ಬಾಗಲಕೋಟೆಯಲ್ಲಿ 'ಸಿದ್ದರಾಮಯ್ಯ ಕ್ಯಾಂಟೀನ್' ಆರಂಭ

ಬಾಗಲಕೋಟೆ, ಜನವರಿ 01 : ಇಂದಿರಾ ಕ್ಯಾಂಟೀನ್, ನಮ್ಮ ಅಪ್ಪಾಜಿ ಕ್ಯಾಂಟೀನ್ ಆಯ್ತು ಈಗ 'ಸಿದ್ದರಾಮಯ್ಯ ಕ್ಯಾಂಟೀನ್' ಬಾಗಲಕೋಟೆಯಲ್ಲಿ ಆರಂಭವಾಗಿದೆ.

ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಲೋಕಾಪುರದಲ್ಲಿ ಸೋಮವಾರ 'ಜನಸ್ನೇಹಿ ಸಿದ್ದರಾಮಯ್ಯ ಕ್ಯಾಂಟೀನ್‌'ಗೆ ಚಾಲನೆ ಸಿಕ್ಕಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್.ಆರ್.ಪಾಟೀಲ್ ಕ್ಯಾಂಟೀನ್‌ ಉದ್ಘಾಟಿಸಿದರು.

Siddaramaiah

ಸತೀಶ ಬಂಡಿವಡ್ಡರ ಫೌಂಡೇಶನ್, ಮುಧೋಳ ಈ ಕ್ಯಾಂಟೀನ್‌ ಅನ್ನು ಆರಂಭಿಸಿದೆ. 5 ರೂ.ಗೆ ಊಟ, ಉಪಹಾರವನ್ನು ಕ್ಯಾಂಟೀನ್‌ನಲ್ಲಿ ನೀಡಲಾಗುತ್ತದೆ. ಬಡವರಿಗೆ, ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂದು ಕ್ಯಾಂಟೀನ್ ಆರಂಭಿಸಲಾಗಿದೆ.

ಕ್ಯಾಂಟೀನ್ ಉದ್ಘಾಟಿಸಿ ಮಾತನಾಡಿದ ಎಸ್.ಆರ್.ಪಾಟೀಲ್ ಅವರು, 'ಇದರಿಂದ ಬಡವರಿಗೆ,ವಿಧ್ಯಾರ್ಥಿಗಳಿಗೆ, ಕೂಲಿ ಕಾರ್ಮಿಕರಿಗೆ ಅನುಕೂಲವಾಗಲಿದೆ. ಇಂತಹ ಕಾರ್ಯ ಶ್ಲಾಘನೀಯ' ಎಂದರು.

siddaramaiah

ಕ್ಯಾಂಟೀನ್ ರಾಜಕೀಯ : ಕರ್ನಾಟಕದಲ್ಲಿ ಚುನಾವಣೆ ಎದುರಾಗುತ್ತಿದ್ದು ಕ್ಯಾಂಟೀನ್ ರಾಜಕೀಯ ಆರಂಭವಾಗಿದೆ. ಮಂಡ್ಯದಲ್ಲಿ ಕು.ರಮ್ಯಾ ಕ್ಯಾಂಟೀನ್, 2 ನಮ್ಮ ಅಪ್ಪಾಜಿ ಕ್ಯಾಂಟೀನ್ ಆರಂಭವಾಗಿವೆ. ಯಡಿಯೂರಪ್ಪ ಹೆಸರಿನಲ್ಲಿ ಕ್ಯಾಂಟೀನ್ ಶೀಘ್ರದಲ್ಲೇ ಆರಂಭವಾಗಲಿದೆ.

ಕರ್ನಾಟಕ ಸರ್ಕಾರದ ಇಂದಿರಾ ಕ್ಯಾಂಟೀನ್ ಬೆಂಗಳೂರು ನಗರದಲ್ಲಿ ಆರಂಭವಾಗಿವೆ. ಬೇರೆ-ಬೇರೆ ಜಿಲ್ಲೆಗಳಲ್ಲಿ ಜನವರಿಯಲ್ಲಿ ಆರಂಭವಾಗಲಿದೆ. ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರಿನಲ್ಲಿ ಸಿದ್ದರಾಮಯ್ಯ ಕ್ಯಾಂಟೀನ್ ಉದ್ಘಾಟನೆಗೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+