ಬಳ್ಳಾರಿ: ಆಟೋ ಕಾಲುವೆಗೆ ಬಿದ್ದು ಕೊಚ್ಚಿ ಹೋಗಿದ್ದ ಪ್ರಕರಣ; ಒಬ್ಬರ ಶವ ಆಂಧ್ರದಲ್ಲಿ ಪತ್ತೆ
ಬಳ್ಳಾರಿ, ಸೆಪ್ಟೆಂಬರ್ 16: ಕೃಷಿ ಕಾರ್ಮಿಕ ಕರೆದೊಯುತ್ತಿದ್ದ ಆಟೋ HLC ಕಾಲುವೆಗೆ ಪಲ್ಟಿಯಾಗಿದ್ದ ಘಟನೆಯಲ್ಲಿ ನಾಪತ್ತೆಯಾಗಿದ್ದ ಮೂವರು ಮಹಿಳಾ ಕಾರ್ಮಿಕರ ಪೈಕಿ ಇಬ್ಬರ ಶವ ಪತ್ತೆಯಾಗಿದೆ. ಆದರೆ ಮತ್ತೊಬ್ಬರ ಶವ ಮೂರು ದಿನಗಳಾದರೂ ಪತ್ತೆಯಾಗಿಲ್ಲ. ಹುಡುಕಾಟ ಮುಂದುವರಿದಿದೆ.
ಸೆಪ್ಟೆಂಬರ್ 14ರಂದು ಬೆಳಗ್ಗೆ ಕೂಲಿ ಕೆಲಸಕ್ಕಾಗಿ ಆಟೋದಲ್ಲಿ ಚಾಲಕ ಸೇರಿದ 11 ಮಂದಿ ಪ್ರಯಾಣ ಮಾಡುತ್ತಿದ್ದರು. ಈ ವೇಳೆ ಆಟೋ ಚಾಲಕನ ನಿಯಂತ್ರಣ ತಪ್ಪಿ ಬಳ್ಳಾರಿ ತಾಲೂಕು ಬಳಿ ಕೊಳಗಲ್ ಸಮೀಪದಲ್ಲಿಎಚ್‌ಎಲ್‌ಸಿ ಕಾಲುವೆಗೆ ಬಿದ್ದಿತ್ತು. ತಕ್ಷಣ ಚಾಲಕ ಭೀಮಾ ಮತ್ತು ಮಹೇಶ ಎಂಬಾತ ಈಜಿ ದಡ ಸೇರಿದರೆ, ಸ್ಥಳೀಯರ ನೆರವಿನಿಂದ ದಮ್ಮುರು ಯರೆಮ್ಮ, ಹೇಮಾವತಿ, ಶಿಲ್ಪ ಎಂಬುವವರನ್ನು ರಕ್ಷಿಸಿಲಾಗಿತ್ತು. ದುರಾದೃಷ್ಟವಶಾತ್ ದುರ್ಗಮ್ಮ, ನಿಂಗಮ್ಮ ಪುಷ್ಪವತಿ ಎಂಬುವವರು ಸಾವನಪ್ಪಿದ್ದರು. ಇನ್ನೂ ಆಟೋದಲ್ಲಿದ್ದ ಮಲ್ಲಮ್ಮ, ಹುಲಿಗೆಮ್ಮ, ನಾಗರತ್ನಮ್ಮ ಎಂಬ ಮೂವರು ನೀರಿನಲ್ಲಿ ಕೊಚ್ಚಿ ಹೋಗಿದ್ದು, ಹುಡುಕಾಟ ನಡೆಸಲಾಗಿತ್ತು.
ಈ ಮೂವರಲ್ಲಿ ನಾಗರತ್ನಮ್ಮ ಮೃತದೇಹವು ಗುರುವಾರ ಸಂಜೆ ಬಳ್ಳಾರಿ ಸಮೀಪದ ಬಂಡಿಹಟ್ಟಿಯಲ್ಲಿ ಸಿಕ್ಕಿತ್ತು. ಘಟನೆ ನಡೆದ ಸ್ಥಳದಿಂದ 12 ಕಿ.ಮೀ.ದೂರದಲ್ಲಿ ಮೃತ ದೇಹ ಪತ್ತೆಯಾಗಿತ್ತು. ಕೂಡಲೇ ಬಳ್ಳಾರಿ ಗ್ರಾಮೀಣ ಪೊಲೀಸರು ಸ್ಥಳಕ್ಕೆ ದಾವಿಸಿ, ಮೃತ ದೇಹವನ್ನು ವಿಮ್ಸ್ ಗೆ ತೆಗೆದುಕೊಂಡು ಹೋಗಿದ್ದರು. ಲಕ್ಷ್ಮಿ ಮತ್ತು ಹುಲಿಗೆಮ್ಮ ಅವರ ಮೃತ ದೇಹಗಳು ಪತ್ತೆಯಾಗಬೇಕಿದೆ. ಅವರಿಗಾಗಿ ಶೋಧ ಕಾರ್ಯ ನಡೆದಿತ್ತು.

ಆಂಧ್ರದ ಉಂತಕಲ್‌ನಲ್ಲಿ ಮತ್ತೊಂದು ಶವ ಪತ್ತೆ
ಆಟೋ ಪಲ್ಟಿಯಾಗಿ ಕಾಲುವೆಯಲ್ಲಿ ಕೊಚ್ಚಿ ಹೋಗಿದ್ದ ಮೂವರಲ್ಲಿ ನಾಗರತ್ನಮ್ಮ ಶವ ಗುರುವಾರ ಸಿಕ್ಕರೆ, ಶುಕ್ರವಾರ ಬೆಳಗ್ಗೆ ಆಂದ್ರಪ್ರದೇಶದ ಉಂತಕಲ್ ಸಮೀಪ ಮಲ್ಲಮ್ಮ(30) ಎಂಬುವವರ ಶವ ಸಿಕ್ಕಿದೆ. ಬಳ್ಳಾರಿ ಗ್ರಾಮೀಣ ಪೊಲೀಸರು ಸ್ಥಳಕ್ಕೆ ದಾವಿಸಿ, ಮೃತ ದೇಹವನ್ನು ವಿಮ್ಸ್‌ಗೆ ರವಾನಿಸಿದ್ದಾರೆ. ಉಳಿಂದಂತೆ ಹುಲಿಗೆಮ್ಮ ಅವರ ಮೃತ ದೇಹ ಪತ್ತೆಯಾಗಬೇಕಿದ್ದು, ಶೋಧ ಕಾರ್ಯ ಮುಂದುವರಿದಿದೆ.
ಕೊಳಗಲ್ ಗ್ರಾಮದಿಂದ ಕೃಷ್ಣಾನಗರಕ್ಕೆ ಆಟೋದಲ್ಲಿ ಕೃಷಿ ಕಾರ್ಮಿಕರನ್ನು ಕರೆದುಕೊಂಡು ಹೋಗುತ್ತಿರುವಾಗ ಆಟೋದ ಮುಂದಿನ ಚಕ್ರ ಕಲ್ಲಿನ ಮೇಲೆ ಹತ್ತಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ಕಾಲುವೆಗೆ ಬಿದ್ದಿತ್ತು.

25 ಲಕ್ಷ ರೂ ಪರಿಹಾರಕ್ಕೆ ಒತ್ತಾಯ
ಇನ್ನು ವಿದ್ಯುತ್ ಸಂಪರ್ಕ ಕಡಿತಗೊಂಡ ಹಿನ್ನೆಲೆ ವೆಂಟಿಲೇಟರ್ ಕಾರ್ಯ ಸ್ಥಗಿತವಾಗಿ ವಿಮ್ಸ್‌ನಲ್ಲಿ ಸಾವನ್ನಪ್ಪಿದ ಮೂವರು ರೋಗಿಗಳ ಕುಟುಂಬಕ್ಕೆ ಕರ್ನಾಟಕ ಸರಕಾರ ತಲಾ 5 ಲಕ್ಷ ರೂಪಾಯಿ ಪರಿಹಾರವನ್ನು ಘೋಷಣೆ ಮಾಡಿದೆ. ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿನ ಐಸಿಯು ನಲ್ಲಿ ವಿದ್ಯುತ್ ಸ್ಥಗಿತಗೊಂಡಿದ್ದರಿಂದಾಗಿ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಂತ ಮೂವರು ರೋಗಿಗಳು ಆಕ್ಸಿಜನ್ ಕೊರತೆಯಿಂದಾಗಿ ಸಾವನ್ನಪ್ಪಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಸರಕಾರ ಪರಿಗಣಿಸಿತ್ತು. ಈ ಬೆನ್ನಲ್ಲೇ ಸಿಎಂ ಬಸವರಾಜ ಬೊಮ್ಮಾಯಿಯವರು ಮೃತರ ಮೂವರು ರೋಗಿಗಳ ಕುಟುಂಬಸ್ಥರಿಗೆ ತಲಾ 5 ಲಕ್ಷ ಪರಿಹಾರವನ್ನು ಘೋಷಿಸಿದ್ದಾರೆ.
ವಿಧಾನಸಭೆಯಲ್ಲಿಯೂ ಈ ವಿಚಾರ ಸದ್ದು ಮಾಡಿ, ವಿಪಕ್ಷ ನಾಯಕ ಸಿದ್ಧರಾಮಯ್ಯ ಮೃತ ಕುಟುಂಬಸ್ಥರಿಗೆ ತಲಾ 25 ಲಕ್ಷ ಪರಿಹಾರಕ್ಕೆ ಒತ್ತಾಯಿಸಿದ್ದರು. ಈ ಬೆನ್ನಲ್ಲೇ ಸಿಎಂ ಬಸವರಾಜ ಬೊಮ್ಮಾಯಿಯವರು ಮೃತ ಮೂವರು ರೋಗಿಗಳ ಕುಟುಂಬಸ್ಥರಿಗೆ ತಲಾ 5 ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ.












Click it and Unblock the Notifications