ಬಾಗಲಕೋಟೆ; ಮುಧೋಳ ತಹಶೀಲ್ದಾರ್ ಎಸ್. ಬಿ. ಬಾಡಗಿ ನಿಧನ
ಬಾಗಲಕೋಟೆ, ಮಾರ್ಚ್ 18; ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ತಹಶೀಲ್ದಾರ್ ಎಸ್. ಬಿ. ಬಾಡಗಿ ವಿಧಿವಶರಾದರು. ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್ ಸೇರಿದಂತೆ ಹಲವು ಅಧಿಕಾರಿಗಳು ಸಂತಾಪ ಸೂಚಿಸಿದ್ದಾರೆ.
ಮುಧೋಳ ತಹಶೀಲ್ದಾರ್ ಎಸ್. ಬಿ. ಬಾಡಗಿ (38) ಶುಕ್ರವಾರ ಬೆಳಗ್ಗೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಮನೆಯಲ್ಲಿಯೇ ಅವರಿಗೆ ಹೃದಯಾಘಾತವಾಗಿದ್ದು, ಪುತ್ರಿ ಮತ್ತು ಪತ್ನಿಯನ್ನು ಅಗಲಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಜನವಾಡ ಮೂಲದವರಾದ ಎಸ್. ಬಿ. ಬಾಡಗಿ ಕಳೆದ ಮೂರು ವರ್ಷಗಳಿಂದ ಮುಧೋಳ ತಹಶೀಲ್ದಾರ್ ಆಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದರು.

ಎಸ್. ಬಿ. ಬಾಡಗಿ ನಿವಾಸಕ್ಕೆ ಎಸಿ ಸಿದ್ದು ಹುಲ್ಲಳ್ಳಿ ಸೇರಿದಂತೆ ಹಲವು ಅಧಿಕಾರಿಗಳು ಭೇಟಿ ನೀಡಿ ಅಂತಿಮ ದರ್ಶನ ಪಡೆದರು. ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.
ತುಷಾರ್ ಗಿರಿನಾಥ್ ಸಂತಾಪ; ಕಂದಾಯ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್ ಎಸ್. ಬಿ. ಬಾಡಗಿ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ಪತ್ರಿಕಾ ಪ್ರಕಟಣೆಯಲ್ಲಿ ಶ್ರೀ ಎಸ್. ಬಿ. ಬಾಡಗಿ ತಹಶೀಲ್ದಾರ್ ಮುಧೋಳ ತಾಲೂಕು ಬಾಗಲಕೋಟೆ ಜಿಲ್ಲೆ ಇವರು ಇಂದು ದಿನಾಂಕ 18/38/2022ರಂದು ಹೃದಯಾಘಾತದಿಂದ ನಿಧನ ಹೊಂದಿರುವ ವಿಷಯವನ್ನು ಕೇಳಿ ಮನಸ್ಸಿಗೆ ಅತೀವ ನೋವುಂಟಾಗಿದೆ.
ಇವರ ಅಗಲಿಕೆಯಿಂದ ಕಂದಾಯ ಇಲಾಖೆಯು ಒಬ್ಬ ದಕ್ಷ ಅಧಿಕಾರಿಯ ಸೇನೆಯನ್ನು ಕಳೆದುಕೊಂಡಂತಾಗಿದೆ. ಈ ಬಗ್ಗೆ ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತಾ ಮೃತರ ಆತ್ಮಕ್ಕೆ ಶಾಂತಿಯನ್ನು ಹಾಗೂ ಅವರ ಕುಟುಂಬ ವರ್ಗಕ್ಕೆ ಮೃತರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.











Click it and Unblock the Notifications