ಬಳ್ಳಾರಿ-ಶಿರಗುಪ್ಪ-ಲಿಂಗಸುಗೂರು ರೈಲ್ವೇ ಮಾರ್ಗಕ್ಕೆ ಅನುದಾನ ನೀಡಿ
ಬಳ್ಳಾರಿ ಸೆಪ್ಟೆಂಬರ್ 23: ಬಳ್ಳಾರಿ-ಶಿರಗುಪ್ಪ-ಲಿಂಗನಸೂರು ನೂತನ ರೈಲ್ವೇ ಮಾರ್ಗದ ಕಾಮಗಾರಿ ಆರಂಭಕ್ಕೆ 2014 - 15 ರ ಕೇಂದ್ರ ಆಯವ್ಯಯದಲ್ಲಿ ಘೋಷಿಸಲಾಗಿದ್ದ ಅಗತ್ಯವಿರುವ ಅನುದಾನವನ್ನು ನೀಡಿ ಶೀಘ್ರ ಕಾಮಗಾರಿ ಪ್ರಾರಂಭಿಸಲು ಅನುವು ಮಾಡಿಕೊಡುವಂತೆ ಬಳ್ಳಾರಿ ಸಂಸದರಾದ ವೈ ದೇವೇಂದ್ರಪ್ಪ ಸಂಸತ್ತಿನ ಅಧಿವೇಶನದಲ್ಲಿ ಕೇಂದ್ರ ಸರಕಾರಕ್ಕೆ ಮನವಿ ಮಾಡಿದ್ದಾರೆ.
ಇಂದು ಈ ಬಗ್ಗೆ ಸಂಸತ್ತಿನ ಶೂನ್ಯ ವೇಳೆಯಲ್ಲಿ ವಿಷಯವನ್ನು ಅವರು ಪ್ರಸ್ಥಾಪಿಸಿದರು. 2014-15 ರ ಆಯವ್ಯಯದಲ್ಲಿ ನೂತನ ರೈಲ್ವೇ ಮಾರ್ಗದ ಪ್ರಾರಂಭಕ್ಕೆ ಘೋಷಣೆ ಮಾಡಲಾಗಿತ್ತು. ಈ ಬಗ್ಗೆ 1160 ಕೋಟಿ ರೂಪಾಯಿಗಳ ಅಂದಾಜನ್ನು 2019 ರ ಜನವರಿಯಲ್ಲಿ ರೈಲ್ವೇ ಬೋರ್ಡ್ ಗೆ ಸಲ್ಲಿಸಲಾಗಿದೆ.
ಆದರೆ 2019-20 ರ ಅಯವ್ಯಯದಲ್ಲಿ ಇದಕ್ಕೆ ಯಾವುದೇ ಅನುದಾನವನ್ನು ಘೋಷಿಸದೇ ಇರುವ ಹಿನ್ನಲೆಯಲ್ಲಿ ಇದು ರೈಲ್ವೇ ಬೋರ್ಡಿನಲ್ಲಿಯೇ ನೆನೆಗುದಿಗೆ ಬಿದ್ದಿದೆ. ಬಳ್ಳಾರಿ - ಶಿರಗುಪ್ಪ - ಸಿಂಧನೂರು - ಲಿಂಗನಸೂರು ರೈಲ್ವೇ ಮಾರ್ಗ ನಿರ್ಮಿಸುವುದರಿಂದ ವಾಡಿ, ಸೋಲಾಪೂರ್, ಉತ್ತರ ಭಾರತ ಈಶಾನ್ಯ ಭಾರತ ಮತ್ತು ಕಲ್ಯಾಣ ಕರ್ನಾಟಕ್ಕೆ ಸಂಕರ್ಪ ಕಲ್ಪಿಸಿದಂತಾಗುತ್ತದೆ. ಆದ್ದರಿಂದ ಈ ಕಾರ್ಯಕ್ಕೆ ಆರ್ಥಿಕ ಅನುದಾನ ನೀಡಿ ಕೆಲಸ ಪ್ರಾರಂಭಿಸಲು ಅನುವು ಮಾಡಿಕೊಡಬೇಕೆಂದು ಮನವಿ ಮಾಡಿದರು.

ಇದೇ ವೇಳೆ ದೇಶಾದ್ಯಂತ ರೈತರು ಉಪಯೋಗಿಸುವ ಯಂತ್ರೋಪಕರಣಗಳ ದರದ ಬಗ್ಗೆ ಸಾಕಷ್ಟು ಗೊಂದಲಗಳಿವೆ. ಇದನ್ನು ಪರಿಹರಿಸುವ ನಿಟ್ಟಿನಲ್ಲಿ ಆಯಾ ಯಂತ್ರೋಪಕರಣಗಳ ದರಪಟ್ಟಿಯನ್ನು ಕಿಸಾನ್ ವೈಬ್‌ಸೈಟಿನಲ್ಲಿ ನಮೂದಿಸುವಂತೆ ಮನವಿ ಮಾಡಿದರು.

ಕನ್ನಡದಲ್ಲಿ ಮಾತನಾಡುವ ಮೂಲಕ ಸಕ್ರಿಯವಾಗಿ ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಂತಹ ಹಲವಾರು ಸಮಸ್ಯೆಗಳನ್ನು ಸಂಸತ್ತಿನ ಮುಂದಿಟ್ಟರು.












Click it and Unblock the Notifications