ನಿಮ್ಮ ಕಣ್ಣಮುಂದೆ ಬರಲಿದೆ ಪುರಾತನ ಹಂಪಿ!

ಬಳ್ಳಾರಿ, ನ. 17 : ಹಂಪಿಯ ಕಲ್ಲಿನ ರಥ ಆಗ ಹೇಗಿತ್ತು?, ಹಂಪಿಯ ಬೀದಿಯಲ್ಲಿ ಚಿನ್ನ, ವಜ್ರವನ್ನು ಮಾರಾಟ ಮಾಡುತ್ತಿದ್ದ ಚಿತ್ರ ಹೇಗಿತ್ತು? ಎಂಬುದನ್ನು ನೀವು ಮೊಬೈಲ್ ಮತ್ತು ವೆಬ್‌ಸೈಟ್ ಮೂಲಕ ನೋಡಬಹುದಾಗಿದೆ. ಕೈನೆಕ್ಟ್ ಎಂಬ ತಂತ್ರಜ್ಞಾನದಿಂದ ಪುರಾತನ ಹಂಪಿಯನ್ನು ಮರು ಸೃಷ್ಟಿಸುವ ಪ್ರಯತ್ನ ಮಾಡಲಾಗಿದ್ದು, ಇನ್ನೆರಡು ದಿನದಲ್ಲಿ ಇದು ನಿಮ್ಮ ಮುಂದೆ ಅನಾವರಣಗೊಳ್ಳಲಿದೆ.

ಪುರಾತನ ನಗರಿಯನ್ನು ಕಣ್ಣಮುಂದೆ ತರುವ ಪ್ರಯತ್ನವನ್ನು ಮಾಡಲಾಗಿದ್ದು, ನ.18 ಹಾಗೂ 19ರಂದು ನವದೆಹಲಿಯ ಇಂಡಿಯಾ ಹ್ಯಾಬಿಟಾಟ್‌ ಸೆಂಟರ್‌ನಲ್ಲಿ 'ಡಿಜಿಟಲ್‌ ಹಂಪಿ'ಯನ್ನು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ರಾಜ್ಯ ಸಚಿವ ವೈ.ಎಸ್‌. ಚೌಧರಿ ಅವರು ಅನಾವರಣಗೊಳಿಸಲಿದ್ದಾರೆ.

Hampi

ಪುರಾತನ ಹಂಪಿಯ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಜನರಿಗೆ ತಲುಪಿಸಲು ಐಐಟಿಯಂತಹ ಉನ್ನತ ಶಿಕ್ಷಣ ಸಂಸ್ಥೆಗಳು 3ಡಿ ಇಮೇಜರಿ ಮೂಲಕ ಡಿಜಿಟಲ್‌ ಹಂಪಿಯನ್ನು ಸೃಷ್ಟಿಸಿವೆ. ಐಐಟಿ ಬಾಂಬೆ, ಐಐಟಿ ದೆಹಲಿ, ಭಾರತೀಯ ಸಾಂಖ್ಯಿಕ ಸಂಸ್ಥೆ, ದೆಹಲಿ ತಾಂತ್ರಿಕ ವಿಶ್ವವಿದ್ಯಾಲಯ ಸೇರಿದಂತೆ 10 ಪ್ರಮುಖ ಶಿಕ್ಷಣ ಸಂಸ್ಥೆಗಳು ಈ ಕಾರ್ಯಕ್ಕೆ ಕೈ ಜೋಡಿಸಿವೆ. [ಹಂಪಿಯಲ್ಲಿ ಕಳ್ಳತನದ ಸಂಚು]

ಹಂಪಿಯ ಕಲ್ಲಿನ ರಥ ಆಗಿನ ಕಾಲದಲ್ಲಿ ಹೇಗಿತ್ತು? ಎಂಬುದರಿಂದ ಹಿಡಿದು ನೀವು ಹಂಪಿಯ ಪ್ರತಿ ಮಾಹಿತಿಯನ್ನು ನೋಡಬಹುದಾಗಿದೆ. 3ಡಿ ಕೆಮೆರಾಗಳನ್ನು ಬಳಸುವ ಕೈನೆಕ್ಟ್ ಎಂಬ ತಂತ್ರಜ್ಞಾನದಿಂದ ಪುರಾತನ ಹಂಪಿಯನ್ನು ಮರು ಸೃಷ್ಟಿಸುವ ಪ್ರಯತ್ನವನ್ನು ಮಾಡಲಾಗಿದೆ. ವೆಬ್‌ಸೈಟ್‌ ಮತ್ತು ಮೊಬೈಲ್ ಅಪ್ಲಿಕೇಶನ್‌ಗಳಲ್ಲಿ ಹಂಪಿಯಲ್ಲಿನ ಹಲವು ಸ್ಮಾರಕಗಳ ಕುರಿತ ಮೆನು ಇರುತ್ತದೆ.

ಹಂಪಿ ನೋಡೋದು ಹೇಗೆ? : ನ.18, 19ರಂದು ಬಿಡುಗಡೆಯಾಗಲಿರುವ ಮೊಬೈಲ್‌ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು ಹಂಪಿಗೆ ಹೋದಾಗ ಕಲ್ಲಿನ ರಥ, ವಿಠಲ ದೇಗುಲದ ಮತ್ತಿತರ ಸ್ಥಳಗಳಲ್ಲಿ ಆ್ಯಪ್‌ ಆನ್‌ ಮಾಡಿ ಮೊಬೈಲ್‌ ಹಿಡಿದರೆ, ಪುರಾತನ ಹಂಪಿ ಮೊಬೈಲ್‌ ಪರದೆ ಮೇಲೆ ಅನಾವರಣಗೊಳ್ಳಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+