ಬಸವಣ್ಣನ ಸನ್ನಿಧಿ ಕೂಡಲಸಂಗಮಕ್ಕೆ ಅಮಿತ್ ಶಾ ಭೇಟಿ
ಮೂರು ದಿನಗಳ ಚುನಾವಣಾ ಪ್ರಚಾರಕ್ಕೆ ಆಗಮಿಸಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಇಂದು ಬಸವಣ್ಣನವರ ಐಕ್ಯ ಸ್ಥಳ ಕೂಡಲಸಂಗಮಕ್ಕೆ ಭೇಟಿ ನೀಡಿ ಐಕ್ಯ ಸ್ಥಳಕ್ಕೆ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬಿಜೆಪಿಯ ಲಕ್ಷ್ಮಣ ಸವಧಿ ಅವರು ಅಮಿತ್ ಶಾ ಅವರ ಜೊತೆಗಿದ್ದರು ಜೊತೆಗೆ ಇನ್ನೂ ಹಲವು ರಾಜ್ಯ ಬಿಜೆಪಿ ಮುಖಂಡರು ಇದ್ದರು.
ಬಸವಣ್ಣನವರ ಪುತ್ಥಳಿಗೆ ಪೂಜೆ ಸಲ್ಲಿಸಿದ ನಂತರ ಐಕ್ಯ ಮಂಟಪ್ ಬಳಿಗೆ ತೆರಳಿದ ಅಮಿತ್ ಶಾ ಅವರು 100 ಮೀಟರ್ ಕೆಳಗೆ ಇರುವ ಐಕ್ಯ ಮಂಟಪಕ್ಕೆ ಇಳಿಯಲಾಗದೆ ದೂರವೇ ನಿಂತು ಕೈ ಮುಗಿದು ಹೋದರು.

ಅಮಿತ್ ಶಾ ಅವರು ಇಂದು ಬೀಳಗಿ, ವಿಜಯಪುರ, ಬಾಗಲಕೋಟೆ, ವಿಜಯಪುರಗಳಲ್ಲಿ ರೋಡ್ ಶೋ ಜೊತೆಗೆ ಹಲವು ಸಂವಾದ ಕಾರ್ಯಕ್ರಮ ಹಾಗೂ ಪಕ್ಷದ ಮುಖಂಡರ ಸಭೆಗಳಲ್ಲಿ ಭಾಗವಹಿಸಲಿದ್ದಾರೆ. ಸಂಜೆ ಸಿದ್ದೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ.
ನಾಳೆ ಸಹ ಅಮಿತ್ ಶಾ ಅವರು ಅವಿರತ ಪ್ರಚಾರ ಕಾರ್ಯಕ್ರದಲ್ಲಿ ತೊಡಗಲಿದ್ದು, ದಾವಣಗೆರೆ, ಚಿತ್ರದುರ್ಗ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಪ್ರಚಾರ ನಡೆಸಲಿದ್ದಾರೆ.












Click it and Unblock the Notifications