ತಿರುಪತಿ-ಬೆಂಗಳೂರು 'ವಂದೇ ಭಾರತ್' ವಿಶೇಷ ರೈಲು ಸೇವೆ
ತಿರುಮಲ, ಆಗಸ್ಟ್ 28: ಆಂಧ್ರ ಪ್ರದೇಶದ ತಿರುಪತಿಯಿಂದ ಕರ್ನಾಟಕ ರಾಜಧಾನಿ ಬೆಂಗಳೂರುವರೆಗೆ 'ವಂದೇ ಭಾರತ್' ರೈಲು ಪರಿಚಯಿಸಬೇಕು. ಇದರಿಂದ ಲಕ್ಷಾಂತರ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದು ವಲಯ ರೈಲು ಬಳಕೆದಾರರ ಸಲಹಾ ಸಮಿತಿ ವಲಯ ರೈಲು ಬಳಕೆದಾರರ ಸಲಹಾ ಸಮಿತಿ ಮನವಿ ಮಾಡಿದೆ.
ಶನಿವಾರ ಸಿಕಂದರಾಬಾದ್‌ನಲ್ಲಿ ನಡೆದ 74ನೇ ವಲಯ ರೈಲು ಬಳಕೆದಾರರ ಸಲಹಾ ಸಮಿತಿ ಸಭೆಯಲ್ಲಿ, ತಿರುಪತಿ ಮೂಲದ ಸಮಿತಿ ಸದಸ್ಯ ರಾಯುಲು ಅವರು ದಕ್ಷಿಣ ಮಧ್ಯ ರೈಲ್ವೆ (ಎಸ್‌ಸಿಆರ್) ವಲಯಕ್ಕೆ ಸಂಬಂಧಿಸಿದಂತೆ ಬಾಕಿ ಉಳಿದಿರುವ ವಿವಿಧ ಯೋಜನೆ ಜಾರಿಗೊಳಿಸುವ ಕರಿತು ಇಲಾಖೆ ಅಧಿಕಾರಿಗಳಿಗೆ ಜ್ಞಾಪಕ ಪತ್ರವನ್ನು ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಅವರು ತಿರುಪತಿ ಮತ್ತು ಬೆಂಗಳೂರು ನಡುವೆ 'ವಂದೇ ಭಾರತ್' ಎಕ್ಸಪ್ರೆಸ್ ರೈಲು ಪರಿಚಯಿಸುವಂತೆ ಕೋರಿದ ರಾಯುಲು ದಕ್ಷಿಣ ಮಧ್ಯ ರೈಲ್ವೆ ವಿಭಾಗಕ್ಕೆ ಮನವಿ ಮಾಡಿಕೊಂಡರು. ನಿತ್ಯ ಬೆಂಗಳೂರಿನ ಭಾಗವಾಗಿ ತಿರುಪತಿಗೆ ಲಕ್ಷಾಂತರ ಭಕ್ತರು ತಿರುಮಲ ತಿರುಪತಿ ದೇವಸ್ಥಾನಕ್ಕೆಂದು ಆಗಮಿಸುತ್ತಾರೆ. ಕೇವಲ ಭಕ್ತರಲ್ಲದೇ ಇನ್ನಿತರ ವ್ಯಾಪಾರ, ವ್ಯವಹಾರ ಸೇರಿದಂತೆ ಅನೇಕ ಕಾರಣಗಳಿಂದ ಸಂಚರಿಸುತ್ತಾರೆ. ಈ ಲಕ್ಷಾಂತರ ಜನರಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ 'ವಂದೇ ಭಾರತ್' ಎಕ್ಸಪ್ರೆಸ್ ರೈಲನ್ನು ಓಡಿಸಬೇಕಿದೆ ಎಂದು ಅವರು ತಿಳಿಸಿದರು.

ತಿರುಪತಿ-ಬೆಂಗಳೂರು ಮಧ್ಯೆ 'ವಂದೇ ಭಾರತ್' ರೈಲು
ಭಾರತದ ಅನೇಕ ಕಡೆಗಳಲ್ಲಿ 'ವಂದೇ ಭಾರತ್' ಎಕ್ಸಪ್ರೆಸ್ ರೈಲುಗಳು ಸಂಚಾರ ನಡೆಸಿವೆ. ನವದೆಹಲಿ ಮತ್ತು ವಾರಣಾಸಿ ನಡುವೆ 'ವಂದೇ ಭಾರತ್' ರೈಲು ಆರಂಭವಾಗಿದೆ. ಅದೇ ರೀತಿ ಆಂಧ್ರ ಪ್ರದೇಶ ವ್ಯಾಪ್ತಿಯ ವಿಶ್ವಪ್ರಸಿದ್ಧ ಯಾತ್ರಾ ಕೇಂದ್ರವಾದ ತಿರುಮಲ ತಿರುಪತಿ ದೇವಸ್ಥಾನಕ್ಕೆ ಸಂಪರ್ಕಿಸುವ ರೈಲನ್ನು ಸಂಪರ್ಕಿಸುವ ಅಗತ್ಯತೆ ಇದೆ. ಭಾರತದ ದಕ್ಷಿಣದಲ್ಲಿ ಈ ವಿಶೇಷ ಎಕ್ಸಪ್ರೆಸ್ ರೈಲು ಸಂಚಾರ ಆರಂಭ ಬಗ್ಗೆ ಗಂಭೀರವಾಗಿ ಪರಿಗಣಿಸುವಂತೆ ಅವರು ಕೋರಿದರು.

3ನೇ ರೈಲು ಮಾರ್ಗಕ್ಕೆ ಹಣ ನೀಡಿ
ಇನ್ನೂ ವಿಜಯವಾಡ ಮತ್ತು ಗುಡೂರು ನಡುವಿನ ಮೂರನೇ ರೈಲು ಮಾರ್ಗದ ಅಭಿವೃದ್ಧಿಗೆ ಸರ್ಕಾರದಿಂದ 1,000 ಕೋಟಿ ರೂಪಾಯಿ ಬಿಡುಗಡೆ ಮಾಡುವಂತೆ ಕೋರಿದರು. 2011-12ನೇ ಸಾಲಿನಲ್ಲಿ ಮಂಜೂರಾದ 309 ಕಿಲೋ ಮೀಟರ್ ಉದ್ದದ ಶ್ರೀಕಾಳಹಸ್ತಿಯಿಂದ ನಡಿಕುಡಿ ಮಾರ್ಗದ ರೈಲು ಸಂಚಾರಕ್ಕೆ ಆದ್ಯತೆ ನೀಡುವಂತೆ ಅಧಿಕಾರಿಗಳಲ್ಲಿ ರಾಯುಲು ಮನವಿ ಮಾಡಿದರು.

ರೈಲು ನಿಲ್ದಾಣ ಸುತ್ತಮುತ್ತ ಅಭಿವೃದ್ಧಿಗೆ ಒತ್ತು
ತಿರುಚನೂರು ರೈಲು ನಿಲ್ದಾಣದಲ್ಲಿ ಜನದಟ್ಟಣೆ ಹೆಚ್ಚಾಗುತ್ತಿದೆ. ಈ ನಿಲ್ದಾಣದ ಸುತ್ತಮುತ್ತಲಿನ ಪ್ರದೇಶ ಅಭಿವೃದ್ಧಿ ಮೂಲ ಜನದಟ್ಟಣೆ ಕಡಿಮೆ ಮಾಡಲು ಅನುದಾನ 6.5ಕೋಟಿ ರೂ. ನಿಡಬೇಕು. ಜತಗೆ ತಿರುಪತಿಯ ದಕ್ಷಿಣ ಪ್ರವೇಶ ದ್ವಾರವನ್ನು ಅಭಿವೃದ್ಧಿಪಡಿಸಲು ಮೂರು ಕೋಟಿ ರೂ.ಹಣ ಬಿಡುಗಡೆ ಮಾಡುವಂತೆ ಸಮಿತಿಯ ಸದಸ್ಯರೆಲ್ಲರೂ ಕೋರಿದರು.

ಹುಬ್ಬಳ್ಳಿ-ಬೆಂಗಳೂರು ಮಧ್ಯೆ ವಂದೇ ಭಾರತ್ ರೈಲು
ದೇಶದಲ್ಲೇ ಅತ್ಯಂತ ವೇಗವಾಗಿ ಓಡುವ ಈ ವಂದೇ ಭಾರತ್ ಎಕ್ಸಪ್ರೆಸ್ ರೈಲು ಹೆಚ್ಚಾಗಿ ಉತ್ತರ ಭಾರತದಲ್ಲಿ ಮಾತ್ರವಲ್ಲದೇ ನೈಋತ್ಯ ರೈಲ್ವೆಯು ಕರ್ನಾಟಕದಲ್ಲಿ ಈ ವಿಶೇಷ ಎಕ್ಸಪ್ರೆಸ್ ರೈಲನ್ನು ಓಡಿಸಲು ಸಿದ್ಧತೆ ಆರಂಭಿಸಿದೆ. ಬೆಂಗಳೂರು ಹಾಗೂ ಹುಬ್ಬಳ್ಳಿ ನಡುವೆ ಈ ವಂದೇ ಭಾರತ್ ಎಕ್ಸಪ್ರೆಸ್ ರೈಲು ಶೀಘ್ರವೇ ಓಡಿಸುವ ಕುರಿತು ಹಿಂದೆ ನೈಋತ್ಯ ರೈಲ್ವೆ ಇಲಾಖೆ ಪ್ರಧಾನ ವ್ಯವಸ್ಥಾಪಕ ಸಂಜೀವ್ ಕಿಶೋರ್ ತಿಳಿಸಿದ್ದರು.

ವಿಶೇಷ ರೈಲಿನಿಂದ ಸಮಯ ಉಳಿತಾಯ
ಈ ವೇಗದ ರೈಲಿನ ಆರಂಭದಿಂದ ಏಳು ಗಂಟೆಯಲ್ಲಿ ಪ್ರಯಾಣಿಸಬಹುದಾದ ದೂರವನ್ನು ಕೇವಲ ಐದೂವರೆ ಗಂಟೆಗಳಲ್ಲಿ ಕ್ರಮಿಸಲು ಸಾಧ್ಯವಾಗುತ್ತದೆ. ಇದರಿಂದ ಸಾರ್ವಜನಿಕರಿಗೆ ಸಮಯದ ಉಳಿತಾಯವಾಗಲಿದೆ. ಇದರಿಂದ ಬೆಂಗಳೂರು ಸೇರಿಂತೆ ತುಮಕೂರು, ಹಿರಿಯೂರು, ಕಡೂರು, ಅರಸಿಕೆರೆ, ದಾವಣಗೆರೆ, ಹಾವೇರಿ, ಹುಬ್ಬಳ್ಳಿ ಭಾಗ ಹಾಗೂ ಸುತ್ತಮುತ್ತಲಿನ ಜನರಿಗೆ ಅನುಕೂಲವಾಗುತ್ತದೆ. ಅದೇ ರೀತಿ ಬೆಂಗಳೂರಿಂದ ತಿರುಪತಿವರೆಗೆ ವಂದೇ ಭಾರತ್ ಎಕ್ಸಪ್ರೆಸ್ ರೈಲು ಆರಂಭವಾದರೆ ಈ ಮಾರ್ಗದ ಮಧ್ಯದಲ್ಲಿ ಬರುವ ಎಲ್ಲ ಜಿಲ್ಲಾ ಕೇಂದ್ರಗಳು, ತಾಲೂಕುಗಳ ಜನರಿಗೆ ಹೆಚ್ಚು ಸಹಕಾರಿಯಾಗಲಿದೆ ಎಂದು ವಲಯ ರೈಲು ಬಳಕೆದಾರರ ಸಲಹಾ ಸಮಿತಿ (ಝಡ್‌ಆರ್‌ಯುಸಿಸಿ) ಅಭಿಪ್ರಾಯ ವ್ಯಕ್ತಪಡಿಸಿದೆ.
-
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
ವೈಭವ್ ಸೂರ್ಯವಂಶಿ ಆಕ್ರಮಣಕಾರಿ ಆಟಕ್ಕೆ ಇಂಗ್ಲೆಂಡ್ ಮೈಕೆಲ್ ವಾಘನ್ ಫಿದಾ; ಬಿಸಿಸಿಐಗೆ ವಿಶೇಷ ಮನವಿ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ












Click it and Unblock the Notifications