ಅನಿಲ್ ಲಾಡ್ ಕೈ ತಪ್ಪಲಿದೆ ಬಳ್ಳಾರಿ ನಗರ ಕ್ಷೇತ್ರದ ಟಿಕೆಟ್?
ಬಳ್ಳಾರಿ, ಮಾರ್ಚ್ 31 : ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಶಾಸಕ ಅನಿಲ್ ಲಾಡ್‍ಗೆ ಕಾಂಗ್ರೆಸ್ ಟಿಕೆಟ್ ಕೈತಪ್ಪಿದಲ್ಲಿ ಅವರ ಮುಂದಿನ ನಡೆಯೇನು?. ಈ ರೀತಿಯ ಪ್ರಶ್ನೆ ಕಳೆದ ಒಂದೆರೆಡು ದಿನಗಳಿಂದ ಕ್ಷೇತ್ರದಲ್ಲಿ ವ್ಯಾಪಕವಾಗಿ ಚರ್ಚೆಗೆ ಒಳಗಾಗಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು
ಕೆಪಿಸಿಸಿ ಹಾಲಿ ಶಾಸಕರಿಗೆ ಟಿಕೆಟ್ ಎಂದು ಭರವಸೆ ನೀಡಿದ್ದರೂ ಕೂಡ, ಕಾಂಗ್ರೆಸ್‍ನ ಆಂತರಿಕ ಸಮೀಕ್ಷೆಗಳಲ್ಲಿ ಬಳ್ಳಾರಿ ನಗರ ಶಾಸಕನ ಪರವಾದ, ಗೆಲ್ಲುವ ಅವಕಾಶಗಳಿರುವ ಸದಾಭಿಪ್ರಾಯ ಮೂಡದೇ ಇರುವ ಕಾರಣ, ಪರ್ಯಾಯ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಪಕ್ಷ ನಿರ್ಧರಿಸಿದೆ.
ಈ ಹಿನ್ನಲೆಯಲ್ಲಿ ಅನಿಲ್ ಎಚ್. ಲಾಡ್ ಅವರಿಗೆ ಟಿಕೆಟ್ ಕೈ ತಪ್ಪಿದಲ್ಲಿ ಅವರ ಮುಂದಿನ ಹೆಜ್ಜೆ ಏನು? ಎಂದು ಚರ್ಚೆಗಳು ಆರಂಭವಾಗಿವೆ. ವಾಸ್ತವದಲ್ಲಿ ಟಿಕೆಟ್ ಸಿಗುವ ಶೇ. 100 ರಷ್ಟು ಆತ್ಮವಿಶ್ವಾಸ ಹೊಂದಿರುವ ಅನಿಲ್ ಲಾಡ್ ಅವರಿಗೂ ಈ ರೀತಿಯ ಸಂದರ್ಭ ಬರುವ ಕುರಿತು ಸ್ವಲ್ಪವೂ ಸುಳಿವು ಸಿಕ್ಕಿರಲಿಲ್ಲ.

ತಮ್ಮ ಆಪ್ತ ಬಳಗದಲ್ಲಿ 'ನನ್ನ ಬದಲಾಗಿ ಸ್ಪರ್ಧಿಸುವ ಕಾಂಗ್ರೆಸ್ ಅಭ್ಯರ್ಥಿಯ ಭವಿಷ್ಯ ನಿರ್ಧರಿಸೋಣ, ಯೋಚಿಸಿ, ಯೋಜನೆ ರೂಪಿಸಿ' ಎಂದಿದ್ದಾರೆ ಎಂದು ತಿಳಿದುಬಂದಿದೆ. ಈ ಹಿನ್ನಲೆಯಲ್ಲಿ ಅನಿಲ್ ಲಾಡ್ ಮತ್ತು ಅವರ ಆಪ್ತರ ಗುಂಪು, ಒಂದು ಕಾಲದ ಆಪ್ತರಾಗಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಬಿ.ಎಸ್. ಯಡಿಯೂರಪ್ಪ ಮತ್ತು ಇನ್ನಿತರರನ್ನು ಸಂಪರ್ಕಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಆದರೆ, ಎಚ್.ಡಿ. ಕುಮಾರಸ್ವಾಮಿ, ಎಚ್.ಡಿ. ದೇವೇಗೌಡರ ಜೊತೆಯಲ್ಲಿ ಸಂಬಂಧ ಹಳಸಿರುವ ಕಾರಣ ಅವರು ಯಾವ ಹೆಜ್ಜೆಯನ್ನು ಇರಿಸಲಿದ್ದಾರೆ? ಎನ್ನುವುದು ಯಕ್ಷಪ್ರಶ್ನೆಯಾಗಿದೆ. ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕರಾಗಿ ಆಯ್ಕೆ ಆಗಿದ್ದ ಅನಿಲ್ ಲಾಡ್ ಅವರಿಗೆ ಮಹಾರಾಷ್ಟ್ರ ಮೂಲದ ಕಾಂಗ್ರೆಸ್, ಬಿಜೆಪಿ ಮುಖಂಡರುಗಳ, ಕರ್ನಾಟಕದ ಬಿಜೆಪಿ ಮುಖಂಡರುಗಳ ಜೊತೆ ಪಕ್ಷಾತೀತವಾಗಿ ನಿರಂತರ ಸಂಪರ್ಕವಿದೆ.
ಕಾಂಗ್ರೆಸ್ ಪಕ್ಷದಲ್ಲೇ ಮುಂದುವರೆದು ಕಾಂಗ್ರೆಸ್ ಅಭ್ಯರ್ಥಿಯ ಎಡಬಲ ಕಾಣಿಸಿಕೊಳ್ಳಬೇಕು ಎನ್ನುವ ಸಕಾರಾತ್ಮಕ ಚಿಂತೆಯನ್ನೂ ನಡೆಸಿದ್ದಾರೆ. ಆದರೆ, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವರ ಮೇಲೆ ಸಂಪೂರ್ಣ ಭರವಸೆ ಹೊಂದಿರುವ ಅನಿಲ್ ಲಾಡ್ ಅವರು ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವುದ ಖಚಿತ ಎಂಬ ಸುದ್ದಿಯೂ ಇದೆ.
ಕಾಂಗ್ರೆಸ್‍ನ ಆಂತರಿಕ ಚಟುವಟಿಕೆಗಳಲ್ಲಿ ಅನಿಲ್ ಲಾಡ್ ಹೆಸರು ಎಲ್ಲಿಯೂ ಚರ್ಚೆಗೆ ಬರುತ್ತಿಲ್ಲ ಎಂದೂ ಅದೇ ಆಪ್ತರು ಪರಿತಪಿಸುತ್ತಿದ್ದಾರೆ.












Click it and Unblock the Notifications