ಜಗನ್ ರೆಡ್ಡಿ ಕ್ರೈಸ್ತ ಮತದಿಂದ ಹಿಂದುವಾಗಿ ಮತಾಂತರವಾಗಿದ್ದು ನಿಜಾನಾ?
Recommended Video
ಆಂಧ್ರಪ್ರದೇಶದ ರಾಜಕೀಯದಲ್ಲಿ ಬಿರುಗಾಳಿ ಬೀಸುವಂತೆ ಮಾಡಿದ ವೈಎಸ್ ಆರ್ ಕಾಂಗ್ರೆಸ್ ನ ವೈ ಎಸ್ ಜಗನ್ಮೋಹನ್ ರೆಡ್ಡಿ ಕ್ರೈಸ್ತ ಮತದಿಂದ ಹಿಂದುವಾಗಿ ಮತಾಂತರವಾಗಿದ್ದಾರೆ ಎಂಬ ಸುದ್ದಿ ಫಲಿತಾಂಶದ ದಿನದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು.
ಅವರು ಕೇಸರಿ ಬಟ್ಟೆ ತೊಟ್ಟು, ನದಿಯಲ್ಲಿ ಮುಳುಗೇಳುತ್ತಿರುವ ಚಿತ್ರವೂ ವೈರಲ್ ಆಗಿತ್ತು. ಆದರೆ ಈ ಕುರಿತು ಸತ್ಯಾಸತ್ಯ ತಿಳಿಸುವ ವರದಿಯನ್ನು 'ಇಂಡಿಯಾ ಟುಡೆ' ಪ್ರಕಟಿಸಿದ್ದು, ಜಗನ್ ಹಿಂದುವಾಗಿ ಮತಾಂತರವಾಗಿದ್ದು ಸುಳ್ಳುಸುದ್ದಿ ಎಂದು ಅದು ಹೇಳಿದೆ.
ಜಗನ್ ರೆಡ್ಡಿ ಆವರು ಹೋಮವೊಂದರಲ್ಲಿ ಪಾಲ್ಗೊಂಡಿರುವ ವಿಡಿಯೋವನ್ನು ಮನೋಜ್ ನಾಯರ್ ಎಂಬುವವರು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದರು. ಆ ವಿಡಿಯೋ ಪೋಸ್ಟ್ ಆದ ಕೆಲವೇ ಸಮಯದಲ್ಲಿ ಸಾವಿರಾರು ಜನ ಅದನ್ನು ಶೇರ್ ಮಾಡಿದ್ದರು.

ಹತ್ತು ನಿಮಿಷದ ಈ ವಿಡಿಯೋದಲ್ಲಿ ಪುರೋಹಿತರೊಬ್ಬರು ಜಗನ್ ಅವರಿಗೆ ಕೆಲವು ಸೂಚನೆಗಳನ್ನು ನೀಡುತ್ತಿದ್ದು, ಅವರು ಅದನ್ನು ಪಾಲಿಸುತ್ತಿರುವ ದೃಶ್ಯ ಸೆರೆಯಾಗಿತ್ತು. ಇದನ್ನೇ ಮತಾಂತರದ ಕ್ಷಣಗಳು ಎಂದು ಹೇಳಲಾಗಿತ್ತು. ಆದರೆ ಇಂಡಿಯಾ ಟುಡೆ ಈ ಕುರಿತು ಮಾಹಿತಿ ಕಲೆ ಹಾಕಿದ್ದು, ಈ ವಿಡಿಯೋ ಆಗಸ್ಟ್ 10, 2016 ರಲ್ಲಿ ಹೃಷಿಕೇಶದಲ್ಲಿ ಚಿತ್ರೀಕರಿಸಿದ್ದು ಎಂಬುದು ತಿಳಿದುಬಂದಿದೆ. ಇದು ಮತಾಂತರದ ವಿಡಿಯೋವು ಅಲ್ಲ ಎಂದು ಅದು ಸ್ಪಷ್ಟಪಡಿಸಿದೆ.
ಫಲಿತಾಂಶದ ನಂತರ ಚಾನೆಲ್ ವೊಂದಕ್ಕೆ ನೀಡಿದ ಸಂದರ್ಶನದ ಸಮಯದಲ್ಲಿ ಜಗನ್ ಅವರು, "ನಾನು ಬೈಬಲ್ ಓದುತ್ತೇನೆ. ದೇವರು ಎಲ್ಲವನ್ನೂ ನಿರ್ಧರಿಸುತ್ತಾನೆ" ಎಂದಿದ್ದರು.












Click it and Unblock the Notifications