ರಾಹುಲ್ ಗಾಂಧಿ ವಿಷ ಕುಡಿಯಲಿ: ಗುಜರಾತ್ ಬಿಜೆಪಿ ಸಚಿವ
ಗಾಂಧಿ ನಗರ, ಮಾರ್ಚ್ 26: ರಾಹುಲ್ ಗಾಂಧಿ ಅವರು ವಿಷ ಕುಡಿದು, ಬದುಕಿ ತೋರಿಸಲಿ ಎಂದು ಗುಜರಾತ್ ಸಚಿವ ಶಿವ ಧಾರೆ ಎಂಬುವರು ವಿಚಿತ್ರ ಆಗ್ರಹ ಮಾಡಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ರಾಹುಲ್ ಗಾಂಧಿ ಅವರು ಶಿವನ ಅವತಾರ ಎಂದು ಗುಜರಾತ್‌ನ ಕಾಂಗ್ರೆಸ್ ಮುಖಂಡರೊಬ್ಬರು ಹೇಳಿದ್ದರು, ಇದಕ್ಕೆ ಪ್ರತಿಕ್ರಿಯೆ ನೀಡುವ ಸಮಯ ಶಿವ ಧಾರೆ ಅವರು ಹೀಗೆ ಹೇಳಿದ್ದಾರೆ.
ರಾಹುಲ್ ಗಾಂಧಿ ಶಿವನ ಅವತಾರ ಎಂದು ಸಾಬೀತು ಮಾಡಬೇಕಾದರೆ ಅವರು 500 ಗ್ರಾಂ ವಿಷ ಕುಡಿಯಲಿ ಎಂದು ಅವರು ಹೇಳಿದ್ದಾರೆ. ಬಿಜೆಪಿ ಸಚಿವನ ಈ ಹೇಳಿಕೆ ಗುಜರಾತ್ ಕಾಂಗ್ರೆಸ್ ಮುಖಂಡರನ್ನು ಕೆರಳಿಸಿದೆ.

ಬಿಜೆಪಿ ಸಚಿವರ ಈ ಹೇಳಿಕೆ ಅವರ ಪಕ್ಷದ ಸಂಸ್ಕೃತಿಯನ್ನು ತೋರಿಸುತ್ತದೆ ಎಂದು ಗುಜರಾತ್ ಕಾಂಗ್ರೆಸ್ ಮುಖಂಡರು ಹೇಳಿದ್ದಾರೆ.
ಶಿವ ಧಾರೆ ಈ ಮುಂಚೆಯೂ ಈ ರೀತಿಯ ಹೇಳಿಕೆಗಳನ್ನು ನೀಡಿದ್ದರು. ಬಾಲಾಕೋಟ್ ದಾಳಿಗೆ ಸಾಕ್ಷ್ಯ ಕೇಳಿದ ಕಾಂಗ್ರೆಸ್ ನಾಯಕರನ್ನು ಯುದ್ಧ ವಿಮಾನಗಳ ಮುಂದೆ ಕಟ್ಟಿ ಅವರ ಹಣೆಗೆ ಕ್ಯಾಮೆರಾ ಫಿಕ್ಸ್ ಮಾಡಬೇಕು ಎಂದು ಹೇಳಿದ್ದರು.












Click it and Unblock the Notifications