ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲುಧಿಯಾನದಲ್ಲಿ 167 ಮಂದಿ ಕೊರೊನಾ ಶಂಕಿತರು ನಾಪತ್ತೆ

|
Google Oneindia Kannada News

ಬೆಂಗಳೂರು, ಮಾರ್ಚ್ 18: ಪಂಜಾಬಿನ ಲುಧಿಯಾನದಲ್ಲಿ 167 ಮಂದಿ ಕೊರೊನಾ ಶಂಕಿತರು ನಾಪತ್ತೆಯಾಗಿದ್ದಾರೆ.

ಅವರ ಪತ್ತೆಗೆ ತೀವ್ರ ಶೋಧ ನಡೆಯುತ್ತಿದೆ. 167 ಮಂದಿಯಲ್ಲಿ ಈಗಾಗಲೇ 29 ಮಂದಿಯ ಗುರುತು ಪತ್ತೆಯಾಗಿದ್ದು, ಉಳಿದವರಿಗಾಗಿ ತೀವ್ರ ಹುಡುಕಾಟ ಶುರುವಾಗಿದೆ ಎಂದು ಡಾ.ರಾಜೇಶ್ ಬಗ್ಗಾ ಅವರು ಹೇಳಿದ್ದಾರೆ.

ಭಾರತೀಯ ಸೇನೆಯಲ್ಲಿ ಮೊದಲ ಕೊರೊನಾ ಪ್ರಕರಣ ಪತ್ತೆಭಾರತೀಯ ಸೇನೆಯಲ್ಲಿ ಮೊದಲ ಕೊರೊನಾ ಪ್ರಕರಣ ಪತ್ತೆ

ವಿದೇಶಗಳಿಂದ ಬಂದ ಜನರ ಹುಡುಕಾಟಕ್ಕೆ ಎರಡು ತಂಡಗಳನ್ನು ರಚಿಸಲಾಗಿದೆ. ಒಂದು ಪೊಲೀಸ್ ತಂಡವಾಗಿದ್ದರೆ, ಮತ್ತೊಂದು ಆರೋಗ್ಯ ಇಲಾಖೆಯಾಗಿದೆ. ಇದರಲ್ಲಿ 119 ಜನರ ಹುಡುಕಾಟದ ಜವಾಬ್ದಾರಿಯನ್ನು ಪೊಲೀಸರು

167 Coronavirus Suspected Patients Go Missing

ತೆಗೆದುಕೊಂಡಿದ್ದಾರೆ. ಈಗಾಗಲೇ ಅವರಲ್ಲಿ 12 ಮಂದಿಯನ್ನು ಗುರುತು ಹಿಡಿದ್ದಾರೆ. ಪಾಸ್ ಪೋರ್ಟ್ ಗಳಲ್ಲಿ ಹಾಗೂ ಫೋನ್ ನಂಬರ್ ಗಳನ್ನು ತಪ್ಪಾಗಿ ನೀಡಿದ ಕಾರಣ ಜನರನ್ನು ಹುಡುಕುವಲ್ಲಿ ತಡವಾಗುತ್ತಿದೆ.

ಸಾಕಷ್ಟು ಮಂದಿಯ ವಿಳಾಸ ಹಾಗೂ ಫೋನ್ ನಂಬರ್ ಬದಲಾದಂತಿದೆ. ನಮ್ಮ ತಂಡ ಇದೀಗ ಎಲ್ಲರಿಗಾಗಿ ಹುಡುಕಾಟ ತೀವ್ರವಾಗಿ ನಡೆಸುತ್ತಿದೆ ಎಂದು ಹೇಳಿದ್ದಾರೆ. ಇನ್ನು ಆರೋಗ್ಯ ಇಲಾಖೆ 77 ಮಂದಿಯ ಜವಾಬ್ದಾರಿ ತೆಗೆದುಕೊಂಡಿದ್ದು 17 ಮಂದಿಯನ್ನು ಗುರುತು ಹಿಡಿದ್ದಾರೆ. ಉಳಿದವರಿಗಾಗಿ ಹುಡುಕಾಟ ಮುಂದುವರೆದಿದೆ.

English summary
At least 167 people suspected of having coronavirus have been missing in Ludhiana while only 29 have been traced, said Dr Rajesh Bagga, the city’s civil surgeon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X