ನಡೆದುಕೊಂಡು ತಿರುಪತಿ ಬೆಟ್ಟ ಹತ್ತಿ ದರ್ಶನ ಪಡೆದ ರಾಹುಲ್‌ ಗಾಂಧಿ

ತಿರುಪತಿ, ಫೆಬ್ರವರಿ 22: ಇಂದು ಆಂಧ್ರ ಪ್ರದೇಶಕ್ಕೆ ಭೇಟಿ ನೀಡಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಇಂದು ನಡೆದುಕೊಂಡೆ ತಿರುಪತಿ ಬೆಟ್ಟ ಹತ್ತಿ ದೇವರ ದರ್ಶನ ಪಡೆದರು.

ಬೆಳಿಗ್ಗೆ ತಿರುಪತಿಗೆ ಬಂದ ಅವರು ಸುಮಾರು 10 ಕಿ.ಮೀ ದೇವಸ್ಥಾನದ ಮೆಟ್ಟಿಲನ್ನು ನಡೆದುಕೊಂಡೇ ಹತ್ತಿದರು. ಈ ಹತ್ತು ಕಿ.ಮೀ ದೂರವನ್ನು ರಾಹುಲ್ ಅವರು ನಾಲ್ಕು ಗಂಟೆಗಳನ್ನು ಕ್ರಮಿಸಿದರು.

AICC president Rahul Gandhi climbed Tirupathi hill

ಬೆಟ್ಟ ಹತ್ತಿ ಅಲಿಪಿರಿಗೆ ತಲುಪಿ ಟಿಟಿಡಿ (ಟಿರುಮಲ ತಿರುಪತಿ ದೇವಸ್ಥಾನ) ಅತಿಥಿ ಗೃಹದಲ್ಲಿ ಕೂತು ಕೆಲ ಕಾಲ ದಣಿವಾರಿಸಿಕೊಂಡರು. ನಂತರ ವೆಂಕಟೇಶ್ವರ ಸ್ವಾಮಿ ದರ್ಶನಕ್ಕೆ ತೆರಳಿದರು.

ತಿರುಪತಿ ದೇವಸ್ಥಾನದ ಆಡಳಿತ ಮಂಡಳಿ ರಾಹುಲ್ ಗಾಂಧಿ ಅವರನ್ನು ಗೌರವದಿಂದ ಸ್ವಾಗತಿಸಿತು. ಶಾಲೂ, ಹಾರದ ಜೊತೆಗೆ ವೆಂಕಟೇಶ್ವರ ಸ್ವಾಮಿ ಮೂರ್ತಿಯ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು.

AICC president Rahul Gandhi climbed Tirupathi hill

20 ನಿಮಿಷಗಳು ಮಾತ್ರವೇ ರಾಹುಲ್ ಗಾಂಧಿ ಬೆಟ್ಟದ ಮೇಲೆ ಇದ್ದರು, ನಂತರ ಅವರು ವೆಂಕಟೇಶ್ವರ ವಿವಿಯಲ್ಲಿ ಆಯೋಜಿಸಿದ್ದ ಬೃಹತ್ ಕಾಂಗ್ರೆಸ್ ಸಮಾವೇಶದಲ್ಲಿ ಭಾಗವಹಿಸಲು ತೆರಳಿದರು. ವಾಹನದಲ್ಲಿ ಬೆಟ್ಟದಿಂದ ಕೆಳಗೆ ಇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+