Get Updates
Get notified of breaking news, exclusive insights, and must-see stories!

'ಇದು ನನ್‌ ಏರಿಯಾ..ನನ್ನನ್ನೇ ತಡೀತಿಯಾ..' ಫುಲ್‌ ಗರಂ ಆದ ಶಾಸಕ

ಮಳೆಯಿಂದಾಗಿ ತುಂಗಭದ್ರಾ ಜಲಾಶಯ ಭರ್ತಿಯಾದ ಹಿನ್ನೆಲೆ ಇಂದು ಮೊದಲ ಬಾರಿಗೆ ತುಂಗಭದ್ರಾ ಜಲಾಶಯಕ್ಕೆ ಸಿಎಂ ಸಿದ್ದರಾಮಯ್ಯ ಅವರು ಬಾಗಿನ ಅರ್ಪಿಸಿದ್ದಾರೆ. ಇದಕ್ಕೂ ಮುನ್ನ ಇಲ್ಲಿನ ಸ್ಥಳೀಯ ಶಾಸಕರು ಕಾರ್ಯಕ್ರಮದ ಸ್ಥಳದಲ್ಲಿ ವಾಗ್ವಾದ ನಡೆಸಿ, ಬೇಸರದಿಂದ ಮುನಿಸಿಕೊಂಡಿರುವ ಘಟನೆ ವರದಿಯಾಗಿದೆ.

ವಿಜಯನಗರದ ಸ್ಥಳೀಯ ಕಾಂಗ್ರೆಸ್‌ ಶಾಸಕರಾದ ಎಚ್‌.ಆರ್.ಗವಿಯಪ್ಪ ಅವರು ಕಾರ್ಯಕ್ರಮದ ನಿಮಿತ್ತ ಜಲಾಶಯದ ಬಳಿಗೆ ಇಂದು ಬೆಳಿಗ್ಗೆ ಬಂದಿದ್ದರು. ಈ ವೇಳೆ ತಮ್ಮ ಜತೆ ಅನುಯಾಯಿಗಳು ಕೂಡ ಬಂದಿದ್ದರು. ಆದರೆ, ಅಲ್ಲಿದ್ದ ಪೊಲೀಸರು ಶಾಸಕರನ್ನು ಮಾತ್ರ ಒಳಗೆ ಬಿಟ್ಟು, ಇವರ ಜೊತೆಗಿದ್ದವರನ್ನು ತಡೆದಿದ್ದಾರೆ ಎನ್ನಲಾಗಿದೆ.

Congress MLA Gaviyappa Is Angry With The Government

ಇದಕ್ಕೆ ಕೋಪಗೊಂಡ ಶಾಸಕ ಗವಿಯಪ್ಪ, ಇದು ನನ್ನ ಕ್ಷೇತ್ರ, ನಾನು ಶಾಸಕನಿದ್ದೇನೆ. ಇಲ್ಲಿ ನನ್ನನ್ನೇ ತಡೆಯುತ್ತೀರಾ ಎಂದು ಪೊಲೀಸರಿಗೆ ಅವಾಜ್‌ ಕೂಡ ಹಾಕಿದ್ದಾರೆ. ಬಳಿಕ ಈ ಕಾರ್ಯಕ್ರಮವನ್ನು ನೀವೇ ಮಾಡ್ಕೊಳ್ಳಿ ಎಂದು ಸವಾಲು ಹಾಕಿ ಅಲ್ಲಿಂದ ಹೊರಟು ಹೋಗಿದ್ದಾರೆ ಎಂದು ವರದಿಯಾಗಿದೆ.

ಬಳಿಕ ಸಿಎಂ ಸಿದ್ದರಾಮಯ್ಯ ಅವರು ಬಂದು ಕಾರ್ಯಕ್ರಮ ನೆರವೇರಿಸಿದರೂ ಶಾಸಕರು ಗೈರಾಗಿದ್ದರು. ಡ್ಯಾಂ ಸಮೀಪಕ್ಕೆ ಬಿಡಲಿಲ್ಲ ಎಂದು ಕೋಪಗೊಂಡು ತಮ್ಮ ಕಚೇರಿಯಲ್ಲಿ ಕುಳಿತಿದ್ದರು. ಈ ಮೂಲಕ ತಮ್ಮ ಅಸಮಾಧಾನವನ್ನು ಶಾಸಕರು ಹೊರಹಾಕಿದ್ದಾರೆ. ಈ ವಿಚಾರ ತಿಳಿದು ಡಿವೈಎಸ್‌ಪಿ, ತಹಶೀಲ್ದಾರ್ ಅವರು ಶಾಸಕ ಗವಿಯಪ್ಪ ಅವರ ಕಚೇರಿಗೆ ಹೋಗಿ ಸಮಾಧಾನ ಮಾಡಿದರೂ ಅವರ ಕೋಪ ತಣ್ಣಗಾಗಲಿಲ್ಲ ಎಂದು ಹೇಳಲಾಗಿದೆ.

Congress MLA Gaviyappa Is Angry With The Government

ಅಂತೂ ಶಾಸಕರ ಅನುಪಸ್ಥಿತಿಯಲ್ಲೇ ಕಾರ್ಯಕ್ರಮ ನೆರವೇರಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಬಾಗಿನ ಅರ್ಪಿಸಿದ್ದಾರೆ. ಈ ವೇಳೆ ಮಾತನಾಡಿರುವ ಸಿಎಂ ಸಿದ್ದರಾಮಯ್ಯ, ಕ್ರಸ್ಟ್ ಗೇಟ್‌ಗಳನ್ನು 50 ವರ್ಷಕ್ಕೊಮ್ಮೆ ಬದಲಿಸಬೇಕು. 70 ವರ್ಷಗಳಿಂದ ಗೇಟ್‌ಗಳು ಉತ್ತಮವಾಗಿ ಕಾರ್ಯನಿರ್ವಹಿಸಿವೆ. ಉತ್ತಮ ನಿರ್ವಹಣೆ ಮಾಡಿರುವುದರಿಂದ 70 ವರ್ಷ ಕೆಲಸ ಮಾಡಿದೆ. ಪ್ರಸ್ತುತ ತಜ್ಞರ ಸಮಿತಿ ರಚನೆಯಾಗಿದ್ದು, ಅವರು ವರದಿ ನೀಡಿದ ನಂತರ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

ತುಂಗಭದ್ರ ಜಲಾಶಯ ಮತ್ತೆ ತುಂಬಿದೆ. 101.77 ಟಿ.ಎಂ.ಸಿ ನೀರು ಲಭ್ಯವಿದೆ. ಮುಂಗಾರು ಮತ್ತು ಹಿಂಗಾರು ಬಿತ್ತನೆಗೆ ನೀರು ಸಿಗಲಿದೆ. ಕೊಚ್ಚಿಹೋಗಿದ್ದ 19ನೇ ಕ್ರಸ್ಟ್ ಗೇಟ್ ಅನ್ನು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್, ಶಿವರಾಜ ತಂಗಡಗಿ, ಜಮೀರ್ ಅಹಮದ್ ಖಾನ್ ಅವರು ಸ್ಥಳದಲ್ಲಿಯೇ ಇದ್ದು ದುರಸ್ತಿಗೆ ಕ್ರಮ ವಹಿಸಿದರು ಎಂದು ಶ್ಲಾಘಿಸಿದ್ದಾರೆ.

ತಜ್ಞರಾ ಕನ್ನಯ್ಯ ನಾಯ್ಡು ಅವರ ನೇತೃತ್ವದಲ್ಲಿ, ಜಿಂದಾಲ್, ನಾರಾಯಣ್ ಇಂಜಿನಿಯರಿಂಗ್ ಹಾಗೂ ಇಂಜಿನಿಯರ್‌ಗಳು, ಅಧಿಕಾರಿಗಳು ಹಗಲು ರಾತ್ರಿ ಕೆಲಸ ಮಾಡಿದ್ದರಿಂದ ಆದಷ್ಟು ಬೇಗ ಗೇಟ್ ಅಳವಡಿಸಲು ಸಾಧ್ಯವಾಯಿತು. ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಯಿತು. 20ಕ್ಕೂ ಹೆಚ್ಚು ಟಿ.ಎಂ.ಸಿ ನೀರು ಉಳಿಯಿತು ಎಂದು ಸಿಎಂ ಸಂತಸ ವ್ಯಕ್ತಪಡಿಸಿದ್ದಾರೆ.

ಸದ್ಯ ಬೆಳೆಗೆ ನೀರು ಸಿಗುತ್ತದೋ ಇಲ್ಲವೋ ಎಂಬ ರೈತರ ಆತಂಕ ನಿವಾರಣೆಯಾಗಿದೆ. ಹಿಂಗಾರಿನ ಬೆಳೆಗೆ ಯಾವುದೇ ತೊಂದರೆ ಇಲ್ಲ. ಎರಡನೇ ಬೆಳೆಗೆ ನೀರು ಒದಗಿಸಲು ಪ್ರಯತ್ನಿಸಲಾಗುವುದು. 101 ಟಿಎಂಸಿ ಲಭ್ಯವಿರುವುದರಿಂದ ನೀರು ಲಭ್ಯವಾಗಬಹುದು ಎಂದು ಹೇಳಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+