Get Updates
Get notified of breaking news, exclusive insights, and must-see stories!

'ಟಿಕ್ ಟಾಕ್' ಪ್ರೇಮಿ ಪತ್ನಿಯನ್ನು ಹೊಡೆದು ಕೊಂದ ಪತಿ 'ಸಾಹಿಬ್'

ವಿಜಯವಾಡ, ನವೆಂಬರ್ 08: ವಿಡಿಯೋ ಹಂಚಿಕೆ ತಾಣ ಟಿಕ್ ಟಾಕ್ ಹುಚ್ಚಿಗೆ ಬಲಿಯಾಗುವವರ ಸಂಖ್ಯೆ ದೇಶದೆಲ್ಲೆಡೆ ಕಂಡು ಬಂದಿದೆ. ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಕಾಣಿಗಿರಿಯಲ್ಲಿ ಟಿಕ್ ಟಾಕ್ ಪ್ರೇಮಿ ಪತ್ನಿಯನ್ನು ಪತಿಯೊಬ್ಬ ಹತ್ಯೆ ಮಾಡಿರುವ ಘಟನೆ ನಡೆದಿದೆ.

ಮೃತ ಮಹಿಳೆಯನ್ನು ಫಾತಿಮಾ ಎಂದು ಗುರುತಿಸಲಾಗಿದ್ದು, ಆಕೆಯ ಪತಿ ಚಿನ್ನಪ್ಪಚ್ಚು ಸಾಹಿಬ್ ಕೊಲೆ ಆರೋಪಿಯಾಗಿದ್ದಾನೆ. ವೃತ್ತಿಯಿಂದ ದರ್ಜಿಯಾದ ಸಾಹಿಬ್ ಗೆ ತನ್ನ ಪತ್ನಿ ಟಿಕ್ ಟಾಕ್ ಹುಚ್ಚು ಬಿಡಿಸಲು ಆಗದೆ ಆಕೆಯನ್ನು ಹತ್ಯೆ ಮಾಡಿದ್ದಾನೆ.

ಆದರೆ, ಈ ಘಟನೆ ಬಗ್ಗೆ ಪೊಲೀಸರಿಗೆ ತಿಳಿದು ಬಂದಾಗ, 30 ವರ್ಷ ವಯಸ್ಸಿನ ಫಾತಿಮಾಳ ದೇಹ ಸೀಲಿಂಗ್ ಫ್ಯಾನಿಗೆ ಜೋತು ಬಿದ್ದಿತ್ತು. ಮೇಲ್ನೋಟಕ್ಕೆ ಆತ್ಮಹತ್ಯೆ ಪ್ರಕರಣದಂತೆ ಸನ್ನಿವೇಶವನ್ನು ಸೃಷ್ಟಿಸಲಾಗಿತ್ತು. ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರಿಗೆ ಮರಣೋತ್ತರ ಪರೀಕ್ಷೆ ವರದಿ ಬಂದ ಮೇಲೆ ಅನುಮಾನ ಹುಟ್ಟಿಕೊಂಡಿದೆ.

Vijayawada: Man Kills his wife upset over her TikTok videos

ಸಾಹಿಬ್ ಹಾಗೂ ಫಾತಿಮಾ ಕುಟುಂಬಸ್ಥರನ್ನು ಪ್ರತ್ಯೇಕವಾಗಿ ವಿಚಾರಣೆಗೊಳಪಡಿಸಿದ ಪೊಲೀಸರಿಗೆ ತಮ್ಮ ಅನುಮಾನ ನಿಜ ಎಂಬುದು ದೃಢಪಟ್ಟಿದೆ. ಚಿನ್ನಪ್ಪಚ್ಚು ಸಾಹಿಬ್ ಹಾಗೂ ಫಾತಿಮಾ ಇಬ್ಬರ ನಡುವೆ ಯಾವಾಗಲೂ ಜಗಳ ನಡೆಯುತ್ತಿತ್ತು, ಆಕೆಯ ಟಿಕ್ ಟಾಕ್ ವಿಡಿಯೋ ಮಾಡುವ ಹವ್ಯಾಸವನ್ನು ಸಾಹಿಬ್ ತೀವ್ರವಾಗಿ ವಿರೋಧಿಸುತ್ತಿದ್ದ ಎಂದು ತಿಳಿದು ಬಂದಿದೆ.

ಅಮಾಯಕನಂತೆ ನಟಿಸುತ್ತಿದ್ದ ಸಾಹಿಬ್ ನನ್ನು ಆತನ ಬಟ್ಟೆ ಅಂಗಡಿಯಲ್ಲೇ ಬಂಧಿಸಿದ ಪೊಲೀಸರು ವಿಚಾರಣೆ ನಡೆಸಿದಾಗ ಸತ್ಯ ಹೊರ ಹಾಕಿದ್ದಾನೆ. ಪತ್ನಿಯ ಟಿಕ್ ಟಾಕ್ ವಿಡಿಯೋ ಚಟದಿಂದ ನಾನು ಬೇಸತ್ತು, ಸಿಟ್ಟಿನಿಂದ ಆಕೆ ತಲೆಗೆ ಚಪಾತಿ ಲಟ್ಟಣಿಗೆಯಿಂದ ಹೊಡೆದು ಸಾಯಿಸಿದೆ ಎಂದು ತಪ್ಪೊಪ್ಪಿಗೆ ನೀಡಿದ್ದಾನೆ ಎಂದು ಕಾಣಿಗಿರಿ ಪೊಲೀಸರು ಹೇಳಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+