ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಳ್ಳಾರಿ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ರಾಜ್ಯ ಸರ್ಕಾರ ಬಂಫರ್‌ ಆಫರ್‌

|
Google Oneindia Kannada News

ಬಳ್ಳಾರಿ, ಆಗಸ್ಟ್‌, 17: ಬಳ್ಳಾರಿ ನಗರ ಪ್ರದೇಶಗಳಲ್ಲಿ ಬಡತನ ರೇಖೆಗಿಂತ ಕೆಳಗಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕುಟುಂಬಗಳಿಗೆ ಉಚಿತ ವಿದ್ಯುತ್‌ ಸೌಲಭ್ಯವನ್ನು ಒದಗಿಸಲಾಗಿದೆ. ಮಾಸಿಕ 75 ಯೂನಿಟ್‍ಗಳವರೆಗೆ ಉಚಿತ ಗೃಹ ಬಳಕೆಯ ವಿದ್ಯುತ್ ಸೌಲಭ್ಯ ಒದಗಿಸಲಾಗುತ್ತದೆ. ಈ ಕುರಿತು ಬಳ್ಳಾರಿ ನಗರ ಜೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಜ್ಯ ಸರ್ಕಾರದಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಬಿಪಿಎಲ್ ಹೊಂದಿರುವ ಕುಟುಂಬಗಳಿಗೆ ಉಚಿತ ವಿದ್ಯುತ್‌ ಸೌಲಭ್ಯವನ್ನು ನೀಡಲಾಗಿದೆ. ಮಾಸಿಕ 75 ಯೂನಿಟ್‍ಗಳವರೆ ಉಚಿತ ವಿದ್ಯುತ್ ಸೌಲಭ್ಯ ನೀಡುವುದಾಗಿ ಸರ್ಕಾರ ಆದೇಶವನ್ನು ಹೊರಡಿಸಿದೆ.

ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ನಡೆಯಲಿದೆಯೆ ಹಳೆಯ ಆಪ್ತರ ಕಾದಾಟ?- ಈಗಲೇ ಅಖಾಡ ಸೃಷ್ಟಿಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ನಡೆಯಲಿದೆಯೆ ಹಳೆಯ ಆಪ್ತರ ಕಾದಾಟ?- ಈಗಲೇ ಅಖಾಡ ಸೃಷ್ಟಿ

ಸೌಲಭ್ಯ ಪಡೆಯಲು ಇರಬೇಕಾದ ಅರ್ಹತೆಗಳು

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಈ ಸೌಲಭ್ಯವನ್ನು ಪಡೆಯಬಹುದಾಗಿದೆ. ಆರ್‌ಡಿ ನಂಬರ್‌ ಸಮೇತ ಜಾತಿ ಪ್ರಮಾಣ ಪತ್ರ, ಬಿಪಿಎಲ್‌ ಕಾರ್ಡ್‌, ಆಧಾರ್ ಕಾರ್ಡ್‌ ಇವುಗಳ ಜೊತೆಗೆ ಕಡ್ಡಾಯವಾಗಿ ಬ್ಯಾಂಕ್ ಖಾತೆ ತರಬೇಕೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಈ ಸೌಲಭ್ಯಕ್ಕೆ ಅರ್ಹ ಗ್ರಾಹಕರ ವಿದ್ಯುತ್ ಸ್ಥಾವರಗಳಿಗೆ ಕಡ್ಡಾಯವಾಗಿ ಮಾಪಕವನ್ನು ಅಳವಡಿಸಲಾಗುವುದು. ಪ್ರತಿ ತಿಂಗಳು ಮಾಪಕ ಓದುವುದು ಕಡ್ಡಾಯ ಆಗಿರುತ್ತದೆ. ಈ ಸೌಲಭ್ಯಕ್ಕೆ ಅರ್ಹರಾಗುವ ಗ್ರಾಹಕರು ಮಾಸಿಕ ವಿದ್ಯುತ್ ಬಿಲ್ಲನ್ನು ನಿಗದಿತ ಅವಧಿಯೊಳಗೆ ಸಂಪೂರ್ಣವಾಗಿ ಪಾವತಿಸಬೇಕು. ಈ ವರ್ಷದ ಏಪ್ರಿಲ್‌ 30ರವರಗೂ ಇರುವ ಬಾಕಿ ವಿದ್ಯುತ್ ಶುಲ್ಕದ ಮೊತ್ತವನ್ನು ಸಂಪೂರ್ಣವಾಗಿ ಪಾವತಿಸಬೇಕು. ಮಾಸಿಕ ವಿದ್ಯುತ್‌ ಬಳಕೆಯು 250ಕ್ಕಿಂತ ಹೆಚ್ಚುವರಿ ಯೂನಿಟ್‍ಗಳಿದಲ್ಲಿ ಈ ಯೋಜನೆಗೆ ಆರ್ಹರಾಗಿರುವುದಿಲ್ಲ.

75 units of free electricity will be provided to SC and ST with BPL card holders Details in Kannada

ಅರ್ಜಿ ಸಲ್ಲಿಸುವ ವಿಧಾನ

ಮಾಸಿಕ 75 ಉಚಿತ ಯೂನಿಟ್ ಉಚಿತ ವಿದ್ಯುತ್ ಯೋಜನೆಯ ಅರ್ಜಿ ಪಡೆಯಲು ಇಲ್ಲಿರುವ ಸೇವೆಗಳನ್ನು ಬಳಸಿಕೊಳ್ಳಬಹುದಾಗಿದೆ. ಅರ್ಹ ಫಲಾನುಭವಿಗಳು ಸೌಲಭ್ಯವನ್ನು ಪಡೆಯಲು suvidha.karnataka.gov.in ಮೂಲಕ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ತಿಳಿಸಿದ್ದಾರೆ. ಪಾಸ್ ಫೋಟೋಗಳ ಜೊತೆಗೆ ಅವಶ್ಯಕವಾಗಿರುವ ದಾಖಲಾತಿಗಳನ್ನು ನಮೂದಿಸುವುದು ಕಡ್ಡಾಯವಾಗಿದೆ.

75 units of free electricity will be provided to SC and ST with BPL card holders Details in Kannada

ಅರ್ಜಿದಾರರ ತಾಲೂಕು, ಆದಾಯ, ಜಾತಿ ಪ್ರಮಾಣ ಪತ್ರ ಮತ್ತು ಬಿಪಿಎಲ್ ಪಡಿತರ ಕಾರ್ಡ್‍ನಲ್ಲಿರುವಂತೆ ಕುಟುಂಬದ ಸದಸ್ಯರ ವಿವರವನ್ನು ಸಲ್ಲಿಸಬೇಕು. ಜೆಸ್ಕಾಂ ವಿದ್ಯುತ್ ಸಂಪರ್ಕದ ಖಾತೆಯ ಐಡಿಯಲ್ಲಿರುವ ಗ್ರಾಹಕರ ಹೆಸರು ಹಾಗೂ ಹಿಂದಿನ ತಿಂಗಳಿನ ಬಿಲ್ಲಿನಲ್ಲಿರುವ ಮಾಹಿತಿಯನ್ನು ಪರಿಶೀಲಿಸಲಾಗುವುದು. ವಿದ್ಯುತ್ ಸಂಪರ್ಕ ನಿಮ್ಮ ಹೆಸರಿನಲ್ಲಿದೆಯೇ ಎಂಬುವುದನ್ನು ಖಚಿತ ಪಡಿಸಿಕೊಂಡು ಸೌಲಭ್ಯವನ್ನು ಪಡೆಯಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

English summary
75 units of free electricity will be provided to Scheduled Castes and Scheduled Tribes with BPL card holders. Karnataka government issued notification in this regard. know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X