಬ್ಬರು ಸಾವಿಗೀಡಾದ ಘಟನೆ ನಡೆದಿದೆ.
ಬಳ್ಳಾರಿ ಜಿಲ್ಲೆಯ ಕೊಟ್ಟೂರಿನ ಕೊಟ್ಟೂರೇಶ್ವರ ಜಾತ್ರೆ ನಿನ್ನೆ ಸಂಜೆ ಐದು ಗಂಟೆ ಸುಮಾರಿಗೆ ನಡೆದಿದ್ದು, ಜಾತ್ರೆಗೆ ಬಂದಿದ್ದ ಹೂವಿನಹಡಗಲಿ ಮೂಲದ ನಿವಾಸಿ ಕೊಟ್ರೇಶ್ (48) ಎಂಬುವರು ಸಾವಿಗೀಡಾಗಿದ್ದಾರೆ.
ಸಂಜೆ ನಡೆದ ಜಾತ್ರೆಗೆ ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿದ್ದರು. ಜಾತ್ರೆಯ ತೇರನ್ನು ನೋಡಲು ಕೊಟ್ರೇಶ್ ರಥೋತ್ಸವ ನಡೆಯುವ ಪಕ್ಕದ ಮನೆಯ ಮುಂದೆ ಇರುವ ಮರವನ್ನು ಏರಿದ್ದರು. ಆಗ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿ ಸಾವಿಗೀಡಾಗಿದ್ದಾರೆ.

ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಸಾಗಿಸುವ ಮಾರ್ಗ ಮಧ್ಯದಲ್ಲಿ ಕೊಟ್ರೇಶ್ ಸಾವನ್ನಪ್ಪಿದ್ದಾರೆ. ಈ ಸಂಬಂಧ ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications