• search
 • Live TV
ಬಾಗಲಕೋಟೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಎಚ್ಡಿಕೆ ತಾವು ಸಿಎಂ ಆದ್ರೆ ಟಿಪ್ಪು ಜಯಂತಿ ಆಚರಿಸೊಲ್ಲ ಎಂದಿದ್ರು: ಈಶ್ವರಪ್ಪ

|
   ಟಿಪ್ಪು ಜಯಂತಿ ಆಚರಣೆ ವಿಷಯದಲ್ಲಿ ಎಚ್ ಡಿ ಕೆ ಮೇಲೆ ಕೆ ಎಸ್ ಈಶ್ವರಪ್ಪ ಆರೋಪ | Oneindia Kannada

   ಬಾಗಲಕೋಟೆ, ನವೆಂಬರ್ 9: ಕುಮಾರಸ್ವಾಮಿಯವರು ತಾವು ಮುಖ್ಯಮಂತ್ರಿಯಾದರೆ ಯಾವತ್ತೂ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ಮಾಡಲು ಬಿಡುವುದಿಲ್ಲ ಎಂದಿದ್ದರು, ಆದರೆ ಇದೀಗ ಅವರ ಸರ್ಕಾರವೇ ಟಿಪ್ಪು ಜಯಂತಿ ಆಚರಣೆ ಮಾಡುತ್ತಿದೆ ಎಂದು ಬಿಜೆಪಿ ಶಾಸಕ ಕೆಎಸ್ ಈಶ್ವರಪ್ಪ ಟೀಕಿಸಿದ್ದಾರೆ.

   ಬಾಗಲಕೋಟೆಯ ಬೀಳಗಿ ಗ್ರಾಮದಲ್ಲಿ ಮಾತನಾಡಿದ ಅವರು, ಟಿಪ್ಪು ಸುಲ್ತಾನ್ ರಕ್ತದಲ್ಲಿಯೇ ದ್ರೋಹ ಅಡಗಿದೆ, ಯಾರಲ್ಲೂ ಟಿಪ್ಪು ಸುಲ್ತಾನ್ ರಕ್ತ ಹರಿಯುತ್ತಿಲ್ಲ ಎಲ್ಲರಲ್ಲೂ ಹರಿಯುತ್ತಿರುವುದು ಭಾರತಾಂಬೆ, ಸ್ವಾತಂತ್ರ್ಯ ಹೋರಾಟಗಾರರ ರಕ್ತ ಎಂದು ಹೇಳಿದರು.

   ಟಿಪ್ಪು ಜಯಂತಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಚಕ್ಕರ್ ಹಾಕಿದ್ದೇಕೆ?

   ಸರ್ಕಾರವು ಟಿಪ್ಪು ಜಯಂತಿಯನ್ನು ಪ್ರತಿಷ್ಠೆಯನ್ನಾಗಿ ತೆಗೆದುಕೊಂಡಿದೆ. ಕುಮಾರಸ್ವಾಮಿ ಅವರ ಹೇಳಿಕೆ ಏನಾಯಿತು, ಹಾಗಾದರೆ ಅವರು ಮತ್ತೆ ಸಿಎಂ ಆಗುತ್ತಾರೆ ಎನ್ನುವ ಭರವಸೆಯನ್ನೇ ಇಟ್ಟುಕೊಂಡಿರಲಿಲ್ಲವೇ ಯಾವುದೇ ಕಾರಣಕ್ಕೂ ಟಿಪ್ಪು ಜಯಂತಿ ಆಚರಣೆ ಮಾಡಲು ಅವಕಾಶ ಕೊಡುವುದಿಲ್ಲ, ಕಾಂಗ್ರೆಸ್ ಸರ್ಕಾರದಿಂದ ಈ ಟಿಪ್ಪು ಜಯಂತಿ ಆಚರಣೆ ಆರಂಭವಾಯಿತು, ಆಗ 21 ಜನರನ್ನು ಬಲಿ ಕೊಡಬೇಕಾಯಿತು ಎಂದು ಹೇಳಿದರು.

   ಸ್ವಾತಂತ್ರ್ಯ ಯೋಧ ಟಿಪ್ಪು ಸುಲ್ತಾನ್ -ಜಯಂತಿ, ಆಚರಣೆ ಅಗತ್ಯವೇನು?

   ಮುಖ್ಯಮಂತ್ರಿ ಕುಮಾರಸ್ವಾಮಿ ಈ ಮೊದಲೇ ಟಿಪ್ಪು ಜಯಂತಿಗೆ ತಾನು ಆಗಮಿಸುವುದಿಲ್ಲವೆಂದೂ ತಮ್ಮ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ಹಾಕಿಸದಂತೆ ಮನವಿ ಮಾಡಿದ್ದರು, ಆದರೂ ಟಿಪ್ಪು ಜಯಂತಿ ಆಚರಣೆ ಮಾಡಲು ಅನುಮತಿ ನೀಡಿರುವುದು ಏಕೆ ಎಂದು ಪ್ರಶ್ನಿಸಿದರು. ಶುಕ್ರವಾರ ಚಿತ್ರದುರ್ಗ, ಬೆಂಗಳೂರು, ಮಡಿಕೇರಿ, ನೆಲಮಂಗಲದಲ್ಲಿ ಬಿಜೆಪಿ ಮುಖಂಡರು ಸಾಂಕೇತಿಕ ಪ್ರತಿಭಟನೆ ನಡೆಸಿದ್ದಾರೆ. ದೇಶ ವಿರೋಧಿ ಟಿಪ್ಪು ಎಂದು ಜೈಕಾರ ಹಾಕಿದ್ದಾರೆ. ಶನಿವಾರ ಟಿಪ್ಪು ಜಯಂತಿ ದಿನವೂ ಕೂಡ ಪ್ರತಿಭಟನೆಗೆ ಬಿಜೆಪಿ ಮುಂದಾಗಿದೆ.

   ಟಿಪ್ಪು ಜಯಂತಿಗೆ ಕುಮಾರಸ್ವಾಮಿ ಗೈರು

   ಟಿಪ್ಪು ಜಯಂತಿಗೆ ಕುಮಾರಸ್ವಾಮಿ ಗೈರು

   ಟಿಪ್ಪು ಜಯಂತಿ ಆಚರಣೆಗೆ ಮನಸ್ಸಿಲ್ಲದಿದ್ದರೂ ಏನೋ ಕಾಂಗ್ರೆಸ್ ನ ಋಣದಲ್ಲಿದ್ದೇವೆ ಎಂಬುವಂತೆ ಕುಮಾರಸ್ವಾಮಿ ನಡೆದುಕೊಳ್ಳುತ್ತಿದ್ದಾರೆ. ಟಿಪ್ಪು ಜಯಂತಿ ಆಚರಣೆಗೆ ಅನುಮತಿ ನೀಡಿದ್ದರೂ ಕೂಡ ತಾವು ಹೋಗುವುದಿಲ್ಲ ಎಂದು ಹೇಳಿದ್ದಾರೆ. ಆಹ್ವಾನ ಪತ್ರಿಕೆಯಲ್ಲಿ ತಮ್ಮ ಹೆಸರು ನಮೂದಿಸದಂತೆ ಕೇಳಿಕೊಂಡಿದ್ದಾರೆ.

   ವಿಧಾನಸೌಧದಲ್ಲೇ ಟಿಪ್ಪು ಜಯಂತಿ ಆಚರಣೆ

   ವಿಧಾನಸೌಧದಲ್ಲೇ ಟಿಪ್ಪು ಜಯಂತಿ ಆಚರಣೆ

   ಕಳೆದ ಮೂರು ವರ್ಷಗಳಿಂದ ವಿಧಾನಸೌಧದಲ್ಲೇ ಟಿಪ್ಪು ಜಯಂತಿಯನ್ನು ಆಚರಣೆ ಮಾಡಲಾಗುತ್ತಿತ್ತು ಆದರೆ ಈ ಬಾರಿ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲು ಉದ್ದೇಶಿಸಲಾಗಿತ್ತು, ಆದರೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿಯೇ ನಡೆಸಲು ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ ನಿರ್ಧರಸಿದ್ದಾರೆ.

   ಚಿತ್ರದುರ್ಗದಲ್ಲಿ ಪ್ರತಿಭಟನೆ 100ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರ ಬಂಧನ

   ಚಿತ್ರದುರ್ಗದಲ್ಲಿ ಪ್ರತಿಭಟನೆ 100ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರ ಬಂಧನ

   ಚಿತ್ರದುರ್ಗದಲ್ಲಿ ಟಿಪ್ಪು ಜಯಂತಿ ವಿರೋಧಿಸಿ ಬಿಜೆಪಿ ಕಾರ್ಯಕರ್ತರು ಮದಕರಿನಾಯಕ ವೃತ್ತದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು. ಪ್ರತಿಭಟನೆ ವೇಳೆ 100ಕ್ಕೂ ಹೆಚ್ಚು ಮಂದಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

   ಟಿಪ್ಪು ಜಯಂತಿ ಪರ, ವಿರೋಧ ಮೆರವಣಿಗೆಗೆ ಅವಕಾಶವಿಲ್ಲ

   ಟಿಪ್ಪು ಜಯಂತಿ ಪರ, ವಿರೋಧ ಮೆರವಣಿಗೆಗೆ ಅವಕಾಶವಿಲ್ಲ

   ಟಿಪ್ಪು ಜಯಂತಿಯನ್ನು ಆಚರಣೆ ಂಆಡಲಾಗುತ್ತದೆ ಆದರೆ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ಕೊಡಲು ಸಾಧ್ಯವಿಲ್ಲ ಹಾಗಾಗು ಯಾವುದೇ ಮೆರವಣಿಗೆಗೆ ಅವಕಾಶವಿಲ್ಲ ಎಂದು ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ ತಿಳಿಸಿದ್ದಾರೆ.

   English summary
   BJP leader KS Eshwarappa told that chief minister HD Kumaraswamy announced that if he became cchief minister then he will not celebrate Tipu Jayanti.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X