TikTok: ಸುಪ್ರಸಿದ್ಧ ದೇವಸ್ಥಾನದಲ್ಲಿ ಟಿಕ್ ಟಾಕ್ ಮಾಡುವುದಕ್ಕೆ ನಿರ್ಬಂಧ
ಅಮೃತಸರ್, ಫೆಬ್ರವರಿ.08: ಈಗಿನ ಯುವಕ ಯುವತಿಯರಿಗೆ ಅಷ್ಟೇ ಯಾಕೆ ಅಜ್ಜಿ-ತಾತರಿಗೂ ಟಿಕ್ ಟಾಕ್ ಎಂದರೆ ಏನೋ ಒಂದು ಕ್ರೇಜ್. ಕುಳಿತಲ್ಲಿ, ನಿಂತಲ್ಲಿ, ಓಡಾಡಿಕೊಂಡು ಟಿಕ್ ಟಾಕ್ ಮಾಡಿಕೊಂಡು ಹಾಯಾಗಿ ಎಂಜಾಯ್ ಮಾಡುತ್ತಾರೆ.
ಕನಿಷ್ಠ ಪಕ್ಷ ದೇವಸ್ಥಾನಕ್ಕೆ ತೆರಳಿದಾಗಲಾದರೂ ಮೊಬೈಲ್ ನಿಂದ ಸ್ವಲ್ಪ ಅಂತರ ಕಾಯ್ದುಕೊಳ್ಳಬೇಕು. ಆದರೆ, ಅದೂ ಕೂಡಾ ಆಗುತ್ತಿಲ್ಲ. ಹೀಗಾಗಿ ಎಚ್ಚೆತ್ತುಕೊಂಡ ದೇವಸ್ಥಾನದ ಆಡಳಿತ ಮಂಡಳಿಯೇ ದೇವಸ್ಥಾನದ ಆವರಣದಲ್ಲಿ ಟಿಕ್ ಟಾಕ್ ಮಾಡುವುದಕ್ಕೆ ನಿರ್ಬಂಧ ವಿಧಿಸಿದೆ.
ಶ್ರೀ ಹರ್ಮಿಂದರ್ ಸಾಹೇಬ್ ರ ಗೋಲ್ಡನ್ ಟೆಂಪಲ್ ನಲ್ಲಿ ಇನ್ನು ಮುಂದೆ ಯಾರೂ ಕೂಡಾ ಟಿಕ್ ಟಾಕ್ ವಿಡಿಯೋ ಮಾಡುವಂತಿಲ್ಲ. ಇಂಥದೊಂದು ವಿಶೇಷ ಸೂಚನೆಯನ್ನು ಗುರುದ್ವಾರದಲ್ಲಿ ಇರುವ ಗೋಲ್ಡನ್ ಟೆಂಪಲ್ ಆಡಳಿತ ಮಂಡಳಿ ಹೊರಡಿಸಿದೆ.

ಗೋಲ್ಡನ್ ಟೆಂಪಲ್ ನಲ್ಲೂ ಟಿಕ್ ಟಾಕ್:
ಗುರುದ್ವಾರದಲ್ಲಿ ಇರುವ ಹರ್ಮಿಂದರ್ ಸಾಹೇಬ್ ರ ಗೋಲ್ಡನ್ ಟೆಂಪಲ್ ನಲ್ಲಿ ಟಿಕ್ ಟಾಕ್ ವಿಡಿಯೋವನ್ನು ಮಾಡುವ ಹಾಗಿಲ್ಲ ಎಂದು ಶಿರೋಮಣಇ ಗುರುದ್ವಾರ ಪರ್ಬಂಧಕ ಕಮಿಟಿ ಖಡಕ್ ಸೂಚನೆಯನ್ನು ನೀಡಿದೆ. ಇತ್ತೀಚಿಗಷ್ಟೇ ಕೆಲವು ಭಕ್ತರು ಗೋಲ್ಡನ್ ಟೆಂಪಲ್ ನಲ್ಲಿ ಟಿಕ್ ಟಾಕ್ ಮಾಡಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತವು. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡು ಆಡಳಿತ ಮಂಡಳಿಯು ಈ ಕ್ರಮವನ್ನು ತೆಗೆದುಕೊಂಡಿದೆ. ಗೋಲ್ಡನ್ ಟೆಂಪಲ್ ನ ಕಂಬಗಳ ಮೇಲೆ 'Tik Tok Is Prohibited Here' ಎಂಬ ಸೂಚನಾ ಫಲಕವನ್ನು ಅಂಟಿಸಲಾಗಿದೆ.












Click it and Unblock the Notifications