ವಿಶಾಖಪಟ್ಟಣಂನಲ್ಲಿ ಗ್ಯಾಸ್ ಸೋರಿಕೆ; 2 ಸಾವು

ಅಮರಾವತಿ, ಜೂನ್ 30: ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ಮತ್ತೆ ಅನಿಲ ಸೋರಿಕೆ ಪ್ರಕರಣ ನಡೆದಿದೆ. ಫಾರ್ಮಸಿಟಿಕಲ್ ಕಂಪನಿಯೊಂದರಿದ ಗ್ಯಾಸ್ ಸೋರಿಕೆಯಾಗಿದ್ದು, ಇಬ್ಬರು ಮೃತಪಟ್ಟಿದ್ದಾರೆ.

ಮಂಗಳವಾರ ಮುಂಜಾನೆ ವಿಶಾಖಪಟ್ಟಣಂನಲ್ಲಿ ಗ್ಯಾಸ್ ಸೋರಿಕೆ ಪ್ರಕರಣ ಬೆಳಕಿಗೆ ಬಂದಿದೆ. ಪಾರವಾಡ ಬಳಿ ಇರುವ ಕಾರ್ಖಾನೆಯಿಂದ ಅನಿಲ ಸೋರಿಕೆಯಾಗಿದ್ದು, ನಾಲ್ವರು ಅಸ್ವಸ್ಥಗೊಂಡಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

 Gas Leak In Visakhapatnam Two Dead

Sainar Life Sciences Pharma ಎಂಬ ಕಾರ್ಖಾನೆಯಿಂದ ಅನಿಲ ಸೋರಿಕೆಯಾಗಿದೆ. ತಕ್ಷಣ ಕಾರ್ಖಾನೆಯನ್ನು ಮುಚ್ಚಲಾಗಿದೆ. ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.

"Sainar Life Sciences Pharma ಕಂಪನಿಯಲ್ಲಿ ಅನಿಲ ಸೋರಿಕೆಯಾದ ಪ್ರಕರಣದ ಬಗ್ಗೆ ಮಾಹಿತಿ ಪಡೆಯಲಾಗಿದೆ. ಸೋಮವಾರ ರಾತ್ರಿ 11.30ರ ಸುಮಾರಿಗೆ ಘಟನೆ ನಡೆದಿದೆ. ತಕ್ಷಣ ಕಾರ್ಖಾನೆಯನ್ನು ಮುಚ್ಚಲಾಗಿದ್ದು, ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ" ಎಂದು ಮುಖ್ಯಮಂತ್ರಿಗಳ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.

ಮೇ ತಿಂಗಳಿನಲ್ಲಿ ವಿಶಾಖಪಟ್ಟಣಂನಲ್ಲಿ ಗ್ಯಾಸ್ ಸೋರಿಕೆ ಆಗಿತ್ತು. ವಿಷಾನಿಲ ಸೋರಿಕೆಯಿಂದಾಗಿ 10 ಜನರು ಸಾವನ್ನಪ್ಪಿದ್ದರು. 1 ಸಾವಿರಕ್ಕೂ ಅಧಿಕ ಜನರು ಆಸ್ಪತ್ರೆಗೆ ದಾಖಲಾಗಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+