ಸಿದ್ದರಾಮಯ್ಯ ಕ್ಷೇತ್ರದಿಂದ ಯಡಿಯೂರಪ್ಪ ಬರ ಪ್ರವಾಸ ಶುರು
ಬಾದಾಮಿ, ಜೂನ್ 07: ಸಿದ್ದರಾಮಯ್ಯ ಅವರ ಕ್ಷೇತ್ರ ಬಾದಾಮಿಯಿಂದ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು ಇಂದು ತಮ್ಮ ಮೂರು ದಿನದ ಬರ ಅಧ್ಯಯನ ಪ್ರವಾಸ ಪ್ರಾರಂಭ ಮಾಡಿದರು.
ಬಾದಾಮಿಗೆ ಭೇಟಿ ನೀಡಿದ್ದ ಯಡಿಯೂರಪ್ಪ ಅವರನ್ನು ಸಾಲು-ಸಾಲು ಸಮಸ್ಯೆಗಳೊಂದಿಗೆ ಜನರು ಎದುರುಗೊಂಡರು. ಖಾಲಿ ಬಿಂದಿಗೆಗಳ ಸಾಲುಗಳು, ನೀರಿಲ್ಲದೆ ಒಣಗಿದ ಹೊಲಗಳು ಹೀಗೆ ಯಡಿಯೂರಪ್ಪ ಅವರಿಗೆ ಮೊದಲ ದಿನವೇ ಬರದ ಮುಖ ಪರಿಚಯವಾಯಿತು.
ಬಾದಾಮಿ ಕ್ಷೇತ್ರದ ಮುಷ್ಟಗೇರಿ, ಹಳ್ಳಗೆರ ಗ್ರಾಮಗಳಲ್ಲಿ ಇಂದು ಬರ ವೀಕ್ಷಣೆ ಮಾಡಿದರು. ಈ ಸಂದರ್ಭದಲ್ಲಿ ಹಲವು ಸ್ಥಳೀಯರೊಂದಿಗೆ ಅವರು ಸಂವಾದ ಮಾಡಿದರು. ಗ್ರಾಮಸ್ಥರು ತಮ್ಮ ಸಮಸ್ಯೆಗಳನ್ನು ಯಡಿಯೂರಪ್ಪ ಅವರ ಬಳಿ ಹೇಳಿಕೊಂಡರು.

ಬರ ವೀಕ್ಷಣೆ ಸಮಯದಲ್ಲಿ ಯಡಿಯೂರಪ್ಪ ಅವರಿಗೆ ಜೊತೆಯಾಗಿ ವಿಧಾನಸಭೆ ವಿರೋಧಪಕ್ಷದ ಉಪನಾಯಕರಾದ ಗೋವಿಂದ ಕಾರಜೋಳ, ಶಾಸಕರಾದ ಪಿ.ಸಿ.ಗದ್ದಿಗೌಡರ, ಮಾಜಿ ಸಚಿವ ಲಕ್ಷ್ಮಣ ಸವದಿ,ವಿಧಾನ ಪರಿಷತ್ ಸದಸ್ಯ ಹನುಮಂತ ನಿರಾಣಿ ಇನ್ನೂ ಹಲವು ಮುಖಂಡರು ಹಾಜರಿದ್ದರು.












Click it and Unblock the Notifications