ವಿದ್ಯುತ್ ಕಂಬದ ಮೇಲೆ ಲೈನ್‌ಮ್ಯಾನ್ ಸಜೀವ ದಹನ

ಬಳ್ಳಾರಿ, ಸೆ. 16 : ಬಳ್ಳಾರಿ ಜಿಲ್ಲೆಯ ಹಡಗಲಿಯಲ್ಲಿ ವಿದ್ಯುತ್ ಸ್ಪರ್ಶದಿಂದಾಗಿ ಲೈನ್‌ಮ್ಯಾನ್ ಸಹಾಯಕ ವಿದ್ಯುತ್ ಕಂಬದ ಮೇಲೆಯೇ ಸುಟ್ಟು ಕರಕಲಾದ ಘಟನೆ ನಡೆದಿದೆ. ಗ್ರಾಮದ ಜನರು ಕಣ್ಣೆದುರೇ ಆತ ಸುಟ್ಟು ಕರಕಲಾಗುತ್ತಿದ್ದರೂ ಆತನನ್ನು ರಕ್ಷಿಸಲು ಸಾಧ್ಯವಾಗಲಿಲ್ಲ.

ಮೃತಪಟ್ಟ ಲೈನ್‌ಮ್ಯಾನ್ ಸಹಾಯಕನನ್ನು ಅರುಣ್ ಕುಮಾರ್ (28) ಎಂದು ಗುರುತಿಸಲಾಗಿದೆ. ಮಂಗಳವಾರ ಬೆಳಗ್ಗೆ ಹಡಗಲಿ ತಾಲೂಕಿನ ಬಸರಹಳ್ಳಿ ತಾಂಡಾದಲ್ಲಿ ವಿದ್ಯುತ್ ಕಂಬದ ದುರಸ್ತಿ ಕಾರ್ಯದಲ್ಲಿ ತೊಡಗಿದ್ದಾಗ ವಿದ್ಯುತ್ ಸ್ಪರ್ಶವಾಗಿ ಈ ಅವಘಡ ನಡೆದಿದೆ.

Electricity

ಲೈನ್‌ಮ್ಯಾನ್ ಅನಾರೋಗ್ಯದ ಕಾರಣ ಆಗಮಿಸಿರಲಿಲ್ಲ. ಆದ್ದರಿಂದ ಅರುಣ್ ಕುಮಾರ್ ಕಂಬ ಏರಿ ದುರಸ್ತಿ ಕಾರ್ಯ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಏಕಾಏಕಿ ತಂತಿಯಲ್ಲಿ ವಿದ್ಯುತ್ ಪ್ರವಹಿಸಿದ್ದರಿಂದ ಅರುಣ್ ಕುಮಾರ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ವಿದ್ಯುತ್ ಪ್ರವಹಿಸಿದ್ದು ತಿಳಿದ ತಕ್ಷಣ ಅರುಣ್ ಕಂಬದಿಂದ ಇಳಿಯಲು ಪ್ರಯತ್ನಿಸಿದ್ದಾರೆ. ಆದರೆ, ತಂತಿಗೆ ಅವರ ಕೈ ಸಿಲುಕಿದ್ದರಿಂದ ಅದು ಸಾಧ್ಯವಾಗಿಲ್ಲ. ವಿದ್ಯುತ್ ಸ್ಪರ್ಶದಿಂದಾಗಿ ಅರುಣ್ ಅವರ ಮೈಗೆ ಬೆಂಕಿಹೊತ್ತಿಕೊಂಡು ಅವರು ಅಲ್ಲಿಯೇ ಮೃತಪಟ್ಟಿದ್ದಾರೆ. ಗ್ರಾಮದ ಹಲವಾರು ಜನ ಇದನ್ನು ನೋಡುತ್ತಿದ್ದರು ಅರುಣ್ ರಕ್ಷಿಸಲು ಸಾಧ್ಯವಾಗಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+