ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಳ್ಳಾರಿಯಲ್ಲಿನ ಐಟಿ ದಾಳಿಗೂ ನನಗೂ ಯಾವುದೇ ರೀತಿಯ ಸಂಬಂಧವಿಲ್ಲ: ಶ್ರೀ ರಾಮುಲು ಸ್ಪಷ್ಟನೆ

|
Google Oneindia Kannada News

ಬಳ್ಳಾರಿ, ಜನವರಿ, 17: ಬಳ್ಳಾರಿಯಲ್ಲಿ ಉದ್ಯಮಿ ಕೈಲಾಶ್ ವ್ಯಾಸ ಅವರ ಕಚೇರಿ ಮೇಲೆ ಎರಡು ದಿನಗಳ ಹಿಂದೆ ಐಟಿ ನಡೆದಿತ್ತು. ಈ ಬಗ್ಗೆ ಸಚಿವ ಶ್ರೀರಾಮುಲು ಪ್ರತಿಕ್ರಿಯೆ ನೀಡಿದ್ದು, ಬಳ್ಳಾರಿಯಲ್ಲಿ ನಡೆದ ಐಟಿ ದಾಳಿಗೂ ನನಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಹೇಳಿದ್ದಾರೆ.

ಆರೋಪ ತಳ್ಳಿಹಾಕಿದ ರಾಮುಲು
ಬಳ್ಳಾರಿಯಲ್ಲಿನ ಉದ್ಯಮಿ ಕೈಲಾಶ್ ವ್ಯಾಸ್‌ಗೆ ಶ್ರೀರಾಮುಲು ಮತ್ತು ಕಂಪ್ಲಿ ಮಾಜಿ ಶಾಸಕ ಸುರೇಶ್ ಬಾಬು ಆಪ್ತರಾಗಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದ್ದವು. ಇದೀಗ ಇದಕ್ಕೆ ಶ್ರೀರಾಮುಲು ನನಗೂ, ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳುವ ಮೂಲಕ ತಮ್ಮ ಮೇಲಿನ ಆರೋಪವನ್ನು ತಳ್ಳಿಹಾಕಿದ್ದಾರೆ. ಜನವರಿ 13 ರಂದು ಐಟಿ ಅಧಿಕಾರಿಗಳು ಕೈಲಾಶ್ ವ್ಯಾಸ ಅವರ ಕಚೇರಿ ಮತ್ತು ಉದ್ಯಮಗಳ ಮೇಲೆ ದಾಳಿ ನಡೆಸಿದ್ದರು. ಕೈಲಾಶ್‌ ವ್ಯಾಸ್‌ ಮನೆ ಮತ್ತು ಕಚೇರಿಗಳಲ್ಲಿನ ಎಲ್ಲಾ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದರು. ಈ ವೇಳೆ ಅಧಿಕಾರಿಗಳು ಈತನಿಗೆ ಕೆಲವು ರಾಜಕಾರಣಿಗಳ ನಂಟು ಇದೆ ಎಂದು ಶಂಕೆ ವ್ಯಕ್ತಪಡಿಸಿದ್ದರು. ಶ್ರೀರಾಮುಲು, ಸುರೇಶ್ ಬಾಬು ಮತ್ತು ಕಾಂಗ್ರೆಸ್ ಮುಖಂಡ ಅನಿಲ್ ಲಾಡ್‌ ಈತನ ಕಂಪನಿಯಲ್ಲಿ ಷೇರು ಹೊಂದಿದ್ದಾರೆ ಎಂದು ಆರೋಪಿಸಲಾಗಿತ್ತು.

ಸಿಟಿ ರವಿ ವಿರುದ್ಧ ಸ್ಪರ್ಧಿಸಲು ಹೊರಟಿದ್ದ 'ಕೈ' ಟಿಕೆಟ್‌ ಆಕಾಂಕ್ಷಿಗೆ ಐಟಿ ಶಾಕ್‌- ಚಿಕ್ಕಮಗಳೂರು ಮೆಗಾ ರೇಡ್‌ ಹಿಂದೆ ರಾಜಕೀಯ?ಸಿಟಿ ರವಿ ವಿರುದ್ಧ ಸ್ಪರ್ಧಿಸಲು ಹೊರಟಿದ್ದ 'ಕೈ' ಟಿಕೆಟ್‌ ಆಕಾಂಕ್ಷಿಗೆ ಐಟಿ ಶಾಕ್‌- ಚಿಕ್ಕಮಗಳೂರು ಮೆಗಾ ರೇಡ್‌ ಹಿಂದೆ ರಾಜಕೀಯ?

ಐಟಿ ದಾಳಿಗೂ ನನಗೂ ಸಂಬಂಧವಿಲ್ಲ
ಈ ಬೆಳವಣಿಗೆಗಳ ಬೆನ್ನಲ್ಲೇ ಶ್ರೀರಾಮುಲು ಪ್ರತಿಕ್ರಿಯೆ ನೀಡಿದ್ದು, ಬಳ್ಳಾರಿಯಲ್ಲಿ ನಡೆದ ಐಟಿ ದಾಳಿಗೂ ನನಗೂ ಯಾವುದೇ ರೀತಿಯ ಸಂಬಂಧವಿಲ್ಲ. ನನ್ನ ಹೆಂಡತಿಯ ಕಂಪನಿಯಲ್ಲಿ ಷೇರು ಹೊಂದಿದ್ದೇನೆ, ಅದು ಕಾನೂನುಬದ್ಧವಾಗಿದೆ. ಸಮಯಕ್ಕೆ ಸರಿಯಾಗಿ ಐಟಿ ರಿಟರ್ನ್‌ಗಳನ್ನು ಸಲ್ಲಿಸುತ್ತೇನೆ. ಮತ್ತು ಬಳ್ಳಾರಿಯಲ್ಲಿನ ಎಲ್ಲಾ ಐಟಿ ದಾಳಿಗಳನ್ನು ನನಗೆ ಲಿಂಕ್ ಮಾಡಬಾರದು ಎಂದು ತಿಳಿಸಿದ್ದರು.

B Sriramulu clarification about IT raid in Ballari

ಕಾಂಗ್ರೆಸ್ ಮುಖಂಡನಿಗೂ ಐಟಿ ಶಾಕ್‌
ಹಾಗೆಯೇ ಕಾಫಿನಾಡು ಚಿಕ್ಕಮಗಳೂರಿನಲ್ಲಿ ಎರಡು ತಿಂಗಳ ಅವಧಿಯಲ್ಲಿ ಇಬ್ಬರು ಕಾಂಗ್ರೆಸ್ ಮುಖಂಡರ ಮನೆ ಮೇಲೆ ಐಟಿ ದಾಳಿಯಾಗಿದೆ. ಕಳೆದ ನವೆಂಬರ್ 17ರಂದು ಮಾಜಿ ವಿಧಾನ ಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ ಅವರ ಮನೆ ಮೇಲೂ ಐಟಿ ದಾಳಿಯಾಗಿತ್ತು. ಮದುವೆಗೆ ಹೋಗುವ ಸೋಗಿನಲ್ಲಿ 10ಕ್ಕೂ ಹೆಚ್ಚು ಕಾರಿನಲ್ಲಿ 50ಕ್ಕೂ ಹೆಚ್ಚು ಅಧಿಕಾರಿಗಳು ಬಂದು ದಾಳಿ ಮಾಡಿದ್ದರು. ಸೋಮವಾರ (ಜನವರಿ 16) ಮತ್ತೆ ಕೆಪಿಸಿಸಿ ಕಿಸಾನ್ ಸೆಲ್ ರಾಜ್ಯ ಸಂಚಾಲಕ ಅಕ್ಮಲ್ ಮನೆ ಮೇಲೂ ಐಟಿ ಅಧಿಕಾರಿಗಳು ದಾಳಿ ಮಾಡಿದ್ದರು.

B Sriramulu clarification about IT raid in Ballari

8ಕ್ಕೂ ಹೆಚ್ಚು ಕಾರಿನಲ್ಲಿ ಬಂದಿರುವ ಅಧಿಕಾರಿಗಳು ಏಕಕಾಲದಲ್ಲಿ ಅಕ್ಮಲ್ ಮನೆ, ಕಚೇರಿ, ಸೋದರನ ಮನೆ ಹಾಗೂ ಕಾಫಿ ಕ್ಯೂರಿಂಗ್ ಮೇಲೂ ದಾಳಿ ಮಾಡಿದ್ದರು. ಪ್ರಸ್ತುತ ಅಕ್ಮಲ್ ಬೆಂಗಳೂರಿನಲ್ಲಿ ಇದ್ದು, ಅವರ ಅನುಪಸ್ಥಿತಿಯಲ್ಲಿ ಮನೆ-ಕಚೇರಿಯಲ್ಲಿ ಅಧಿಕಾರಿಗಳು ದಾಖಲೆ ಪರಿಶೀಲನೆ ನಡೆಸಿದ್ದರು. ಆದರೆ, ಎರಡು ತಿಂಗಳ ಅವಧಿಯಲ್ಲಿ ಇಬ್ಬರು ಕಾಂಗ್ರೆಸ್ ಮುಖಂಡರ ಮನೆ ಮೇಲೆ ಅಧಿಕಾರಿಗಳು ದಾಳಿ ಮಾಡಿದ್ದು, ಐಟಿ ಅಧಿಕಾರಿಗಳ ವಿರುದ್ಧ ಕಾಂಗ್ರೆಸ್ ಆಕ್ರೋಶ ಹೊರಹಾಕುತ್ತಿದೆ.

English summary
IT raid on businessman's house in Ballari, B Sriramulu clarification about IT raid in Ballari, know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X