ಮಗಳ ವರಿಸುವುದಾಗಿ ಪೊಲೀಸ್ ಠಾಣೆ ಎದುರು ಧರಣಿ ಕುಳಿತ ಚಿಕ್ಕಪ್ಪ

Posted By: ಬಾಗಲಕೋಟೆ ಪ್ರತಿನಿಧಿ
Subscribe to Oneindia Kannada

ಬಾಗಲಕೋಟೆ, ಜನವರಿ 11: ತಾನು ಪ್ರೀತಿಸಿದ ಯುವತಿಯನ್ನು ಮದುವೆಯಾಗಲು ಪೊಲೀಸರ ನೆರವು ಕೋರಿ ಯುವಕನೊಬ್ಬ ಬಾಗಲಕೋಟೆಯ ನವನಗರ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸುತ್ತಿದ್ದಾನೆ.

ಸಾಗರ್ ಸುಗತೇಕರ ಅವರು ಅವರ ಸಂಬಂಧಿಯಾದ ಪ್ರಿಯಾ ಎಂಬುವವರನ್ನು ಒಂದು ವರ್ಷದಿಂದ ಪ್ರೀತಿಸಿದ್ದರು. ಆದರೆ ಇತ್ತೀಚೆಗೆ ಸಾಗರ್ ಅವರು ಸಂಬಂಧದಲ್ಲಿ ಪ್ರಿಯಾ ಅವರಿಗೆ ಚಿಕ್ಕಪ್ಪ ಆಗುತ್ತಾನೆ ಎಂಬುದು ತಿಳಿದ ತಕ್ಷಣ ಯುವತಿ ಮನೆಯವರು ವಿರೋಧ ವ್ಯಕ್ತಪಡಿಸಿದ್ದಾರೆ. ಇದರ ಜತೆಗೆ ಜೋಡಿಯನ್ನು ಬೇರೆಡೆ ಕರೆದೊಯ್ದಿದ್ದಾರೆ.

ಸಂಕ್ರಾಂತಿ ವಿಶೇಷ ಪುಟ

ಬಳಿಕ ಮನೆಯವರ ಒತ್ತಡದಿಂದಾಗಿ ಪೊಲೀಸ್ ಠಾಣೆಗೆ ತೆರಳಿದ್ದರು. ಮರುದಿನ ವಿಚಾರಣೆ ನಡೆಸುವುದಾಗಿ ಪೊಲೀಸರು ತಿಳಿಸಿದ್ದರು. ಆದರೆ ಪೊಲೀಸರು ಬಳಿಕ ಯುವತಿ ಪ್ರಿಯಾ ಅವರನ್ನು ಕರೆಸದ ಕಾರಣ ಸಾಗರ್ ಧರಣಿ ಆರಂಭಿಸಿದ್ದಾರೆ. ಭಾರತೀಯ ಸಮಾಜದಲ್ಲಿ ಸಂಬಂಧಗಳಿಗೆ ಅಮೂಲ್ಯವಾದ ಬೆಲೆ ಇದೆ. ಆದರೆ ಆಧುನೀಕತೆಗೆ ಮಾರು ಹೋಗುತ್ತಿರುವ ಇಂದಿನ ದಿನಮಾನದಲ್ಲಿ ಸಂಬಂಧಗಳಿಗೆ ಬೆಲೆ ಇಲ್ಲವೇ ಎಂಬ ಭಾವ ಯುವತಿಯರ ಪೋಷಕರಿಂದ ವ್ಯಕ್ತವಾಗಿದೆ.

Uncle-Daughter turn into affair: Families oppose

ವರಸೆಯಲ್ಲಿ ಮಗಳಾಗುವ ಹುಡುಗಿಯನ್ನು ಒರಿಸಲು ಮುಂದಾಗಿದ್ದಾನೆ. ಅಲ್ಲದೆ ಕಳೆದ ವಾರದ ಹಿಂದೆ ಇಬ್ಬರೂ ಮನೆ ಬಿಟ್ಟು ಹೋಗಿದ್ದರು. ಆದರೆ ಚಿಕ್ಕಪ್ಪ, ಮಗಳ ಸಂಬಂಧವಿದ್ದು ಹುಡುಗಿಯ ಪೋಷಕರು ಇದನ್ನ ವಿರೋಧಿಸಿದ್ದಾರೆ.

ಅಲ್ಲದೆ ಸಮಾಜದ ಮುಖಂಡರ ಸಮಕ್ಷಮವಾಗಿ ಪೊಲೀಸರ ನೆರವಿನಿಂದ ಹುಡುಗಿಯನ್ನ ಕರೆದುಕೊಂಡು ಹೋಗಿದ್ದಾರೆ. ಆದರೆ ಈಗ ಸಾಗರ್ ಸಂಬಂಧದ ಬಗ್ಗೆ ನಮಗೇನು ಗೊತ್ತಿಲ್ಲ, ಅವಳೇ ಬೇಕು ಎಂದು ಸಾಗರ್ ಪಟ್ಟು ಹಿಡಿದಿದ್ದಾನೆ. ಅಲ್ಲದೆ ಒಂದು ವೇಳೆ ಪೊಲೀಸರು ಹುಡುಗಿಯನ್ನ ಕರೆತರದಿದ್ದರೆ ಪೊಲೀಸ್ಠಾಣೆ ಎದುರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಾ ಪ್ರತಿಭಟನೆ ನಡೆಸುತ್ತಿದ್ದಾನೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In a strange incident two families were forced to fight for their child who became lovers but unfortunately those are uncle and daughter in relationship.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ