ಹಾವಿನೊಂದಿಗೆ ವೃದ್ಧೆ ವಾಸ: ವಿಸ್ಮಯ ನೋಡಲು ಮುಗಿಬಿದ್ದ ಜನರು

ಬಾಗಲಕೋಟೆ, ಜೂ. 6: ಮೃತಪಟ್ಟ ಪತಿರಾಯ ಹಾವಿನ ರೂಪದಲ್ಲಿ‌ ಬಂದಿದ್ದಾನೆ ಎಂದು ನಂಬಿದ ಅಜ್ಜಿಯೊಬ್ಬರು ನಾಲ್ಕು ದಿನಗಳಿಂದ ಹಾವಿನ ಜೊತೆಗೆ ಇರುವ ಮೂಲಕ ಆಶ್ಚರ್ಯ ಮೂಡಿಸಿದ ಘಟನೆ ‌‌ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಕುಲಹಳ್ಳಿ ಗ್ರಾಮದಲ್ಲಿ ನಡೆದಿದೆ . ಅಜ್ಜಿಯ ನಂಬಿಕೆ ಬಗ್ಗೆ ಸ್ಥಳೀಯ ಜನರು ಆಗಮಿಸಿ, ವಿಸ್ಮಯದಂತೆ ನೋಡಲು ಮುಗಿ ಬೀಳುತ್ತಿದ್ದಾರೆ.

ಶಾರವ್ವಾ ಮೌನೇಶ್ ಕಂಬಾರ ಎಂಬುವರ ಬಡ ಕುಟುಂಬದ ಈ ಅಜ್ಜಿಯ ಮನೆಯಲ್ಲಿ ನಾಲ್ಕು ದಿನಗಳ‌ ಹಿಂದೆ ಹಾವು ಬಂದಿದೆ. ಅದನ್ನು ಹೂರಗೆ ಹಾಕಲು ಪ್ರಯತ್ನ ಪಟ್ಟರೂ ಹೋಗಲಿಲ್ಲ, ಇದರಿಂದ ಅಜ್ಜಿಯು ಆತಂಕಗೊಳ್ಳದೆ, ತನ್ನ ಪತಿ ಹಾವಿನ ರೂಪದಲ್ಲಿ ಬಂದಿರುವುದಾಗಿ ನಂಬಿದ್ದಾಳೆ.

ಹಾವಿನ ರೂಪದಲ್ಲಿ ಬಂದ ಪತಿರಾಯ ಎಂಬ ನಂಬಿಕೆ

ಅಜ್ಜಿಯ ಪತಿ ಮೌನೇಶ ಎಂಬುವರು ಹಲವು ವರ್ಷಗಳ ಹಿಂದೆ ಮೃತಪಟ್ಟಿರುತ್ತಾರೆ. ಅವರೆ ಈ ಹಾವಿನ ರೂಪದಲ್ಲಿ ಬಂದು ನನ್ನ ಹತ್ತಿರ ಇದ್ದಾರೆ. ಅದಕ್ಕೆ ಯಾರು ಧಕ್ಕೆ ಮಾಡಬಾರದು, ಹಿಡಿಯಬಾರದು ಎಂದು ಅದನ್ನ 4 ದಿನಗಳಿಂದ ಅವರ ಚಾಪೆ ಮೇಲೆ ಇರಿಸಿ, ಅದನ್ನು ಜೋಪಾನ ಮಾಡುತ್ತಿದ್ದಾರೆ. ಇದರಿಂದ ಅಜ್ಜಿಯ ನಂಬಿಕೆ ಹಾಗೂ ನಾಗರಹಾವನ್ನು ನೋಡಲು ಸುತ್ತಮುತ್ತಲಿನ ಜನ ಮುಗಿಬಿದ್ದಿದ್ದಾರೆ.

Old Lady Lives With Snake For 4 Days Assuming It As Her Dead Husband

ನಾಲ್ಕು ದಿನಗಳಿಂದ ಆ ಹಾವಿಗೆ ಊಟ ಹಾಲು ಏನು ಇಲ್ಲದೆ ಆ ಅಜ್ಜಿ ಮನೆಯಲ್ಲಿಯೇ ಅಸ್ವಸ್ಥತೆಗೊಂಡು ಸುಸ್ತಾಗಿ, ಬಿದ್ದಿದೆ. ಮೊದಲ ದಿನ ಕಂಡಾಗ ದಪ್ಪವಿದ್ದಂತಿದ್ದ ಹಾವಿಗೆ, 'ನನ್ನನು ಕಚ್ಚಿ ಸಾಯುವಂತೆ ಮಾಡು' ಎಂದು ಅಜ್ಜಿ ಬೇಡಿಕೊಂಡಿದ್ದಳು ಎನ್ನಲಾಗಿದೆ. ಆದರೆ ಇನ್ನುವರೆಗೂ ಏನೂ ಮಾಡಿಲ್ಲ ಎಂದು ಅಜ್ಜಿಯು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಾರೆ. ಇದು ವಿಸ್ಮಯಕಾರಿ ಘಟನೆ ಎಂದು ಹಲವು ಜನರು ಭಾವಿಸಿ ಹಾವು ಮತ್ತು ಅರ್ಜಿಯ ದರ್ಶನಕ್ಕೆ ಎಡತಾಕುತ್ತಿದ್ದಾರೆ.

Old Lady Lives With Snake For 4 Days Assuming It As Her Dead Husband

ಹೊರಹೋದ ಹಾವು:
ಅಜ್ಜಿಯ ಮನೆಯಲ್ಲಿ ಹಾವು ಸದ್ಯಕ್ಕೆ ಇಲ್ಲ, ಕಳೆದೆರಡು ದಿನಗಳ ಹಿಂದೆಯೇ ಹಾವು ಅಜ್ಜಿಯ ಮನೆಯಿಂದ ಕಣ್ಮರೆಯಾಗಿದೆ. ಅಜ್ಜಿಗೆ ಇಬ್ಬರು ಮಕ್ಕಳಿದ್ದರೂ ಒಬ್ಬಂಟಿಯಾಗಿ ಜೀವನ ಮಾಡುತ್ತಿದ್ದಾರೆ. ಮಕ್ಕಳು ಬೇರೆ ಬೇರೆ ಅಗಿದ್ದು ಅಜ್ಜಿ ಮಾನಸಿಕ ಖಿನ್ನತೆಗೆ ಒಳಗಾಗಿರಬಹುದು ಎನ್ನುವ ಮಾತುಗಳು ಗ್ರಾಮದಲ್ಲಿ ಕೇಳಿ ಬರ್ತಿವೆ.

(ಒನ್ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+