ಪ್ರಚಾರದ ತಲೆಬಿಸಿಯಲ್ಲಿ ಮತ ಹಾಕುವುದನ್ನೇ ಮರೆತ ವಿ ಎಸ್ ಉಗ್ರಪ್ಪ!

ಬಳ್ಳಾರಿ, ಏಪ್ರಿಲ್ 19: "ಮತದಾನ ಪ್ರತಿ ಭಾರತೀಯ ಪ್ರಜೆಯ ಮೂಲಭೂತ ಹಕ್ಕು, ಮತದಾನದಂಥ ಶ್ರೇಷ್ಠ ದಾನ ಬೇರೊಂದಿಲ್ಲ, ನಿಮ್ಮ ಒಂದು ಮತ ದೇಶದ ಭವಿಷ್ಯ ಬದಲಿಸಬಹುದು" ಎಂಬಿತ್ಯಾದಿ ಘೋಷಣೆಗಳನ್ನು ಕೂಗುವ ರಾಜಕೀಯ ನಾಯಕರೇ ಮತ ಚಲಾಯಿಸದಿದ್ದರೆ ಹೇಗೆ?

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಬಳ್ಳಾರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿ ಎಸ್ ಉಗ್ರಪ್ಪ ಅವರು ತಮ್ಮ ಮತವನ್ನೇ ಚಲಾಯಿಸದೆ ಅಂಥದೊಂದು ಪ್ರಮಾದ ಮಾಡಿದ್ದಾರೆ. 'ಮತ ಚಲಾಯಿಸಿ' ಎಂದು ಜನರಲ್ಲಿ ಮನವಿ ಮಾಡುವ, ಅಥವಾ ಸಲಹೆ ನೀಡುವ ಹಕ್ಕನ್ನೇ ಈ ಮೂಲಕ ಅವರು ಕಳೆದುಕೊಂಡಿದ್ದಾರೆ!

ವಿ ಎಸ್ ಉಗ್ರಪ್ಪನವರು ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಮತದಾನದ ಹಕ್ಕು ಪಡೆದಿದ್ದರು. ಆದರೆ ಬಳ್ಳಾರಿಯಲ್ಲಿ ಸ್ವತಃ ಅಭ್ಯರ್ಥಿಯಾಗಿರುವುದರಿಂದ ಪ್ರಚಾರದ ತಲೆಬಿಸಿಯಲ್ಲಿದ್ದ ಅವರು ಮತದಾನ ಮಾಡುವ 'ಸಣ್ಣ' ಕಾರ್ಯಕ್ಕಾಗಿ ಬೆಂಗಳೂರಿನವರೆಗೆ ಯಾಕೆ ಬರಬೇಕು ಎಂದು ಭಾವಿಸಿ, ಮತದಾನವನ್ನೇ ಮಾಡದೆ ಉಳಿದರು!

Ballari Congress candidate VS Ugrappa does not cast his vote

ಅವರ ಈ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಲೇವಡಿ ವ್ಯಕ್ತವಾಗಿದ್ದು, 'ಅದ್ಹೇಗೆ ಮತದಾರರಲ್ಲಿ ನೀವು ಮತ ಕೇಳ್ತೀರಾ?' ಎಂದು ಅವರನ್ನು ತರಾಟೆಗೆ ತೆಗೆದುಕೊಳ್ಳಲಾಗಿದೆ.

ಬಿಜೆಪಿ, ಕಾಂಗ್ರೆಸ್, ಸಿಪಿಎಂ ಪ್ರಣಾಳಿಕೆಯ ತುಲನೆ. ಯಾವ ಪಕ್ಷದ ಪ್ರಣಾಳಿಕೆ ಉತ್ತಮವಾಗಿದೆ?

ಕಳೆದ ವರ್ಷ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಶಾಸಕ ಶ್ರೀರಾಮಲು ಅವರ ಸಹೋದರಿ ಶಾಂತಾ ಅವರನ್ನು ಸೋಲಿಸಿ ಸಂಸದರಾಗಿದ್ದ ವಿ ಎಸ್ ಉಗ್ರಪ್ಪ ಅವರನ್ನು ಕಾಂಗ್ರೆಸ್ ಮತ್ತೊಮ್ಮೆ ಕಣಕ್ಕಿಳಿಸಿದೆ. ಬಿಜೆಪಿ ಅಭ್ಯರ್ಥಿಯಾಗಿ ವೈ.ದೇವೇಂದ್ರಪ್ಪ ಅವರು ಕಣದಲ್ಲಿದ್ದಾರೆ.

ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ ಏಪ್ರಿಲ್ 23 ರಂದು ಮತದಾನ ನಡೆಯಲಿದ್ದು, ಮೇ 23 ಕ್ಕೆ ಫಲಿತಾಂಶ ಹೊರಬೀಳಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+