ಎರಡನೇ ರಾಜ್ಯದಲ್ಲಿ ಎಎಪಿ ಅಧಿಕಾರ ಸ್ಥಾಪನೆ: ಸಿವೋಟರ್ ಸಮೀಕ್ಷೆ

ಪಂಜಾಬ್ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳಬಹುದು ಹಾಗೂ ಆಮ್ ಆದ್ಮಿ ಪಕ್ಷ ಬಹುಮತದ ತುದಿಗೆ ಬಂದು ನಿಲ್ಲಬಹುದು ಎಂದು ಎಬಿಪಿ-ಸಿವೋಟರ್ ಸಮೀಕ್ಷೆ ಅಂದಾಜಿಸಿದೆ.

ರೈತ ಪ್ರತಿಭಟನೆ ಹಾಗೂ ಇತರೆ ರಾಜಕೀಯ ಸಮೀಕರಣದ ಬಳಿಕ ಪಂಜಾಬ್‌ನ ರಾಜಕೀಯ ಚಿತ್ರಣ ಬದಲಾಗುತ್ತಿದೆ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚೊಚ್ಚಲ ಪ್ರಯತ್ನದಲ್ಲೇ ಪ್ರಮುಖ ಪ್ರತಿಪಕ್ಷವಾಗಿ ಹೊರಹೊಮ್ಮಿದ್ದ ಎಎಪಿ ಇದೀಗ ಅಧಿಕಾರ ಚುಕ್ಕಾಣಿಯ ಸನಿಹದಲ್ಲಿ ಬಂದು ನಿಲ್ಲಲಿದೆ ಎಂದು ಸಮೀಕ್ಷೆ ಹೇಳಿದೆ.

117 ಕ್ಷೇತ್ರಗಳ ವಿಧಾನಸಭೆಯಲ್ಲಿ ಪ್ರತಿಪಕ್ಷ ಎಎಪಿ 25 ರಿಂದ 55ಕ್ಕೆ ಏರಲಿದೆ. ಕಾಂಗ್ರೆಸ್ 77 ರಿಂದ 42ಕ್ಕೆ ಕುಸಿಯಲಿದೆ. ಹಾಗೂ ಶಿರೋಮಣಿ ಅಕಾಲಿದಳ 15 ರಿಂದ 20ಕ್ಕೆ ಏರಲಿದೆ ಎಂದು ಸಮೀಕ್ಷೆ ಹೇಳಿದೆ.

ABP News CVoter Survey: AAP Likely To Get Near Majority Mark In Punjab

ಇನ್ನೊಂದೆಡೆ ಬಿಜೆಪಿಗೆ ರೈತ ಪ್ರತಿಭಟನೆಯ ಕಾವು ಜೋರಾಗಿಯೇ ತಟ್ಟುವ ಲಕ್ಷಣಗಳಿದ್ದು, ಒಂದೂ ಸೀಟನ್ನು ಗೆಲ್ಲುವ ಸಾಧ್ಯತೆ ಕಡಿಮೆ ಎಂದು ಹೇಳಲಾಗಿದೆ. ಕಳೆದ ಬಾರಿ 3 ಸೀಟುಗಳನ್ನು ಗೆದ್ದಿತ್ತು.

ಮತ ಪ್ರಮಾಣವನ್ನು ಹೋಲಿಸಿದಾಗ ಕಾಂಗ್ರೆಸ್ ಶೇ.9.7ರಷ್ಟು ಮತವನ್ನು ಕಳೆದುಕೊಂಡು 28.8 ಮತ ಗಳಿಕೆ ಮಾಡಬಹುದು. ಶಿರೋಮಣಿ ಅಕಾಲಿದಳ ಶೇ.21.8 ಹಾಗೂ ಎಎಪಿ ಶೇ.35.1 ಮತಗಳನ್ನು ಪಡೆಯಬಹುದು ಎಂದು ಅಂದಾಜಿಸಲಾಗಿದೆ.

ಇನ್ನೊಂದೆಡೆ ಬಿಜೆಪಿ ಸೀಟುಗಳಲ್ಲಿ ಶೂನ್ಯ ಗಳಿಕೆಯಾದರೂ ಶಿರೋಮಣಿ ಅಕಾಲಿದಳ ಮೈತ್ರಿಕೂಟದಿಂದ ಹೊರಬಂದಿರುವುದಕ್ಕೆ ಶೇ.5.4 ರಿಂದ ಶೇ.7.3ಕ್ಕೆ ಮತ ಏರಿಕೆಯಾಗಬಹುದು ಎಂದು ಅಂದಾಜಿಸಲಾಗಿದೆ.

2022ರ ಪಂಜಾಬ್ ಚುನಾವಣೆಯಲ್ಲಿ ಬಿಜೆಪಿ ಎಲ್ಲಾ 117 ವಿಧಾನಸಭಾ ಸ್ಥಾನಗಳಿಗೆ ಸ್ಪರ್ಧಿಸಲಿದ್ದು, ರಾಜ್ಯದಲ್ಲಿ ಸರ್ಕಾರ ರಚಿಸಲಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ತಿಳಿಸಿದ್ದರು.

ಮುಂದಿನ ವರ್ಷದ ಆರಂಭದಲ್ಲಿ ರಾಜ್ಯದಲ್ಲಿ ಚುನಾವಣೆ ನಡೆಯಲಿದೆ. ಬಿಜೆಪಿಯ ಪಂಜಾಬ್ ಘಟಕದ ಸಭೆಯಲ್ಲಿ ಭಾಗವಹಿಸಿದ ಸಂತೋಷ್ ಪಕ್ಷದ ರಾಜ್ಯ ನಾಯಕರು ಮತ್ತು ಇತರರೊಂದಿಗೆ ಪಂಜಾಬ್ ರಾಜಕೀಯದ ಬಗ್ಗೆ ವಿವರವಾದ ಚರ್ಚೆ ನಡೆಸಿದ್ದರು.

ಪಕ್ಷದ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರನ್ನು ಅಧಿಕಾರದಿಂದ ತೆಗೆದುಹಾಕಲು ಇಡೀ ಪ್ರತಿಪಕ್ಷಗಳು ಎಲ್ಲ ತಂತ್ರಗಳನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತಿವೆ. ಇನ್ನು ಬಿಜೆಪಿ ವಿಶ್ವದ ಅತಿದೊಡ್ಡ ಪಕ್ಷವಾಗಿದೆ ಎಂದರು.

ಕೃಷಿ ಕಾನೂನುಗಳು ಸಮೃದ್ಧಿಯನ್ನು ತರುತ್ತವೆ ಎಂದು ರೈತರು ಅರಿತುಕೊಂಡಿದ್ದರಿಂದ ಇದರ ವಿರುದ್ಧದ ವಿರೋಧದ ಸುಳ್ಳು ಪ್ರಚಾರ ಶೀಘ್ರದಲ್ಲೇ ಕುಸಿಯುತ್ತದೆ ಎಂದು ಸಂತೋಷ್ ಹೇಳಿದರು. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಜಾರಿಗೆ ಬಂದ ಮೂರು ಕೇಂದ್ರ ಕಾನೂನುಗಳ ವಿರುದ್ಧ ಮುಖ್ಯವಾಗಿ ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶದ ರೈತರು ದೆಹಲಿಯ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ ಮತ್ತು ಅವುಗಳನ್ನು ಹಿಂಪಡೆಯಬೇಕೆಂದು ಒತ್ತಾಯಿಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+