ಚುನಾವಣೆ : ಬಾಗಲಕೋಟೆಯಲ್ಲಿ ಗೆದ್ದವರು, ಸೋತವರ ವಿವರ

ಬಾಗಲಕೋಟೆ, ಮೇ 17 : ಕರ್ನಾಟಕ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಿದೆ. ಬಾಗಲಕೋಟೆ ಜಿಲ್ಲೆಯ ಚುನಾವಣಾ ಕಣ ಈ ಬಾರಿ ಕುತೂಹಲಕ್ಕೆ ಕಾರಣವಾಗಿತ್ತು. ಬಾದಾಮಿಯಲ್ಲಿ ಸ್ಪರ್ಧಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಯಗಳಿಸಿದ್ದಾರೆ.

ಬಾಗಲಕೋಟೆ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳ ಪೈಕಿ 2018ರ ಚುನಾವಣೆಯಲ್ಲಿ ಕಾಂಗ್ರೆಸ್ 2, ಬಿಜೆಪಿ 5 ಸ್ಥಾನಗಳಲ್ಲಿ ಜಯಗಳಿಸಿದೆ. 2013ರ ಚುನಾವಣೆಯಲ್ಲಿ ಕಾಂಗ್ರೆಸ್ 6, ಬಿಜೆಪಿ ಕೇವಲ 1 ಸ್ಥಾನದಲ್ಲಿ ಜಯಗಳಿಸಿತ್ತು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಾದಾಮಿ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದರು. 1,696 ಮತಗಳ ಅಂತರದಿಂದ ಅವರು ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ಅವರನ್ನು ಸೋಲಿಸಿದ್ದಾರೆ.

Karnataka elections results 2018 : Bagalkot district winners and losers

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿದ್ದ ಉಮಾಶ್ರೀ ಅವರು ಸಹ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದಾರೆ. ತೇರದಾಳ ಕ್ಷೇತ್ರದಲ್ಲಿ ಅವರು ಬಿಜೆಪಿಯ ಸಿದ್ದು ಸವದಿ ಅವರ ವಿರುದ್ಧ 20,889ಮತಗಳ ಅಂತರದಲ್ಲಿ ಸೋಲು ಕಂಡಿದ್ದಾರೆ.

ಕ್ಷೇತ್ರ ಗೆದ್ದವರು ಪಕ್ಷ ಪಡೆದ ಮತಗಳು ಸೋತವರು ಪಕ್ಷ ಪಡೆದ ಮತಗಳು
ಮುಧೋಳ
ಗೋವಿಂದ ಕಾರಜೋಳ
ಬಿಜೆಪಿ
76,431 ಸತೀಶ ಬಂಡಿವಡ್ಡರ ಕಾಂಗ್ರೆಸ್
60,949
ತೆರದಾಳ
ಸಿದ್ದು ಸವದಿ ಬಿಜೆಪಿ
87,213 ಉಮಾಶ್ರೀ ಕಾಂಗ್ರೆಸ್ 66,324
ಜಮಖಂಡಿ
ಸಿದ್ದು ನ್ಯಾಮಗೌಡ
ಕಾಂಗ್ರೆಸ್
49,245
ಶ್ರೀಕಾಂತ್ ಕುಲಕರ್ಣಿ ಬಿಜೆಪಿ
46,450
ಬೀಳಗಿ
ಮುರುಗೇಶ್ ನಿರಾಣಿ ಬಿಜೆಪಿ
85,135 ಜಿ.ಟಿ.ಪಾಟೀಲ ಕಾಂಗ್ರೆಸ್
80,324
ಬದಾಮಿ
ಸಿದ್ದರಾಮಯ್ಯ ಕಾಂಗ್ರೆಸ್
67,599 ಬಿ.ಶ್ರೀರಾಮುಲು ಬಿಜೆಪಿ
65,903
ಬಾಗಲಕೋಟೆ ವೀರಣ್ಣ ಚರಂತಿಮಠ ಬಿಜೆಪಿ 85,653 ಎಚ್.ವೈ.ಮೇಟಿ ಕಾಂಗ್ರೆಸ್ 69,719
ಹುನಗುಂದ ದೊಡ್ಡನಗೌಡ ಪಾಟೀಲ್ ಬಿಜೆಪಿ 65,012 ವಿಜಯಾನಂದ ಕಾಶಪ್ಪನವರ್ ಕಾಂಗ್ರೆಸ್ 59,785
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+