ಸಿದು ಮೂಸೇವಾಲ ಹಾಡಿನ ವಿಡಿಯೋ ವೈರಲ್‌; ಅಭಿಮಾನಿಗಳು ಭಾವುಕ

ಚಂಡೀಗಢ್, ಜುಲೈ 12; ಪಂಜಾಬ್‌ನ ಖ್ಯಾತ ಗಾಯಕ, ಕಾಂಗ್ರೆಸ್‌ ನಾಯಕ ಸಿದು ಮೂಸೇವಾಲ ಹಂತಕರ ಗುಂಡಿಗೆ ಬಲಿಯಾಗಿದ್ದರು. ಆದರೆ ಅವರು ಹಾಡಿರುವ ಹಾಡುಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಸಿದು ಮೂಸೇವಾಲ ಗಾಯಕಿ ಅಫ್ಸಾನಾ ಖಾನ್ ವಿವಾಹದ ಸಂದರ್ಭದಲ್ಲಿ ಹಾಡನ್ನು ಹಾಡಿದ್ದರು. ಈ ವಿಡಿಯೋ ಈಗ ವೈರಲ್‌ ಆಗಿದೆ. ವಧು ಅಫ್ಸನಾ ಜೊತೆ ನಿಂತು ಸಿದು ಮೂಸೇವಾಲ ಫೋಸ್ ನೀಡಿದ್ದರು.

ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಅಭಿಮಾನಿಗಳು ಸಿದು ಯಾವಾಗಲೂ ಸ್ಮರಣೀಯ, ಅವರು ಕಿಂಗ್‌ ಎಂದು ಕಮೆಂಟ್ ಮಾಡುತ್ತಿದ್ದಾರೆ. ಸಿದು ಮೂಸೇವಾಲ ಈ ವರ್ಷದ ಏಪ್ರಿಲ್‌ನಲ್ಲಿ ವಿವಾಹವಾಗಬೇಕಿತ್ತು.

Late Sidhu Moose Wala Song In Afsana Khan Marriage Video Goes Viral

ಆದರೆ ಮಾರ್ಚ್‌ನಲ್ಲಿ ನಡೆದ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಸೋಲನುಭವಿಸಿದ ಕಾರಣ ಮದುವೆಯನ್ನು ನವೆಂಬರ್‌ಗೆ ಮುಂದೂಡಿದ್ದರು. ಆದರೆ ಮೇ ತಿಂಗಳ 29ರಂದು ಮಾನ್ಸದಲ್ಲಿ ಹಂತಕರ ಗುಂಡೇಟಿಗೆ ಸಿದು ಬಲಿಯಾಗಿದ್ದರು.

ಪಂಜಾಬ್ ವಿಧಾನಸಭಾ ಚುನಾವಣೆಯ ನಂತರ ಸಿದು ಮದುವೆಯಾಗಲಿದ್ದಾರೆ ಮತ್ತು ಮದುವೆಯ ಸಿದ್ಧತೆಗಳು ಪ್ರಾರಂಭವಾಗಿವೆ ಎಂದು ಹೇಳಿದ್ದರು. ಚುನಾವಣೆಯಲ್ಲಿ ಸೋತ ಬಳಿಕ ಪಂಜಾಬ್ ಸರ್ಕಾರವು ಸಿದುಗೆ ಕೊಟ್ಟ ಭದ್ರತೆಯನ್ನು ಹಿಂಪಡೆದಿತ್ತು.

ಇದಾದ ಒಂದು ದಿನದ ನಂತರ ಮೇ 29ರಂದು ಅವರನ್ನು ಗುಂಡಿಕ್ಕಿ ಕೊಲ್ಲಲಾಯಿತು. ಇದೀಗ ಅವರು ಗಾಯಕಿ ಅಫ್ಸಾನಾ ಖಾನ್‌ ಜೊತೆ ಹಾಡಿರುವ ವಿಡಿಯೋಗೆ ಅಭಿಮಾನಿಗಳು ಭಾವುಕರಾಗಿ ಕಮೆಂಟ್ ಮಾಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+