ಹೊಸ ಡ್ರೆಂಟ್: ಪೇಂಟ್ ರೋಲರ್‌ನಿಂದ ಮದುಮಗಳಿಗೆ ಅರಿಶಿನ ಶಾಸ್ತ್ರ

ಲುಧಿಯಾನ, ಸೆಪ್ಟೆಂಬರ್ 30: ಈ ಕೊರೊನಾ ಭಯದ ನಡುವೆಯೇ ಹೊಸ ಟ್ರೆಂಡ್ ಹುಟ್ಟಿಕೊಂಡಿದೆ.

ಮದುವೆ ಮನೆಯಲ್ಲಿ ಕಡಿಮೆ ಜನ ಸೇರಬೇಕು, ಆದರೆ ಆಗುವ ಶಾಸ್ತ್ರಗಳೆಲ್ಲವೂ ಕೂಡ ಆಗಲೇಬೇಕಲ್ಲವೆ, ಅದರಲ್ಲಿ ಹೆಚ್ಚು ಕಡಿಮೆ ಮಾಡಲು ಬರುವುದಿಲ್ಲ.

ಎಲ್ಲರೂ ಮಾಸ್ಕ್ ಧರಿಸಬೇಕು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಹೀಗೆ ಸಾಕಷ್ಟು ಕೊರೊನಾ ನಿಯಮಗಳನ್ನು ಕೂಡ ಅನುಸರಿಸಬೇಕಾಗುತ್ತೆ.

Ludhiana: Woman Applying Turmeric On Bride With A Paint Roller; Video Goes Viral

ಹೀಗಾಗಿ ಲುಧಿಯಾನಾದಲ್ಲಿ ನಡೆದ ಮದುವೆಯೊಂದರ ಅರಿಶಿನ ಶಾಸ್ತ್ರದ ಸಂದರ್ಭದಲ್ಲಿ ವಧುವಿಗೆ ಅರಿಶಿನ ಹಚ್ಚುವವರು ವಧುವನ್ನು ಮುಟ್ಟಬಾರದು, ದೂರದಿಂದಲೇ ಅರಿಶಿನ ಹಚ್ಚುವುದು ಹೇಗೆ ಎಂಬ ಚಿಂತೆಗೆ ಒಳಗಾಗಿ ಬಳಿಕ ಒಂದು ಉಪಾಯವನ್ನು ಕಂಡುಕೊಂಡಿದ್ದಾರೆ. ಪೇಯಿಂಟ್ ರೋಲರ್‌ನಲ್ಲಿ ಅರಿಶಿನವನ್ನು ಹಚ್ಚಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಅಚ್ಚರಿ ಮೂಡಿಸಿದೆ.

ಹೌದು ನಾವು ಕೂಡ ನಮ್ಮ ಮನೆಯ ಮದುವೆಗಳಲ್ಲಿ ಹೀಗೆಯೇ ಮಾಡಬಹುದಲ್ಲವೇ ನಮಗೂ ತೋಚಿರಲಿಲ್ಲ ನೋಡಿ ಎಂಬ ಮಾತುಗಳು ಕೂಡ ಕೇಳಿಬಂದಿವೆ.

ಸಾಮಾನ್ಯವಾಗಿ ಮದುವೆಯ ಹಿಂದಿನ ದಿನ ಅರಿಶಿನ ಶಾಸ್ತ್ರವನ್ನು ಮಾಡುತ್ತಾರೆ, ಮನೆಗೆ ಬಂದಿರುವ ಹಿರಿಯರೆಲ್ಲವೂ ವಧುವಿಗೆ ಅರಿಶಿನ ಹಚ್ಚಿ ಹಾರೈಸುವ ಪದ್ಧತಿ ಭಾರತದಲ್ಲಿ ಎಲ್ಲೆಡೆ ಇದೆ.

ಲುಧಿಯಾನದ ಅರಿಶಿನ ಶಾಸ್ತ್ರದ 13 ಸೆಕೆಂಡುಗಳ ವಿಡಿಯೋ ಟ್ವಿಟ್ಟರ್‌ನಲ್ಲಿ ಹರಿದಾಡುತ್ತಿದೆ. ಹರ್ಜಿಂದರ್ ಸಿಂಗ್ ಕುಕ್ರೇಜಾ ಎಂಬುವವರು ಈ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+