• search
 • Live TV
ಬಾಗಲಕೋಟೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ತಿಲಕ ಇಡುವವರನ್ನು ಕಂಡ್ರೆ ಭಯ: ಸಿದ್ದರಾಮಯ್ಯ ವಿಡಿಯೋ ವೈರಲ್

|
   ತಿಲಕ ಇಡುವವರನ್ನು ಕಂಡ್ರೆ ಭಯ: ಸಿದ್ದರಾಮಯ್ಯ ವಿಡಿಯೋ ವೈರಲ್ | Oneindia kannada

   ಬಾಗಲಕೋಟೆ, ಮಾರ್ಚ್ 06: "ಹಣೆಯ ಮೇಲೆ ಉದ್ದ ನಾಮ ಇಡುವವರನ್ನು ಕಂಡರೆ ನನಗೆ ಭಯ" ಎಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಲವು ಸಮುದಾಯಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

   ಬಾಗಲಕೋಟೆ ಜಿಲ್ಲೆಯ ಬದಾಮಿಯಲ್ಲಿ ನಡೆದ ಸಭೆಯೊಂದರಲ್ಲಿ ಮಾತನಾಡುತ್ತಿದ್ದ ಸಿದ್ದರಾಮಯ್ಯ, ಕಾಮಗಾರಿಯೊಂದರ ಪ್ರಗತಿಯ ಪರಿಶೀಲನೆ ನಡೆಸಿ, ನಂತರ ಆ ಕಾಮಗಾರಿ ನಡೆಸುತ್ತಿದ್ದ ಕಂಟ್ರಾಂಕ್ಟರ್ ಅನ್ನು ಕರೆದರು. ಕೆಲಸವನ್ನು ಬೇಗನೇ ಮುಗಿಸಿ ಎಂದು ಕಂಟ್ರಾಕ್ಟರ್ ಬಳಿ ಹೇಳಿದ ಸಿದ್ದರಾಮಯ್ಯ, 'ಏನಪ್ಪ, ನೀನು(ಕಂಟ್ರಾಕ್ಟರ್) ಹೀಗೆ ಕುಂಕುಮ ಎಲ್ಲ ಇಟ್ಟಿರೋದು ನೋಡಿದ್ರೆ ನಂಗೆ ಭಯವಾಗುತ್ತೆ! ಕೆಲಸ ಮಾಡ್ತೀಯಾ ತಾನೇ? ಬೇಗ ಮುಗಿಸಬೇಕು. ನನಗೆ ಹೀಗೆ ಹಣೆ ಮೇಲೆ ಉದ್ದ ನಾಮ ಇಡುವವರನ್ನು ಕಂಡರೆ ಭಯ' ಎಂದರು.

   ಹಿಂದೂಗಳ ಬಗ್ಗೆ ಪ್ರಚೋದನಾಕಾರಿ ಹೇಳಿಕೆ: ಪಾಕ್ ಸಚಿವನಿಗೆ ಮುಖಭಂಗ

   ಹಿಂದು ಧರ್ಮದಲ್ಲಿ ಹಲವು ಸಮುದಾಯದವರು ಹಣೆಯ ಮೇಲೆ ತಿಲಕ ಇಡುವ ಪದ್ಧತಿಯನ್ನು ಪಾಲಿಸುತ್ತಾರೆ. ಆದರೆ ಹಿಂದುಗಳ ಅವಹೇಳನಕ್ಕೇ ಸಿದ್ದರಾಮಯ್ಯ ಈ ರೀತಿ ಮಾತನಾಡಿದ್ದಾರೆ ಎಂದು ಟ್ವಿಟ್ಟರ್ ನಲ್ಲಿ ಆಕ್ರೋಶ ವ್ಯಕ್ತವಾಗಿದೆ. ಕೆಲವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ರಾಹುಲ್ ಗಾಂಧಿ ಹಣೆಯ ಮೇಲೆ ನಾಮ ಎಳೆದುಕೊಂಡಿರುವ ಚಿತ್ರವನ್ನು ಹಾಕಿ, 'ಸಿದ್ದರಾಮಯ್ಯ ಅವರೇ, ನಿಮಗೆ ಈಗಲೂ ಭಯವಾಗುತ್ತದಾ?' ಎಂದು ಪ್ರಶ್ನಿಸಿದ್ದಾರೆ.

   ವೈರಲ್ ಆದ ಸಿದ್ದು ವಿಡಿಯೋ

   "ನನಗೆ ಹಣೆ ಮೇಲೆ ಉದ್ದ ನಾಮ ಎಳೆದುಕೊಳ್ಳುವವರನ್ನು ಕಂಡ್ರೆ ಯಾಕೋ ಭಯ" ಎಂದು ಸಭೆಯೊಂದರಲ್ಲಿ ಸಿದ್ದರಾಮಯ್ಯ ಹೇಳುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದ್ದು, ಬಹುಸಂಖ್ಯಾತ ಹಿಂದುಗಳ ಆಕ್ರೋಶಕ್ಕೆ ಕಾರಣವಾಗಿದೆ.

   ಭಾರತೀಯರ ವಿಜಯಾಚರಣೆ ಕುರಿತ ಕುಮಾರಸ್ವಾಮಿ ಹೇಳಿಕೆಗೆ ತೀವ್ರ ಆಕ್ಷೇಪ

   ಮುಸ್ಲಿಂ ಓಲೈಕೆಗೆ ನಾಚಿಕೆಯಾಗಬೇಕು!

   ಹಿಂದುದ್ವೇಷಿ, ಮುಸ್ಲಿಂ ಓಲೈಕೆಯಲ್ಲೇ ಕಾಲಕಳೆವ ಸಿದ್ದರಾಮಯ್ಯ ಅವರಿಗೆ ನಾಚಿಕೆಯಾಗಬೇಕು! ಅವರ ಪಕ್ಷವನ್ನು ಹಿಂದುಗಳೇ ಸೋಲಿಸಬೇಕು ಎಂದು ಅಗಿನ್ನರ್ ಎಂಬ ಟ್ವೀಟ್ ಖಾತೆಯಿಂದ ಟ್ವೀಟ್ ಮಾಡಲಾಗಿದೆ.

   ಇವರನ್ನು ಕಂಡರೂ ಹೆದರಿಕೆನಾ?

   ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಢಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಕಾಂಗ್ರೆಸ್ ಮುಖಂಡೆ ಪ್ರಿಯಾಂಕಾ ಗಾಂಧಿ ಮತ್ತು ಆಕೆಯ ಪತಿ ರಾಬರ್ಟ್ ವಾದ್ರಾ ಎಲ್ಲರೂ ತಿಲಕ ಇಟ್ಟಿರುವ ಚಿತ್ರವನ್ನು ಶೇಷ ಪತ್ತಂಗಿ ಎಂಬುವವರು ಟ್ವೀಟ್ ಮಾಡಿ, ಬಹುಶಃ ಸಿದ್ದರಾಮಯ್ಯ ಅವರಿಗೆ ಇವರನ್ನು ಕಂಡರೆ ಭಯವಿರಬೇಕು ಎಂದಿದ್ದಾರೆ!

   ಈಗಲೂ ಭಯಾನಾ?

   ನಿಮ್ಮದೇ ಪಕ್ಷದ ನಾಯಕ ತಿಲಕ ಇಟ್ಟಿರುವುದನ್ನು ನೋಡಿ ಸಿದ್ದರಾಮಯ್ಯನವರೇ. ಈಗಲೂ ನಿಮಗೆ ಭಯಾನಾ ಎಂದಿದ್ದಾರೆ ಹಾಸಿ ಜೊಹಾರಿ.

   ಅಂಗೈ ಹುಣ್ಣಿಗೆ ಕನ್ನಡಿ ಬೇಕೆ?

   ಸಿದ್ದರಾಮಯ್ಯನವರೇ, ನಾಮ ಹಾಕ್ಕೊಂಡೊರನ್ನು ಕಂಡ್ರೆ ಭಯನಾ !? ಅಂಗೈ ಹುಣ್ಣಿಗೆ ಕನ್ನಡಿ ಏಕೆ ಅಲ್ವಾ..? ಎಂದು ಸಿದ್ದರಾಮಯ್ಯ ಅವರೇ ನಾಮ ಹಾಕಿಕೊಂಡಿರುವ ಚಿತ್ರವನ್ನು ಧರ್ಮ ರಾಜ್ ಎಂಬುವವರು ಟ್ವೀಟ್ ಮಾಡಿದ್ದಾರೆ.

   ಆ ಮಾತು ಕೇಳಿದೊಡನೆ ನಾಮ ಇಟ್ಟುಕೊಂಡೆ!

   ಸಿದ್ದರಾಮಯ್ಯನಿಗೆ "ಹಣೆ ಮೇಲೆ ನಾಮ ಕಂಡ್ರೆ ಭಯ ಆಗುತ್ತದೆ"

   ತಕ್ಷಣ ಹಣೆಯ ಮೇಲಿದ್ದ ಕುಂಕುಮ ಅಳಸಿಹೋದದ್ದು ನೆನಪಾಯ್ತು. ಹಚ್ಚಿ "ಜೈ ಶ್ರೀರಾಮ್"ಎಂದೆ ಎಂದಿದ್ದಾರೆ ಅಕ್ಷಯ್ ಕಾಮತ್.

   ಜನರಿಗೆ ನಾಮ ಹಾಕಿ ಸಾಕಾಗಿದೆಯಾ?!

   ನನಗೆ ನಾಮ ಕಂಡ್ರೆ ಭಯ ಆಗುತ್ತೆ : ಸಿದ್ದರಾಮಯ್ಯ..

   ಭಕ್ತರು - ಭಯ ಭಕ್ತಿ ಇರ್ಬೇಕು ಸ್ವಾಮಿ. ಯಾಕಂದ್ರೆ ನಿಮ್ಮಗೆಲ್ಲ ಜನರಿಗೆ ನಾಮ ಹಾಕಿ ಸಾಕಾಗಿದೆ. ಜನ ಎಲ್ಲಿ ರೊಚ್ಚಿಗೇಳ್ತಾರೋ ಅನ್ನೋ ಭಯ ಶುರುವಾಗಿದೆ ಎಂದಿದ್ದಾರೆ ಬಹದ್ದೂರ್ ಸತೀಶ್!

   English summary
   Former Karnataka CM and Congress leader Siddaramaiah, says, "I am scared of people who put long tikas with kumkum or ash", at an event, in Badami, Karnataka, yesterday,
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X