ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

18 ದಿನ ವೆಂಟಿಲೇಟರ್‌ನಲ್ಲಿದ್ದ 4 ತಿಂಗಳ ಮಗು ಕೊರೊನಾ ಸೋಂಕಿನಿಂದ ಗುಣಮುಖ

|
Google Oneindia Kannada News

ವಿಶಾಖಪಟ್ಟಣ, ಜೂನ್ 13: ಕೊವಿಡ್ 19 ರೋಗದಿಂದಾಗಿ 18 ದಿನಗಳ ಕಾಲ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 4 ತಿಂಗಳ ಮಗು ಚೇತರಿಸಿಕೊಂಡಿದ್ದು ಮನೆಗೆ ಕಳುಹಿಸಲಾಗಿದೆ.

Recommended Video

Haveri people neglect all the rules and participate in Bandi Run | Haveri | Oneindia Kannada

ಮೇ 25 ರಂದು ಮಗುವನ್ನು ಪೂರ್ವ ಗೋದಾವರಿ ಜಿಲ್ಲಾಸ್ಪತ್ರೆಯಿಂದ ವಿಶಾಖಪಟ್ಟಣದ ವಿಮ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ವೈದ್ಯರು ಇತ್ತೀಚೆಗೆ ಮತ್ತೊಮ್ಮೆ ಪರೀಕ್ಷೆ ನಡೆಸಿದಾಗ ಸೋಂಕು ಇಲ್ಲದಿರುವುದು ದೃಢಪಟ್ಟಿದೆ.

ಸಾಕಷ್ಟು ಬಾರಿ ಆರೋಗ್ಯ ತಪಾಸಣೆ ನಡೆಸಿದ ಬಳಿಕ ವಿಮ್ಸ್ ಆಸ್ಪತ್ರೆ ವೈದ್ಯರು ಜೂನ್ 12 ರಂದು ಸಂಜೆ ಮಗುವನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿದ್ದಾರೆ ಎಂದು ಜಿಲ್ಲಾಧಿಕಾರಿ ವಿನಯ್ ಚಂದ್ ಮಾಹಿತಿ ನೀಡಿದ್ದಾರೆ.

4 Month Old Recovers From COVID-19 Discharged From Vizag Hospital

ವಿಶಾಖಪಟ್ಟಣದಲ್ಲಿ ಈಗ ಒಟ್ಟು 252 ಕೊರೊನಾ ಸೋಂಕಿತ ಪ್ರಕರಣಗಳಿವೆ.ಪೂರ್ವ ಗೋದಾವರಿ ಜಿಲ್ಲೆಯ ಬುಡಕಟ್ಟು ಮಹಿಳೆಗೆ ಕೊರೊನಾ ವೈರಸ್ ಪಾಸಿಟಿವ್ ಬಂದಿತ್ತು. ಬಳಿಕ ಆಕೆಯ ಮಗುವನ್ನು ಪರೀಕ್ಷಿಸಿದಾಗ ಮಗುವಿಗೂ ಸೋಂಕು ತಗುಲಿರುವುದು ದೃಢಪಟ್ಟಿತ್ತು.

ತಮಿಳುನಾಡಿನಲ್ಲಿ 1562 ಕೊರೊನಾ ಕೇಸ್, ಪಂಜಾಬ್‌ನಲ್ಲಿ 8 ತಿಂಗಳು ಮಗು ಸಾವುತಮಿಳುನಾಡಿನಲ್ಲಿ 1562 ಕೊರೊನಾ ಕೇಸ್, ಪಂಜಾಬ್‌ನಲ್ಲಿ 8 ತಿಂಗಳು ಮಗು ಸಾವು

ಆಂಧ್ರಪ್ರದೇಶದಲ್ಲಿ 5429 ಕೊರೊನಾ ಸೋಂಕಿತ ಪ್ರಕರಣಗಳಿದ್ದು, 3048 ಮಂದಿ ಗುಣಮುಖರಾಗಿದ್ದು, 80 ಮಂದಿ ಮೃತಪಟ್ಟಿದ್ದಾರೆ. ಆಂಧ್ರದಲ್ಲಿ ಸರ್ಕಾರಿನೌಕರರಲ್ಲೂ ಕೂಡ ಸೋಂಕು ಹೆಚ್ಚಾಗುತ್ತಿದ್ದು, ಆತಂಕ ವ್ಯಕ್ತವಾಗಿದೆ. ಬಿಆರ್‌ಕೆಆರ್ ಭವನ, ಜಿಎಚ್‌ಎಂಸಿ ಕಚೇರಿಯಲ್ಲಿ ಇಬ್ಬರಿಗೆ ಕೊರೊನಾ ಸೋಂಕು ತಗುಲಿದೆ.

English summary
A Four month old baby who was on ventilator treatment for 18 days for COVID19 was o Friday evening discharged from hospital after testing negative.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X