Bagalkot Lok Sabha Election 2024 Results LIVE: ಬಾಗಲಕೋಟೆಯಲ್ಲಿ ಮತ್ತೆ ಭದ್ರವಾಯ್ತು ಜೆಪಿಪಿ, ಕಾಂಗ್ರೆಸ್‌ಗೆ ಸೋಲು
ಬಾಗಲಕೋಟೆ, ಜೂನ್ 04: ಐತಿಹಾಸಿಕವಾಗಿ ಚಾಲುಕ್ಯರಾ ನಾಡಾಗಿರುವ ಬಾಗಲಕೋಟೆಯಲ್ಲಿ 2024ರ ಲೋಕಸಭಾ ಚುನಾವಣೆಯ ಫಲಿತಾಂಶವು ಇಂದು ಜೂನ್ 04ರಂದು ನಡೆಯುತ್ತಿದೆ. ಕಳೆದ ಮೇ 07ರಂದು ಈ ಕ್ಷೇತ್ರದಲ್ಲಿ ಮತದಾನ ನಡೆದಿದ್ದು, ಅಂದು ಶೇಕಡಾ 72.66% ರಷ್ಟು ಅರ್ಹರ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು. ಇಂದಿನ ಮತ ಎಣಿಕೆಯಲ್ಲಿ ಕ್ಷೇತ್ರದಲ್ಲಿ ಯಾರು ಗೆದ್ದು ಬೀಗಲಿದ್ದಾರೆ ಎಂದು ತಿಳಿಯಲಿದೆ.
ಬಾಗಲಕೋಟೆ ಕ್ಷೇತ್ರದಲ್ಲಿ ಈ ಸಲ ಒಟ್ಟು 22 ಮಂದಿ ಅಭ್ಯರ್ಥಿಗಳು ಕಣಕ್ಕಿಳಿದು ಸುದ್ದಿ ಮಾಡಿದ್ದರು. ಆದರೆ ದೊಡ್ಡ ಪಕ್ಷವಾಗಿ ಗುರುತಿಸಿಕೊಂಡಿರುವ ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ಇಲ್ಲಿ ತೀವ್ರ ಹಣಾಹಣಿ ಏರ್ಪಟ್ಟಿದೆ. ಬಿಜೆಪಿಯಿಂದ ಪಿಸಿ ಗದ್ದಿಗೌಡರ ಹಾಗೂ ಕಾಂಗ್ರೆಸ್‌ನಿಂದ ಸಂಯುಕ್ತ ಪಾಟೀಲ್ ಅವರು ಮುಖಾಮುಖಿ ಆಗಿದ್ದಾರೆ. ಗೆಲ್ಲುವ ಉತ್ಸಾಹ, ವಿಶ್ವಾದಿಂದಲೇ ಕ್ಷೇತ್ರ ತುಂಬೆಲ್ಲ ಓಡಾಡಿ ಪ್ರಚಾರ ಮಾಡಿ ಇಂದು ಪಲಿತಾಂಶಕ್ಕಾಗಿ ಕಾಯುತ್ತಿದ್ದಾರೆ.

ಬಾಗಲಕೋಟೆಯಲ್ಲಿ 2019ರ ಲೋಕಸಭಾ ಚುಣಾವಣೆ ಸೇರಿದಂತೆ ಹಿಂದಿನ ಕೆಲವು ಚುನಾವಣೆಯಲ್ಲಿ ಬಿಜೆಪಿಯ ಪಿಸಿ ಗದ್ದಿಗೌಡರ್ ಅವರೇ ಹ್ಯಾಟ್ರಿಕ್ ಬಾರಿಸಿಕೊಂಡು ಬಂದಿದ್ದಾರೆ. ಕಾಂಗ್ರೆಸ್ ಇಲ್ಲಿ ಮಕಾಡೆ ಮಲಗುತ್ತಲೆ ಬಂದಿದೆ. ಈ ಭಾರಿ ಟಿಕೆಟ್ ಆಕಾಂಕ್ಷಿ ವೀಣಾ ಕಾಶಪ್ಪನವರ್ ಅವರಿಗೆ ಟಿಕೆಟ್ ನೀಡದೇ ಹೊಸ ಮುಖ ಸಂಯುಕ್ತ ಪಾಟೀಲ್ ಅವರಿಗೆ ನೀಡಿದೆ. ಈ ಮೂಲಕ ಚುನಾವಣೆ ಗೆಲ್ಲುವ ವಿಶ್ವಾಸ ಕಾಂಗ್ರೆಸ್ ನಲ್ಲಿದೆ. ಈ ಕುತೂಹಲಕ್ಕೆ ಇಂದು ತೆರೆ ಬೀಳಲಿದೆ.
ಬಾಗಲಕೋಟೆ ಲೋಕಸಭಾ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ಲೈವ್ ಅಪ್ಡೇಟ್ ಗಾಗಿ ನೀವು 'ಒನ್ ಇಂಡಿಯಾ ಕನ್ನಡದಲ್ಲಿ' ವೀಕ್ಷಿಸಬಹುದು.
* ಬಾಗಲಕೋಟೆಯಲ್ಲಿ ಮತ ಎಣಿಕೆಯು ಇಂದು ಮಂಗಳವಾರ ಬೆಳಗ್ಗೆಯಿಂದ ಸಂಜೆ 6 ಗಂಟೆವೆಗೆ ನಡೆಯಲಿದೆ. ಮತ ಎಣಿಕೆ ಕೇಂದ್ರ ಸುತ್ತಲೂ ಸೂಕ್ತ ಪೊಲೀಸ್ ಬಿಗಿ ಭದ್ರತೆ ಒಗಿಸಲಾಗಿದೆ. ಕೇಂದ್ರ ಸುತ್ತಲೂ ನಿಷೇಧಾಜ್ಞೆ (144 ಸೆಕ್ಷನ್) ಜಾರಿಯಲ್ಲಿದೆ.
* ಬಾಗಲಕೋಟೆ ಲೋಕಸಭಾ ಕ್ಷೇತ್ರದಿಂದ ಈ ಬಾರಿ ಟಿಕೆಟ್ ಪಡೆಯುವುದಕ್ಕೆ ಕಾಂಗ್ರೆಸ್‌ನ ಆಕಾಂಕ್ಷಿ ವೀಣಾ ಕಾಶೆಪ್ಪನವರ್ ಸರ್ವ ಪ್ರಯತ್ನ ನಡೆಸಿದರು. ಅವರ ಬೆಂಬಲಿಗರು ಬಂದು ರಾಜಧಾನಿಯಲ್ಲಿ ಪ್ರತಿಭಟಿಸಿ, ಮುಖ್ಯಮಂತ್ರಿ ಆದಿಯಾಗಿ ಅನೇಕ ನಾಯಕರಿಗೆ ಮನವಿ ಮಾಡಿದರು. ಆದರೆ ಕಾಂಗ್ರೆಸ್ ಹೈಕಮಾಂಡ್ ಕೊನೆಗೂ ಸಂಯುಕ್ತಾ ಪಾಟೀಲ್ ಅವರನ್ನು ಕಣಕ್ಕಿಳಿಸಿತು.
* ಬಾಗಲಕೋಟೆ ಬಿಜೆಪಿಯ ಭದ್ರಕೋಟೆಯಾಗಿದೆ. ಸತತವಾಗಿ ಬಿಜೆಪಿ ಇಲ್ಲಿ ಹ್ಯಾಟ್ರಿಕ್ ಬಾರಿಸಿದೆ. ಈ ಬಾರಿಯು ತನ್ನ ಹಿಡಿತ ಕಳೆದುಕೊಳ್ಳದಂತೆ ರಾಜಕೀಯವಾಗಿ ಒಂದಷ್ಟು ಹೊಸ ಪ್ರಯೋಗ, ತಂತ್ರಗಳ ಮೂಲಕ ಕಾಂಗ್ರೆಸ್ ಸೋಲಿಸಲು ಸಜ್ಜಾಗಿದೆ. ಇದಕ್ಕೆ ಕಾಂಗ್ರೆಸ್ ಸಹ ಪ್ರತಿ ತಂತ್ರ ಹೂಡಿದೆ.
ಅಂಚೆ ಮತದಾನದಲ್ಲಿ ಬಿಜೆಪಿಗೆ ಮುನ್ನಡೆ
ಬೆಳಗ್ಗೆ 8 ಗಂಟಗೆ ಗಲಕೋಟೆಯಲ್ಲಿ ಅಂಚೆ ಮತ ಎಣಿಕೆ ಶುರುವಾಗಿದೆ. ಇದರಲ್ಲಿ ಬಿಜೆಪಿ ಅಭ್ಯರ್ಥಿ ಪಿಸಿ ಗದ್ದಿಗೌಡರ ಅವರಿಗೆ ಮುನ್ನಡೆ ಇದೆ. ಇವರ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಎಸ್ ಪಾಟೀಲ್ ಪ್ರಬಲ ಸ್ಪರ್ಧೆ ಒಡ್ಡಿದ್ದರು. ಸದ್ಯ ಬಿಜೆಪಿ ಇಲ್ಲಿ ಮುನ್ನಡೆ ಸಾಧಿಸಿದೆ.
ಕಾಂಗ್ರೆಸ್ ಅಭ್ಯರ್ಥಿಗೆ ಹಿನ್ನಡೆ
ಬಾಗಲಕೋಟೆಯಲ್ಲಿ ಅಂಚೆ ಮತದಾನ ಎಣಿಕೆ ಮಾಡುತ್ತಿರುವ ಚುನಾವಣಾ ಸಿಬ್ಬಂದಿ. ಬೆಳಗ್ಗೆ 9 ಗಂಟೆಗೆ ಪ್ರಕಾರ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ್‌ಗೆ ಹಿನ್ನಡೆ ಆಗಿದೆ, ಬಿಜೆಪಿ ಮುನ್ನಡೆ ಸಾಧಿಸಿದೆ.
ಬೆಳಗ್ಗೆ 10.25ರವರೆಗೆ ಬಾಗಲಕೋಟೆಯಲ್ಲಿ ಪಿಸಿ ಗದ್ದಿಗೌಡರ ನಿರಂತರ ಮುನ್ನಡೆ ಕಾಯ್ದುಕೊಂಡಿದ್ದಾರೆ. 69542 ಮತಗಳಿಂದ ಮುಂದಿದ್ದಾರೆ. ಈವರೆಗೆ ಕಾಂಗ್ರೆಸ್‌ನ ಸಂಯುಕ್ತ ಪಾಟೀಲ್ ಅವರು 63599 ಮತಗಳಿಂದ ಹಿಂದಿದ್ದಾರೆ. ಸದ್ಯ ಕ್ಷೇತ್ರದಲ್ಲಿ ಬಿಜೆಪಿ ನಿರಂತರ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಸಂಯುಕ್ತಾ ಪಾಟೀಲ್‌ಗೆ ಹಿನ್ನಡೆ
ಬೆಳಗ್ಗೆ 11.05 ಗಂಟೆಗೆ ಬಾಗಲಕೋಟೆಯಲ್ಲಿ ಪಿಸಿ ಗದ್ದಿಗೌಡರ 144889 ಮತಗಳ ಮೂಲಕ ನಿರಂತರ ಮುನ್ನಡೆ ಸಾಧಿಸುತ್ತಿದ್ದಾರೆ. ಅವರ ವಿರುದ್ಧ 135216 ಮತಗಳಿಂದ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ್ ಹಿನ್ನಡೆ ಅನುಭವಿಸಿದ್ದಾರೆ. ಸದ್ಯ ಇವರಿಬ್ಬರ ಮಧ್ಯೆ ತೀವ್ರ ಹಣಾಹಣಿ ಏರ್ಪಟ್ಟಿದೆ. ಹಾವು ಏಣಿ ಆಟ ಮುಂದುವರಿದಿದೆ.
ಬಾಗಲಕೋಟೆಯಲ್ಲಿ ಮತ್ತೆ ಅರಳಿದ ಕಮಲ
ಬಾಗಲಕೋಟೆ ಲೋಕಸಭಾ ಚುಣಾವಣೆಯಲ್ಲಿ 2024 ಫಲಿತಾಂಶ ಬಹುತೇಕ ಅಂತಿಮವಾಗಿದೆ. ಈ ಬಾರಿ ಮತ್ತೆ ಕಮಲ ಅರಳಿದೆ. ಹಸ್ತಕ್ಕೆ ತೀವ್ರ ಹಿನ್ನಡೆ ಆಗಿದೆ. ಇಲ್ಲಿ ಬಿಜೆಪಿ ಅಭ್ಯರ್ಥಿ ಪಿಸಿ ಗದ್ದಿಗೌಡರ ಅವರು ಗೆಲುವಿನ ಪತಾಕೆ ಹಾರಿಸಿದ್ದಾರೆ. ಇವರ ವಿರುದ್ಧ ಕಾಂಗ್ರೆಸ್‌ನ ಅಭ್ಯರ್ಥಿ ಸಂಯುಕ್ತಾ ಎಸ್ ಪಾಟೀಲ್ ಅವರು ಸೋಲು ಅನುಭವಿಸದ್ದಾರೆ. ಸಂಜೆ ಅಧಿಕೃತ ಘೋಷಣೆ ಆಗಲಿದೆ.
ಬಾಗಲಕೋಟೆಯಲ್ಲಿ ಹಿಡಿತ ಬಿಟ್ಟು ಕೊಡದ ಬಿಜೆಪಿಗೆ ಮತ್ತೆ ಜಯ
ಬಾಗಲಕೋಟೆಯಲ್ಲಿ ಮತ ಎಣಿಕೆ ಪೂರ್ಣಗೊಂಡಿದ್ದು, ಬಿಜೆಪಿಯ ಪಿಸಿ ಗದ್ದಿಗೌಡರ ಅವರು 671039 ಮೂಲಕ ಮತ್ತೆ ಕಮಲವನ್ನು ಅಧಿಕಾರಕ್ಕೆ ತರುವಲ್ಲಿ ಶ್ರಮಿಸಿದ್ದಾರೆ. ಇವರ ವಿರುದ್ಧ ಸ್ಪರ್ಧೆಗೆ ಇಳಿದಿದ್ದ ಕಾಂಗ್ರೆಸ್‌ನ ಮಹಿಳಾ ಅಭ್ಯರ್ಥಿ ಸಂಯುಕ್ತ ಪಾಟೀಲ್ ಅವರು 602640 ಮತ ಪಡೆದಿದ್ದಾರೆ. ಇಬವರಿಬ್ಬರ ಮಧ್ಯೆ 68399 ಮತಗಳ ಅಂತರವಿದೆ ಎಂದು ಚುನಾವಣಾ ಆಯೋಗದ ಜಾಲತಾಣದಲ್ಲಿ ಅಧಿಕೃತ ಮಾಹಿತಿ ನೀಡಲಾಗಿದೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications