ಜಮಖಂಡಿ ಉಪಚುನಾವಣೆ:ದಿ. ನ್ಯಾಮಗೌಡ ಪುತ್ರ ಕಾಂಗ್ರೆಸ್ ಅಭ್ಯರ್ಥಿ
ಬೆಂಗಳೂರು, ಜು.21: ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ನಿಧನರಾದ ಬಾಗಲಕೋಟೆಯ ಜಮಖಂಡಿ ಶಾಸಕ ಸಿದ್ದು ನ್ಯಾಮಗೌಡ ತೆರವಾದ ಜಮಖಂಡಿ ವಿಧಾನಸಭಾ ಕ್ಷೇತ್ರದಿಂದ ನ್ಯಾಮಗೌಡ ಪುತ್ರನಿಗೆ ಟಿಕೇಟ್ ನೀಡಲು ಕೆಪಿಸಿಸಿ ಬಹುತೇಕ ಅಂತಿಮ ನಿರ್ಧಾರ ಕೈಗೊಂಡಿದೆ.
ಶನಿವಾರ ಪಕ್ಷದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಯಿತು. ಸಿದ್ದು ನ್ಯಾಮಗೌಡ ಅವರ ಪತ್ನಿ ಅಥವಾ ಪುತ್ರನಿಗೆ ಟಿಕೇಟ್ ಕೊಟ್ಟರೆ ಗೆಲುವು ಸಾಧಿಸಬಹುದು ಎಂದು ಬಾಗಲಕೋಟೆಯ ಬಹುತೇಕ ಮುಖಂಡರು ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಸಭೆಯಲ್ಲಿ ಕಾಂಗ್ರೆಸ್‌ತೀರ್ಮಾನ ತೆಗೆದುಕೊಂಡಿದೆ.
ಸಭೆಯಲ್ಲಿ ನ್ಯಾಮಗೌಡ ಕುಉಂಬ ಹೊರತಾಗಿ ಬೇರೆ ಯಾರಾದೂ ಸ್ಪರ್ಧಿಸುತ್ತಾರಾ ಎಂಬುದರ ಕುರಿತು ಚರ್ಚೆ ನಡೆಯಿತು. ಆದರೆ ಬಹುತೇಕ ನಾಯಕರು ನ್ಯಾಮಗೌಡ ಕುಟುಂಬಕ್ಕೆ ಟಿಕೇಟ್ ಕೊಡುವಂತೆ ಅಭಿಪ್ರಾಯ ವ್ಯಕ್ತಪಡಿಸಿದ್ದರಿಂದ ಈ ನಿರ್ಧಾರಕ್ಕೆ ಬರಲಾಯಿತು. ಆನಂದ ನ್ಯಾಮಗೌಡ ಹಾಗೂ ಬಸವರಾಜ ನ್ಯಾಮಗೌಡ ಎಂಬ ಇಬ್ಬರು ಪುತ್ರರಿದ್ದಾರೆ ಇವರಲ್ಲಿ ಯಾರಿಗೆ ಟಿಕೇಟ್ ನೀಡಬಹುದು ಎಂದು ಕಾದು ನೋಡಬೇಕಿದೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷರ ನೇತೃತ್ವದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.












Click it and Unblock the Notifications