Darshan: ದರ್ಶನ್‌ ಅಭಿಮಾನಿಗಳಿಗೆ ಸಿಹಿ ಸುದ್ದಿ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್‌ಗೆ ಆರೋಗ್ಯ ಸಮಸ್ಯೆ ತೀವ್ರವಾಗಿ ಕಾಡುತ್ತಿದೆ. ಬೆನ್ನು ನೋವಿನಿಂದ ಬಳಲುತ್ತಿರುವ ನಟ ದರ್ಶನ್‌ಗೆ ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ವೈದ್ಯರು ಸೂಚನೆ ಕೊಟ್ಟಿದ್ದರು. ಆದರೆ ದರ್ಶನ್‌ ವೈದ್ಯರ ಸಲಹೆಯನ್ನು ನಿರಾಕರಿಸಿದ್ದರು. ತಾವು ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುವುದಾಗಿ ಹೇಳಿ ನೋವು ನಿವಾರಕ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದರು. ಆದರೂ ಬೆನ್ನು ನೋವು ಹೆಚ್ಚಾದ ಬೆನ್ನಲ್ಲಿ ವೈದ್ಯರ ಸಲಹೆಯಂತೆ ಬಳ್ಳಾರಿಯಲ್ಲಿ ಎಂಆರ್ ಐ ಸ್ಕ್ಯಾನಿಂಗ್ ಮಾಡಿಸಲು ಒಪ್ಪಿಕೊಂಡಿದ್ದಾರೆ.

ದರ್ಶನ್‌ಗೆ ಬೆನ್ನುನೋವು ಹೆಚ್ಚಾಗಿರುವ ಕಾರಣ ಜೈಲಿನಲ್ಲೇ ಫಿಸಿಯೋಥೆರಪಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೂ ದರ್ಶನ್‌ಗೆ ನೋವು ಕಡಿಮೆಯಾಗುತ್ತಿಲ್ಲ, ವಕೀಲರು ಭೇಟಿಗೆ ಬಂದಿದ್ದಾಗ ದರ್ಶನ್ ಬೆನ್ನು ಹಿಡಿದುಕೊಂಡೇ ಸೆಲ್‌ನಿಂದ ಸಂದರ್ಶಕರ ಕೊಠಡಿಗೆ ಬಂದಿದ್ದರು. ಪದೇ ಪದೇ ಬೆನ್ನು ಮುಟ್ಟಿಕೊಳ್ಳುತ್ತಿದ್ದ ಅವರು, ನೋವಿನಿಂದ ನರಳುತ್ತಿರುವುದು ಮಾಧ್ಯಮಗಳು ಪ್ರಸಾರ ಮಾಡಿದ ವಿಡಿಯೋದಲ್ಲಿ ಸ್ಪಷ್ಟವಾಗಿ ಕಂಡಿದೆ.

Actor Darshan Agrees to Receive Treatment in Ballari Jail

ಬೆನ್ನು ನೋವು ಕಡಿಮೆಯಾಗದ ಹಿನ್ನಲೆಯಲ್ಲಿ ಜೈಲು ಅಧಿಕಾರಿಗಳು ಸ್ಕ್ಯಾನಿಂಗ್ ಮಾಡಿಸುವ ಬಗ್ಗೆ ದರ್ಶನ್‌ ಬಳಿ ಮಾತನಾಡಿದ್ದು, ಕೊನೆಗೂ ದರ್ಶನ್ ಬಳ್ಳಾರಿಯಲ್ಲೇ ಎಂಆರ್ ಐ ಸ್ಕ್ಯಾನಿಂಗ್ ಮಾಡಿಸಲು ಒಪ್ಪಿಕೊಂಡಿದ್ದಾರೆ. ನಾಳೆ (ಮಂಗಳವಾರ) ದರ್ಶನ್ ಕುಟುಂಬದವರು ಬಳ್ಳಾರಿ ಜೈಲಿಗೆ ಭೇಟಿ ನೀಡಲಿದ್ದು, ಕುಟುಂಬಸ್ಥರ ಜೊತೆ ಚರ್ಚೆ ಮಾಡಿದ ಬಳಿಕ ಸ್ಕ್ಯಾನಿಂಗ್ ಮಾಡಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ.

ಬಳ್ಳಾರಿಯಲ್ಲಿ ಬೇಡ ಅನ್ನಲು ಇದೇ ಕಾರಣ

ಬಳ್ಳಾರಿಯಲ್ಲಿ ಎಂಆರ್ ಐ ಸ್ಕ್ಯಾನಿಂಗ್ ಮಾಡಿಸಲು ಹೋದರೆ ಭದ್ರತೆಯ ಸಮಸ್ಯೆಯಾಗಬಹುದು, ಹೆಚ್ಚಿನ ಸಂಖ್ಯೆಯ ಅಭಿಮಾನಿಗಳು ಸೇರಬಹುದು ಎಂದು ದರ್ಶನ್ ಬೇಡ ಎಂದಿದ್ದರು ಎಂದು ವರದಿಯಾಗಿದೆ. ಆದರೆ ಈಗ ನೋವು ವಿಪರೀತ ಹೆಚ್ಚಾಗಿದ್ದು, ಜಾಮೀನು ಕೂಡ ಸಿಗದ ಕಾರಣ ಅನಿವಾರ್ಯವಾಗವಾಗಿ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

ಜೈಲಾಧಿಕಾರಿಗಳು ಈಗಾಗಲೇ ಬಳ್ಳಾರಿಯ ವಿಮ್ಸ್ ನಿರ್ದೇಶಕರ ಜೊತೆ ಮಾತನಾಡಿದ್ದಾರೆ ಎನ್ನಲಾಗಿದೆ. ನಾಳೆಯೇ (ಮಂಗಳವಾರ) ಎಂಆರ್‌ಐ ಸ್ಕಾನಿಂಗ್ ಮಾಡಿಸಲು ದಿನಾಂಕವನ್ನು ನಿರ್ಧರಿಸುವ ಸಾಧ್ಯತೆ ಇದ್ದು, ಭದ್ರತೆ ಬಗ್ಗೆ ಚರ್ಚಿಸುತ್ತಿದ್ದಾರೆ.

ದರ್ಶನ್ ಜಾಮೀನು ಅರ್ಜಿ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ2 ಆರೋಪಿಯಾಗಿರುವ ನಟ ದರ್ಶನ್‌ ಜೈಲು ಸೇರಿ 130ಕ್ಕೂ ಹೆಚ್ಚಿನ ದಿನಗಳಾಗಿದೆ. 57ನೇ ಸಿಟಿ ಸಿವಿಲ್ ಕೋರ್ಟ್‌ ದರ್ಶನ್‌ಗೆ ಜಾಮೀನು ಕೊಡಲು ನಿರಾಕರಿಸಿದೆ. ದರ್ಶನ್‌ ಪರ ವಕೀಲರು ಇದೀಗ ಜಾಮೀನಿಗಾಗಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ನಾಳೆಯೇ ದರ್ಶನ್ ಜಾಮೀನು ಅರ್ಜಿ ವಿಚಾರಣೆಗೆ ಬರಲಿದೆ. ಒಂದು ವೇಳೆ ಹೈಕೋರ್ಟ್‌ನಲ್ಲಿ ದರ್ಶನ್‌ಗೆ ಜಾಮೀನು ಸಿಕ್ಕರೆ ನೇರವಾಗಿ ಬೆಂಗಳೂರಿಗೆ ಬಂದು ಚಿಕಿತ್ಸೆ ಪಡೆಯಲಿದ್ದಾರೆ.

ಒಂದು ವೇಳೆ ಹೈಕೋರ್ಟ್‌ನಲ್ಲಿ ಜಾಮೀನು ಸಿಗದೇ ಇದ್ದರೆ ಆರೋಗ್ಯ ಪರಿಸ್ಥಿತಿಯನ್ನು ಮುಂದಿಟ್ಟುಕೊಂಡು ಸುಪ್ರೀಂಕೋರ್ಟ್‌ನಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸುವ ಸಾಧ್ಯತೆ ಕೂಡ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+