'ಕಡಿಮೆಯೆಂದರೂ 100 ಸರ್ಜಿಕಲ್ ಸ್ಟ್ರೈಕ್ ಮಾಡಿದ್ದೆವು, ಯಾವಾಗ ಗೊತ್ತಾ...'
ಪಟಿಯಾಲ, ಮೇ 09: ನಾವು ಕಡಿಮೆ ಎಂದರೂ ನೂರು ಸರ್ಜಿಕಲ್ ಸ್ತ್ರೈಕ್ ಮಾಡಿದ್ದೆವು. ಆದರೆ ಅದಕ್ಕೆ ಸರ್ಜಿಕಲ್ ಸ್ಟ್ರೈಕ್ ಎಂದು ಹೆಸರಿಟ್ಟಿರಲಿಲ್ಲ. ಅದನ್ನು ಹೇಳಿಕೊಂಡಿರಲಿಲ್ಲ ಎಂದು ಪಂಜಾಬ್ ಮುಖ್ಯಮಂತ್ರಿ ಕ್ಯಾ.ಅಮರೀಂದರ್ ಸಿಂಗ್ ಹೇಳಿದರು.
ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತಿದ್ದ ಅವರು, "ಪ್ರಧಾನಿ ನರೇಂದ್ರ ಮೋದಿ ಅವರು ಇತಿಹಾಸದ ಪಾಠಗಳನ್ನು ತಿಳಿದುಕೊಂಡರೆ ಒಳ್ಳೆಯದು" ಎಂದರು.
"ಬಿಜೆಪಿಗೆ ಇತಿಹಾಸ ಜ್ಞಾನವಿಲ್ಲ. ಯಾರಿಗೆ ಭಾರತೀಯ ಸೇನೆಯ ಇತಿಹಾಸ ಗೊತ್ತಿದೆಯೋ ಅವರಿಗೆಲ್ಲ ಸರ್ಜಿಕಲ್ ಸ್ಟ್ರೈಕ್ ನೂರಾರು ಭಾರಿ ನಡೆದಿದೆ ಎಂಬುದು ಗೊತ್ತು. 1964 ರಿಂದ 1967 ರವರೆಗೆ ಸುಮಾರು 100 ಕ್ಕೂ ಹೆಚ್ಚು ಬಾರಿ ಮಿಲಿಟರಿ ಕಾರ್ಯಾಚರಣೆ ನಡೆದಿದೆ. ಅಂಥ ಕಾರ್ಯಾಚರಣೆಗಳಿಗೇ ಇವರು(ಬಿಜೆಪಿ) 'ಸರ್ಜಿಕಲ್ ಸ್ಟ್ರೈಕ್' ಎಂದು ಹೆಸರಿಟ್ಟಿದ್ದಾರೆ. ನಾವು ಅದನ್ನು ಕ್ರಾಸ್ ಬಾರ್ಡರ್ ಸ್ಟ್ರೈಕ್ ಎಂದು ಕರೆಯುತ್ತಿದ್ದೆವು. ನಾವು ಇಂಥ ದಾಳಿ ಮಾಡಿದ್ದೇವೆ ಎಂದು ಎಂದಿಗೂ ಹೇಳಿಕೊಳ್ಳುತ್ತಿರಲಿಲ್ಲ. ಸೇನೆಯ ಗೌಪ್ಯತೆಯನ್ನು ಕಾಪಾಡುವುದು ನಮ್ಮ ಕರ್ತವ್ಯ ಎಂದು ನಾವು ನಂಬಿದ್ದೆವು" ಎಂದು ಅಮರೀಂದರ್ ಸಿಂಗ್ ಹೇಳಿದರು.

ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಅವರು 1960 ರಲ್ಲಿ ಸಿಖ್ ರೆಜಿಮೆಂಟಿನಲ್ಲಿ ಕಾರ್ಯ ನಿರ್ವಹಿಸಿದ್ದರು.
ಫೆಬ್ರವರಿ 14 ರ ಪುಲ್ವಾಮಾ ದಾಳಿಯ ನಂತರ ಕೇಂದ್ರ ಸರ್ಕಾರದ ಪ್ರತಿ ನಡೆಯುವ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡೇ ಮಾಡಿದ್ದು ಎಂದು ಅಮರೀಂದರ್ ಹೇಳಿದರು.












Click it and Unblock the Notifications