ನನಗೆ ಮತ ಹಾಕಿಲ್ಲ, ನಿಮಗೆ ನೀರು ಕೊಡಲ್ಲ: ಗುಜರಾತ್ ಬಿಜೆಪಿ ಮಂತ್ರಿ
ಅಹ್ಮದಾಬಾದ್, ಏಪ್ರಿಲ್ 15: ಕುಡಿಯಲು ನೀರು ಕೇಳಿದ ಮಹಿಳೆಯರ ಮೇಲೆ ಗುಜರಾತ್‌ನ ನೀರಾವರಿ ಮಂತ್ರಿಯೇ ಜೋರು ಮಾಡಿ ಸುಮ್ಮನಾಗಿಸಿದ ಘಟನೆ ನಡೆದಿದೆ.
ಲೋಕಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಪತ ಮತಕೇಳಲು ಬಿಜೆಪಿ ನೀರಾವರಿ ಮಂತ್ರಿ ಕುನ್ವರ್ಜಿ ಬವಾಲಿಯಾ ಅವರನ್ನು ಕೆಲವು ಮಹಿಳೆಯರು ಅಡ್ಡಗಟ್ಟಿ ನಮಗೆ ಕುಡಿಯಲು ನೀರು ಕೊಡಿ ಎಂದು ಆಗ್ರಹಿಸಿದ್ದಾರೆ.
ಮಹಿಳೆಯರ ಆಗ್ರಹಕ್ಕೆ ಸಿಟ್ಟಿಗೆದ್ದ ಸಚಿವ, ನಾನು ಎಷ್ಟು ನಿಮ್ಮನ್ನು ಬೇಡಿಕೊಂಡರೂ ಕೇವಲ 55% ಮತಗಳನ್ನಷ್ಟೆ ನೀವು ನೀಡಿದ್ದೀರಿ, ಹಾಗಾಗಿ ನೀವು ಮತಹಾಕಿದಂತೆಯೇ ನಿಮಗೆ ಕಡಿಮೆ ನೀರು ಕೊಡುತ್ತಿದ್ದೇವೆ ಎಂದು ದರ್ಪದ ಉತ್ತರ ನೀಡಿದ್ದಾರೆ.

ಸಚಿವರ ಉತ್ತರಕ್ಕೆ ಮಹಿಳೆಯರು ಕಂಗಾಲಾಗಿದ್ದಾರೆ. ಮತ ಹಾಕಿದವರು, ಹಾಕದವರು ಯಾರೇ ಆಗಲಿ ಮೂಲಭೂತ ಸೌಕರ್ಯಗಳು ಸೇರಿದಂತೆ ಎಲ್ಲ ಅಭಿವೃದ್ಧಿ ಯೋಜನೆಗಳಿ ಸಮಾನವಾಗಿ ಹಂಚಿಕೆ ಆಗಬೇಕು ಆದರೆ ಗುಜರಾತ್‌ನ ಈ ಮಂತ್ರಿ ಅದರಲ್ಲಿ ತಾರತಮ್ಯ ತೋರುತ್ತಿದ್ದಾರೆ.
ಮಂತ್ರಿ ಕುನ್ವರ್ಜಿ ಬವಾಲಿಯಾ ಮಹಿಳೆಗೆ ಆವಾಜ್ ಹೊಡೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮಂತ್ರಿಯ ಮಾತು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.
ಕುನ್ವರ್ಜಿ ಬವಾಲಿಯಾ ಅವರು ಕಾಂಗ್ರೆಸ್‌ನಿಂದ ಚುನಾವಣೆಗೆ ಸ್ಪರ್ಧಿಸಿ ಗೆದ್ದು ನಂತರ ಬಿಜೆಪಿ ಸೇರಿ ಜಲಸಂಪನ್ಮೂಲ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.












Click it and Unblock the Notifications