ಬಾಗಲಕೋಟೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಾದಾಮಿ ಕ್ಷೇತ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವ ನಾಯಕನ್ಯಾರು?

By ಬಾಗಲಕೋಟೆ ಪ್ರತಿನಿಧಿ
|
Google Oneindia Kannada News

Recommended Video

Karnataka Elections 2018 : ಬಾದಾಮಿಯಲ್ಲಿ ಯಾರಿಗೆ ಗೆಲುವು? ಸಿದ್ದು v/s ಬಿ ಶ್ರೀರಾಮುಲು | Oneindia kannada

ಬಾಗಲಕೋಟೆ ಏಪ್ರಿಲ್ 26 : ಬಾದಾಮಿ ವಿಧಾನಸಭೆ ಕ್ಷೇತ್ರ ತನ್ನ 66 ವರ್ಷಗಳ ಚುನಾವಣೆ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ರಾಷ್ಟ್ರದ ಗಮನ ಸೆಳೆದು, ಕರ್ನಾಟಕದ ಅತ್ಯಂತ ಪ್ರತಿಷ್ಠಿತ ಕ್ಷೇತ್ರವಾಗಿ ರೂಪಾಂತರಗೊಂಡಿದೆ.

ಮೇ 12ರಂದು ನಡೆಯುವ ವಿಧಾನಸಭೆ ಚುನಾವಣೆಗೆ ಈ ಕ್ಷೇತ್ರದಿಂದ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಾಜಿ ಸಚಿವ, ಬಳ್ಳಾರಿಯ ಎಂಪಿ ಶ್ರೀರಾಮುಲು ಸ್ಪರ್ಧಿಸುತ್ತಿರುವುದೇ ಎಲ್ಲರ ಗಮನ ಸೆಳೆಯಲು ಕಾರಣ.

ಬಾದಾಮಿಯಲ್ಲಿ ಸ್ಪರ್ಧಿಸಿದ್ದೇಕೆ? ಸಿದ್ದರಾಮಯ್ಯ ಅವರ ಉತ್ತರ ಇಲ್ಲಿದೆ ನೋಡಿಬಾದಾಮಿಯಲ್ಲಿ ಸ್ಪರ್ಧಿಸಿದ್ದೇಕೆ? ಸಿದ್ದರಾಮಯ್ಯ ಅವರ ಉತ್ತರ ಇಲ್ಲಿದೆ ನೋಡಿ

ಮುಖ್ಯಮಂತ್ರಿ ಹಾಗೂ ಬಿಜೆಪಿಯ ಗಣಿ ಧಣಿಯ ನೇರ ಫೈಟ್ ಜೊತೆಗೆ ಜೆಡಿಎಸ್ ಅಭ್ಯರ್ಥಿ ಹನುಮಂತ ಮಾವಿನಮರದ ಸ್ಪರ್ಧೆಯಿಂದ ಕೂಡ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಾದಾಮಿ ಅತ್ಯಂತ ಪ್ರತಿಷ್ಠಿತ ಕ್ಷೇತ್ರವಾಗಿ ಹೊರಹೊಮ್ಮಲಿದ್ದು, ಬಾದಾಮಿ ಬನಶಂಕರಿ ದೇವಿಯ ಕೃಪೆ ಯಾರಿಗೆ ಒಲಿಯಲಿದೆ ಎಂಬುದು ಸಾಕಷ್ಟು ಕುತೂಹಲ ಮೂಡಿಸಿದೆ. ಯಾರ ಬಾಯಿಗೆ ಬಾದಾಮಿ ಬೀಳುತ್ತದೆ ಎಂಬುದನ್ನು ತಿಳಿಯಲು ಮೇ 15ರ ವರೆಗೆ ಕಾಯಲೇಬೇಕು.

ಸಿದ್ಧರಾಮಯ್ಯ ಸ್ಪರ್ಧೆಯಿಂದ ಕಾಂಗ್ರೆಸ್ ಗೆ ಅನುಕೂಲ

ಸಿದ್ಧರಾಮಯ್ಯ ಸ್ಪರ್ಧೆಯಿಂದ ಕಾಂಗ್ರೆಸ್ ಗೆ ಅನುಕೂಲ

ಹಾಗೆ ನೋಡಿದರೆ ಇವರಿಬ್ಬರೂ ಬಾದಾಮಿ ಕ್ಷೇತ್ರದವರಲ್ಲ, ಬಾಗಲಕೋಟೆ ಜಿಲ್ಲೆಯವರೂ ಅಲ್ಲ. ಆದರೂ ಅದಾವುದೋ ಕಾರಣಕ್ಕೆ ಇವರಿಬ್ಬರೂ ಕರ್ನಾಟಕದ ಇತರೆ ಎಲ್ಲ ಸಾಮಾನ್ಯ ಕ್ಷೇತ್ರಗಳನ್ನು ಬಿಟ್ಟು, ಸ್ಪರ್ಧೆಗೆ ಬಾದಾಮಿಯನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಸಿದ್ದರಾಮಯ್ಯ ಅವರು ಸ್ಪರ್ಧಿಸುತ್ತಿರುವುದರಿಂದ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಕಾಂಗ್ರೆಸ್ ಗೆಲುವಿಗೆ ಅನುಕೂಲವಾಗಲಿದೆ ಎಂದು ಬಾಗಲಕೋಟೆ ಜಿಲ್ಲೆಯ ಉಸ್ತುವಾರಿ ಸಚಿವರು ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷರು ಸಿಎಂ ಅವರನ್ನು ಕರೆದುಕೊಂಡು ಬಂದಿದ್ದಾರೆ ಎಂದು ಹೇಳಲಾಗುತ್ತಿದೆ.
ಅವರ ನಿರೀಕ್ಷೆಯಲ್ಲಿ ತಪ್ಪೇನಿಲ್ಲ. ಸಿದ್ದರಾಮಯ್ಯ ಅವರು ಬಾದಾಮಿಯಲ್ಲಿ ಸ್ಪರ್ಧಿಸಿರುವುದರಿಂದ ಬಾಗಲಕೋಟೆ ಜಿಲ್ಲೆಯ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಅನುಕೂಲವಾಗುವ ಸಾಧ್ಯತೆಗಳಿವೆ.

ವಾಲ್ಮೀಕಿ ಜನಾಂಗದ ಕನಸು ನನಸಾಯ್ತು

ವಾಲ್ಮೀಕಿ ಜನಾಂಗದ ಕನಸು ನನಸಾಯ್ತು

ಶ್ರೀರಾಮುಲು ಸ್ಪರ್ಧಿಸುತ್ತಿರುವುದರಿಂದ ಬಾಗಲಕೋಟೆ ಜಿಲ್ಲೆಯ ಬಿಜೆಪಿ ಅಭ್ಯರ್ಥಿಗಳಿಗೂ ಅನುಕೂಲವಾಗುವ ಸಾಧ್ಯತೆಗಳಿವೆ. ಎರಡೂ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ವಾಲ್ಮೀಕಿ ಸಮಾಜದವರಿಗೆ ಬಾಗಲಕೋಟೆ ವಿಧಾನಸಭೆ ಕ್ಷೇತ್ರಕ್ಕೆ 40 ವರ್ಷಗಳ ನಂತರ ರಾಷ್ಟ್ರೀಯ ಪಕ್ಷದಿಂದ ಎಂಎಲ್ಎ ಟಿಕೆಟ್ ಸಿಕ್ಕಿದೆ. 1978ರಲ್ಲಿ ಅಂದಿನ ಪ್ರಬಲ ಪಕ್ಷವಾಗಿದ್ದ, ಕೇಂದ್ರ ಸರ್ಕಾರದಲ್ಲಿ ಅಧಿಕಾರ ನಡೆಸುತ್ತಿದ್ದ ಜನತಾ ಪಕ್ಷದ ಟಿಕೆಟ್ ಬೀಳಗಿ ಕ್ಷೇತ್ರದಲ್ಲಿ ವಾಲ್ಮೀಕಿ ಜನಾಂಗದ ವಿ.ಎ. ಪಾಟೀಲ ಅವರಿಗೆ ಸಿಕ್ಕಿತ್ತು. ಅವರು ಕೇವಲ 3000 ಮತಗಳ ಅಂತರದಿಂದ ಕಾಂಗ್ರೆಸ್ ಎದುರು ಸೋತಿದ್ದರು.

ಆನಂತರ ಬಾಗಲಕೋಟೆಯಲ್ಲಿ ವಾಲ್ಮೀಕಿ ಜನಾಂಗಕ್ಕೆ ಯಾವ ಎಂಎಲ್ ಎ ಕ್ಷೇತ್ರದಲ್ಲಿಯೂ ರಾಷ್ಟ್ರೀಯ ಪಕ್ಷಗಳು ಟಿಕೆಟ್ ಕೊಟ್ಟಿರಲಿಲ್ಲ (ಕೆಸಿಪಿ, ಬಿಎಸ್ ಪಿ ಬಾದಾಮಿಯಲ್ಲಿ ಒಂದೊಂದು ಸಲ ಟಿಕೆಟ್ ಕೊಟ್ಟಿದ್ದವು). ಈಗ ಬಾದಾಮಿ ವಿಧಾನಸಭೆ ಕ್ಷೇತ್ರಕ್ಕೆ ಶ್ರೀರಾಮುಲು ಅವರಿಗೆ ಬಿಜೆಪಿ ಟಿಕೆಟ್ ಕೊಟ್ಟಿದೆ. ರಾಷ್ಟ್ರೀಯ ಪಕ್ಷದ ಟಿಕೆಟ್ ಮೇಲೆ ಸ್ಪರ್ಧಿಸಬೇಕೆಂಬ ವಾಲ್ಮೀಕಿ ಜನಾಂಗದ ರಾಜಕೀಯ ಮುಖಂಡರ ಕನಸು 1983ರ ವಿಧಾನಸಭೆ ಚುನಾವಣೆಯಿಂದಲೂ ಜೀವಂತವಾಗಿದೆ. ಈಗ ಶ್ರೀರಾಮುಲು ಅವರಿಗೆ ಬಿಜೆಪಿ ಟಿಕೆಟ್ ಸಿಕ್ಕಿದ್ದರಿಂದ ಆ ಕನಸು ನನಸಾಗಿದೆ.

ಸಿದ್ದರಾಮಯ್ಯ v/s ಶ್ರೀರಾಮುಲು ಕದನ : ಲಾಭ, ನಷ್ಟದ ಲೆಕ್ಕಾಚಾರ!ಸಿದ್ದರಾಮಯ್ಯ v/s ಶ್ರೀರಾಮುಲು ಕದನ : ಲಾಭ, ನಷ್ಟದ ಲೆಕ್ಕಾಚಾರ!

ವಾಲ್ಮೀಕಿ ಜನಾಂಗದ ಮತಗಳು ಬಿಜೆಪಿಗೆ ಪ್ಲಸ್

ವಾಲ್ಮೀಕಿ ಜನಾಂಗದ ಮತಗಳು ಬಿಜೆಪಿಗೆ ಪ್ಲಸ್

ಬಾದಾಮಿ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿರುವ ಶ್ರೀರಾಮುಲು ಗೆದ್ದರೆ ಮುಂದಿನ ದಿನಗಳಲ್ಲಿ ವಾಲ್ಮೀಕಿ ಜನಾಂಗದವರು ಪ್ರಮುಖ ಪಕ್ಷಗಳಿಂದ ಬಾದಾಮಿ ಟಿಕೆಟ್ ಕ್ಲೇಮ್ ಮಾಡಲು ಪಾಸ್ ಪೋರ್ಟ್ ಸಿಗುತ್ತದೆ. ಈ ಕಾರಣದಿಂದ ಶ್ರೀರಾಮುಲು ಸ್ಪರ್ಧೆಯಿಂದ ಬಾದಾಮಿ ಹಾಗೂ ಬಾಗಲಕೋಟೆ ಜಿಲ್ಲೆಯ ಎಲ್ಲ ವಿಧಾನಸಭೆ ಕ್ಷೇತ್ರಗಳಲ್ಲಿ ಈ ಚುನಾವಣೆಯಲ್ಲಿ ವಾಲ್ಮೀಕಿ ಜನಾಂಗದ ಮತಗಳು ಕ್ರೋಢೀಕರಣಗೊಂಡರೆ ಅದು ಬಿಜೆಪಿಗೆ ಅನುಕೂಲವಾಗಬಹುದು.

ಫಲಿತಾಂಶ ಏನಾಗಬಹುದು?

ಫಲಿತಾಂಶ ಏನಾಗಬಹುದು?

40 ವರ್ಷಗಳ ನಂತರ ಈ ಕ್ಷೇತ್ರದಲ್ಲಿ ಮೊದಲ ಸಲ ಚಿಮ್ಮನಕಟ್ಟಿ -ಪಟ್ಟಣಶೆಟ್ಟಿ ಕಣದಲ್ಲಿ ಇಲ್ಲದೆ ವಿಧಾನಸಭೆಗೆ ಚುನಾವಣೆ ನಡೆಯುತ್ತಿದೆ. ಕಾಂಗ್ರೆಸ್ ಹೈಕಮಾಂಡ್ ಬಾದಾಮಿಯಲ್ಲಿ ಸಿದ್ದರಾಮಯ್ಯ ಅವರನ್ನು ಚುನಾವಣೆಗೆ ನಿಲ್ಲಿಸುವ ಮೂಲಕ ಉತ್ತರ ಕರ್ನಾಟಕದಲ್ಲಿ ತನ್ನ ನೆಲೆ ಭದ್ರಪಡಿಸಿಕೊಳ್ಳಲು ಮುಂದಾಗಿದೆ. ಅತ್ತ ಬಿಜೆಪಿ ಬಾದಾಮಿಯಲ್ಲಿ ವಾಲ್ಮೀಕಿ ಜನಾಂಗದ ನೇತಾರನ ಹೆಗಲ ಮೇಲೆ ಬಂದೂಕು ಇಟ್ಟು ಸಿದ್ದರಾಮಯ್ಯ ಅವರನ್ನು ಸೋಲಿಸುವ ಗುರಿ ಇಟ್ಟಿದೆ. ಫಲಿತಾಂಶ ಏನಾಗುತ್ತೋ ನೋಡಬೇಕು.

ಹನುಮಂತ ಮಾವಿನಮರದಗೆ ಎಚ್ ಡಿಕೆ ಸಾಥ್

ಹನುಮಂತ ಮಾವಿನಮರದಗೆ ಎಚ್ ಡಿಕೆ ಸಾಥ್

ಇಲ್ಲಿನ ಜೆಡಿಎಸ್ ಅಭ್ಯರ್ಥಿ ಹನುಮಂತ ಮಾವಿನಮರದ ಅವರಿಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸಾಥ್ ನೀಡುತ್ತಿರುವುದರಿಂದ ಹನುಮಂತ ಅವರು ಶ್ರೀರಾಮುಲು ಹಾಗೂ ಸಿದ್ದರಾಮಯ್ಯ ಅವರಿಗೆ ಪ್ರಬಲ ಪೈಪೋಟಿ ಕೊಡುವುದು ಗ್ಯಾರಂಟಿ. ಈಗಾಗಲೇ ಹನುಮಂತ ಅವರು ಕ್ಷೇತ್ರದ ಪ್ರತಿ ಹಳ್ಳಿಗೂ ಭೇಟಿ ನೀಡಿ, 70 ಸಾವಿರಕ್ಕೂ ಅಧಿಕ ಮನೆಗಳ ಮತದಾರರನ್ನು ಭೇಟಿ ಮಾಡಿದ್ದು, ಕ್ಷೇತ್ರದಲ್ಲಿ ನಡೆದಿರುವ ಕುಮಾರ ಪರ್ವ, ನೇಕಾರರ ಸಮಾವೇಶ, ಮನೆ ಮನೆಗೆ ಕುಮಾರಣ್ಣನಂತಹ ಯಶಸ್ವಿ ಕಾರ್ಯಕ್ರಮಗಳು ಇವರ ಕೈ ಹಿಡಿದರು ಆಶ್ಚರ್ಯವೇನಿಲ್ಲ.

English summary
The Badami Assembly constituency attracted national attention for the first time. Because Chief minister Siddaramaiah in Bellary MP Sriramulu are the contestants. this constituency is now very attention for who will win?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X